ETV Bharat / state

ಹೆಚ್.ವಿಶ್ವನಾಥ್ ಅನರ್ಹತೆ ಬಗ್ಗೆ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ: ಸಚಿವ ರಮೇಶ್ ಜಾರಕಿಹೊಳಿ

author img

By

Published : Dec 1, 2020, 2:51 PM IST

Updated : Dec 1, 2020, 3:45 PM IST

ಈಗಾಗಲೇ ಬೆಂಗಳೂರು ಹಾಗೂ ದೆಹಲಿ ವಕೀಲರ ಜತೆ ಮಾತನಾಡಿದ್ದೇನೆ. ಈ ಆದೇಶದ ವಿರುದ್ಧವೂ ನಾವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತೇವೆ. ಎಲ್ಲ ಮಿತ್ರಮಂಡಳಿ ಶಾಸಕರು, ಬಿಜೆಪಿ ಶಾಸಕರು ಸೇರಿಯೇ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

Ramesh Jarkiholi standing for H.Vishwanath
ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ

ಚಿಕ್ಕೋಡಿ/ಬೆಳಗಾವಿ: ಹೆಚ್.ವಿಶ್ವನಾಥ್ ಅನರ್ಹತೆ ಬಗ್ಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ‌ ತಿಳಿಸಿದರು.

ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬೆಂಗಳೂರು ಹಾಗೂ ದೆಹಲಿ ವಕೀಲರ ಜತೆ ಮಾತನಾಡಿದ್ದೇನೆ. 17 ಶಾಸಕರ ಅನರ್ಹತೆ ಬಗ್ಗೆ ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಈ ಆದೇಶದ ವಿರುದ್ಧವೂ ನಾವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತೇವೆ. ಎಲ್ಲ ಮಿತ್ರಮಂಡಳಿ ಶಾಸಕರು, ಬಿಜೆಪಿ ಶಾಸಕರು ಸೇರಿಯೇ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಸರ್ಕಾರ ಹಾಗೂ ಬಿಜೆಪಿಯ ಕೆಲ ನಾಯಕರ ವಿರುದ್ಧ ಹೆಚ್.ವಿಶ್ವನಾಥ್ ಏನು ಹೇಳಿಕೆ ನೀಡಿದ್ದಾರೆ ಗೊತ್ತಿಲ್ಲ. ಸಂಪುಟ ಪುನಾರಚನೆ ಮಾಡುವ ಪರಮಾಧಿಕಾರ ಸಿಎಂ ಹೊಂದಿದ್ದಾರೆ. ಅವರು ಸಮಯ ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಮಹಾದಾಯಿ ಯೋಜನೆ ಸೂಕ್ಷ್ಮ ವಿಚಾರ:

ಮಹಾದಾಯಿ ಯೋಜನೆ ಸೂಕ್ಷ್ಮ ವಿಚಾರ. ಆ ಬಗ್ಗೆ ಹೆಚ್ಚೇನೂ ಕೇಳಬೇಡಿ. ರಾಜ್ಯದ ಹಿತಾಸಕ್ತಿ ಬಗ್ಗೆ ನನಗೆ ಅರಿವಿದೆ. ಗೋವಾ ಸಿಎಂ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.

ದಿಲ್ಲಿ ಲಾಬಿಗಿಬಿ ಯಾವುದೂ ಇಲ್ಲ :

ನಾನು ಯೋಗೇಶ್ವರ್​ ಕಳೆದ 20 ವರ್ಷಗಳಿಂದಲೂ ಮಿತ್ರರೇ. ದಿಲ್ಲಿ ಲಾಬಿಗಿಬಿ ಯಾವುದೂ ಇಲ್ಲ ನಮಗೆ, ಎಲ್ಲವೂ ಒಂದೇ. ನಾನು ಮೊದಲ ಬಾರಿ ಶಾಸಕನಾದಾಗಿನಿಂದಲೂ ನಾವಿಬ್ಬರೂ ಮಿತ್ರರು ಎಂದು ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ:ಸರ್ಕಾರದ ವಿರುದ್ಧ ಹೆಚ್.ವಿಶ್ವನಾಥ್ ಗರಂ: ಪ್ರತಿಕ್ರಿಯೆ ನೀಡಲು ಗೃಹ ಸಚಿವ ಬೊಮ್ಮಾಯಿ ನಕಾರ

ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್, ಯೋಗೇಶ್ವರ್ ಹಾಗೂ ನಾನು ಒಂದೇ ಆಗಿದ್ದೇವೆ. ಈಗ ಬೇರೆ ಸಂದರ್ಭ. ಏನೇ ಇರಲಿ ವಿಶ್ವನಾಥ್ ಪರವಾಗಿ ನಾವು ಇದ್ದೇವೆ. ಕಾನೂನು ಹೋರಾಟದಲ್ಲಿ ನಮಗೂ ಕಣ್ಣೀರು ಬಂದಿದೆ ಎಂದು ಹೇಳಿದರು.

ಸಾ.ರಾ.ಮಹೇಶ್​ಗೆ ತಿರುಗೇಟು:

ವಿಶ್ವನಾಥ್ ಅವರಿಗೆ ಚಾಮುಂಡೇಶ್ವರಿ ಶಾಪ ತಟ್ಟಿದೆ ಎಂಬ ಮಹೇಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾ.ರಾ.ಮಹೇಶ್​ ಮನುಷ್ಯನಾಗಿ ಈ ರೀತಿ ಹೇಳಬಾರದು. ನಮ್ಮ ವೈರಿಗೂ ಕೆಟ್ಟದಾದರೆ ಸಹಾನುಭೂತಿ ವ್ಯಕ್ತಪಡಿಸಿಸುತ್ತೇವೆ. ಸಾ.ರಾ.ಮಹೇಶ್ ಈ ಮಟ್ಟಿಗೆ ಮಾತನಾಡುತ್ತಾರೆ ಅಂದ್ರೆ ಅವರು ರಾಜಕಾರಣಕ್ಕೆ ಲಾಯಕ್ ಇಲ್ಲ ಎಂದರು.

ಇದನ್ನೂ ಓದಿ:ಪೂರ್ಣ ಪ್ರಮಾಣದ ಅವಧಿಗೆ ಬಿಎಸ್​ವೈ ಸಿಎಂ ಆಗಿರುತ್ತಾರೆ : ಸಚಿವ ಬಸವರಾಜ ಬೊಮ್ಮಾಯಿ

ಎಷ್ಟೇ ಕಷ್ಟ ಬಂದ್ರು ನಾವು ಹೆಚ್.ವಿಶ್ವನಾಥ್ ಪರ:

ನಾವು ಮೂಲ ಆದೇಶವನ್ನೇ ಚಾಲೆಂಜ್ ಮಾಡಲಿದ್ದೇವೆ. ಸುಪ್ರೀಂ ಕೋರ್ಟ್​ನಲ್ಲೇ ಹೈಕೋರ್ಟ್ ಆದೇಶ ಚಾಲೆಂಜ್ ಮಾಡುತ್ತೇವೆ. ಎಷ್ಟೇ ಕಷ್ಟ ಬಂದ್ರು ನಾವು ಹೆಚ್.ವಿಶ್ವನಾಥ್ ಪರವಾಗಿ ಇರುತ್ತೇವೆ ಎಂದು ಹೇಳಿದರು.

Last Updated : Dec 1, 2020, 3:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.