ETV Bharat / state

ನನ್ನ ಮಿತ್ರ ಸಿಎಂ ಆಗಿದ್ದು ನನಗೆ ಪರಮಾನಂದವಾಗಿದೆ : ಮಾಜಿ ಸಚಿವ ರಮೇಶ್​ ಜಾರಕಿಹೊಳಿ

ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಪೂರ್ಣ ಪ್ರಮಾಣದ ಬಹುಮತದೊಂದಿಗೆ 2023ರಲ್ಲಿ ಸರ್ಕಾರ ತರುವ ಗುರಿ ಇದೆ. ದೆಹಲಿಯಲ್ಲಿ ಯಾವ ವರಿಷ್ಠರನ್ನು ಭೇಟಿಯಾಗಿಲ್ಲ, ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ‌..

ramesh-jarkiholi-statement-on-new-cabinet-and-cm
ರಮೇಶ್​ ಜಾರಕಿಹೊಳಿ
author img

By

Published : Aug 13, 2021, 9:10 PM IST

ಬೆಳಗಾವಿ : ನನ್ನ ಮಿತ್ರ ಬಸವರಾಜ ಬೊಮ್ಮಾಯಿ ಸಿಎಂ ಆಗಿರೋದು ನಾನೇ ಮುಖ್ಯಮಂತ್ರಿಯಾದಷ್ಟು ಸಂತೋಷವಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.

ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಕ್ಕೆ ಸಂತೋಷವಾಗಿದೆ. ನಾನೇ ಸಿಎಂ ಆದ ಹಾಗೇ ಆಗಿದೆ ಎಂದರು.

ನೂತನ ಸಿಎಂ ಹಾಗೂ ಸಚಿವ ಸಂಪುಟ ಕುರಿತು ರಮೇಶ್​ ಜಾರಕಿಹೊಳಿ ಪ್ರತಿಕ್ರಿಯೆ..

ಎಲ್ಲರೂ ಸಂತೋಷವಾಗಿದ್ದೇವೆ : ಮಿತ್ರ ಮಂಡಳಿ ಸದಸ್ಯರಿಗೆ ಸಚಿವ ಸ್ಥಾನ ನೀಡದ ವಿಚಾರವಾಗಿ, ನಾಳೆ ಅಥಣಿಗೆ ಹೋಗಿ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುತ್ತದೆ‌. ನಾವು ಯಾರೂ ಅಸಮಾಧಾನಗೊಂಡಿಲ್ಲ, ಎಲ್ಲರೂ ಸಂತೋಷವಾಗಿದ್ದೇವೆ ಎಂದರು.

ಹೈಕಮಾಂಡ್​ ನಿರ್ಧಾರಕ್ಕೆ ಬದ್ಧ : ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿ, ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. 2023ರ ಚುನಾವಣೆಗೆ ತಯಾರಿ ಮಾಡ್ತಿದ್ದೇವೆ.

ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಪೂರ್ಣ ಪ್ರಮಾಣದ ಬಹುಮತದೊಂದಿಗೆ 2023ರಲ್ಲಿ ಸರ್ಕಾರ ತರುವ ಗುರಿ ಇದೆ. ದೆಹಲಿಯಲ್ಲಿ ಯಾವ ವರಿಷ್ಠರನ್ನು ಭೇಟಿಯಾಗಿಲ್ಲ, ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ‌ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.