ETV Bharat / state

ಚಿಕ್ಕೋಡಿ ಜಿಲ್ಲೆ ಬಗ್ಗೆ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ: ಬಿ.ಆರ್.ಸಂಗಪ್ಪಗೋಳ

ರಮೇಶ್ ಜಾರಕಿಹೊಳಿ ಇದ್ದಿದ್ದು ಇದ್ದಂತೆ ಮಾತನಾಡುವ ಸ್ವಭಾವದವರು. ಇಲ್ಲ ಅಂದರೆ ಇಲ್ಲ, ಹೂಂ ಅಂದರೆ ಹೂಂ ಎನ್ನುವ ಮಾತುಗಳನ್ನು ರಮೇಶ್ ಮಾತನಾಡುತ್ತಾರೆ..

B r sangappagol
ಬಿ.ಆರ್.ಸಂಗಪ್ಪಗೋಳ
author img

By

Published : Aug 30, 2020, 2:26 PM IST

Updated : Aug 30, 2020, 4:35 PM IST

ಚಿಕ್ಕೋಡಿ : ಕೊರೊನಾ ಸೋಂಕಿನ ಪ್ರಭಾವ ಕಡಿಮೆಯಾದ ಬಳಿಕ ಚಿಕ್ಕೋಡಿ ಜಿಲ್ಲೆಯ ಬಗ್ಗೆ ಸಿಎಂ ಅವರ ಬಳಿ ಚರ್ಚೆ ಮಾಡುವೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಆಶ್ವಾಸನೆ ನೀಡಿದ್ದಾರೆ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಹೇಳಿದ್ದಾರೆ.

ಚಿಕ್ಕೋಡಿ ಪ್ರವಾಸ ಮಂದಿರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಚಿಕ್ಕೋಡಿ ಜಿಲ್ಲೆ ಮಾಡಲು ಯಾರು ಯಾರು ರಾಜಕಾರಣ‌ ಮಾಡಿದ್ದಾರೆ ನನಗೆ ಗೊತ್ತು. ನಾಟಕದ ಮಾತು ಹಾಗೂ ಸ್ವಚ್ಛ ಮಾತು ನನಗೆ ಅರ್ಥವಾಗುತ್ತದೆ. ಇವರಿಗೆ ರಾಜಕಾರಣ ಕಲಿಸಿದವನು ನಾನು. ಆದರೆ, ರಮೇಶ್ ಜಾರಕಿಹೊಳಿ ಇದ್ದಿದ್ದು ಇದ್ದಂತೆ ಮಾತನಾಡುವ ಸ್ವಭಾವದವರು. ಇಲ್ಲ ಅಂದರೆ ಇಲ್ಲ, ಹೂಂ ಅಂದರೆ ಹೂಂ ಎನ್ನುವ ಮಾತುಗಳನ್ನು ರಮೇಶ್ ಮಾತನಾಡುತ್ತಾರೆ. ಇವರ ಮಾತುಗಳನ್ನ ಕೇಳಿದರೆ ಬಹುತೇಕ ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹೇಳಿದರು.

ಬಿ.ಆರ್.ಸಂಗಪ್ಪಗೋಳ

ಚಿಕ್ಕೋಡಿಯಲ್ಲಿ 500 ಹಾಸಿಗೆಯಳ್ಳ ಸಿವಿಲ್ ಆಸ್ಪತ್ರೆ ಮಾಡಿ ಎಂದು ಸಚಿವ ರಮೇಶ್ ಜಾರಕಿಹೊಳಿ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ವಿನಂತಿ ಮಾಡಿಕೊಂಡಿದ್ದೇನೆ. ಈ ಭಾಗದ ಶಾಸಕರು, ಸಚಿವರು, ಉಸ್ತುವಾರಿ ಸಚಿವರ ಮೇಲೆ ಒತ್ತಡ ತಂದರೆ ಚಿಕ್ಕೋಡಿಯಲ್ಲಿ 500 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ ಮಾಡಲು ಸಾಧ್ಯ. ಇದರಿಂದ ಅಥಣಿ, ಕಾಗವಾಡ, ರಾಯಬಾಗ, ನಿಪ್ಪಾಣಿ ಹಾಗೂ ಹುಕ್ಕೇರಿ ತಾಲೂಕಿನ ಗ್ರಾಮೀಣ ಜನರಿಗೆ ಅನಕೂಲವಾಗಬಹುದು ಎಂದರು.

ಬೆಳಗಾವಿ ಜಿಲ್ಲೆಯಲ್ಲಿ 11 ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ಎರಡು ಲಕ್ಷಕ್ಕೂ ಅಧಿಕ ಜಮೀನುಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ. 8.5 ಟಿಎಂಸಿ ಸಾಮರ್ಥ್ಯದ ಯೋಜನೆ ಇದಾಗಿದೆ. ಈಗಾಗಲೇ ಸರ್ವೆ ಮಾಡಲು ಏಜೆನ್ಸಿ ಗುರ್ತಿಸಲಾಗಿದೆ. ಇದೊಂದು ಇತಿಹಾಸ. ಈವರೆಗೆ ಇಂತಹ ದೊಡ್ಡ ಯೋಜನೆಯನ್ನು ಯಾರೂ ಮಾಡಿಲ್ಲ ಎಂದು ಸಂಗಪ್ಪಗೋಳ ಹೇಳಿದ್ದಾರೆ.

Last Updated : Aug 30, 2020, 4:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.