ಬೆಳಗಾವಿ: ಮತ್ತೆ ಸಚಿವ ಸಂಪುಟ ಸೇರಲು ರಮೇಶ್ ಜಾರಕಿಹೊಳಿ ಶತಾಯಗತಾಯ ಕಸರತ್ತು ಆರಂಭಿಸಿದ್ದಾರೆ. ಸಚಿವ ಸ್ಥಾನಕ್ಕಾಗಿ ದೆಹಲಿ ಯಾತ್ರೆ ಕೈಗೊಂಡಿರುವ ಅವರು, ವರಿಷ್ಠರ ಭೇಟಿಗೆ ಮುಂದಾಗಿದ್ದಾರೆ. ಈ ನಡುವೆ ಹಲವು ದೇವಾಲಯಗಳಿಗೂ ಭೇಟಿ ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಅವರು ಉತ್ತರಾಖಂಡಕ್ಕೆ ಭೇಟಿ ಕೊಟ್ಟಿದ್ದು ಐತಿಹಾಸಿಕ ಕೇದಾರನಾಥ, ಬದ್ರಿನಾಥ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ರಮೇಶ್ ಜಾರಕಿಹೊಳಿ ಕೇದಾರನಾಥ, ಬದ್ರಿನಾಥನ ದರ್ಶನ ಪಡೆದಿದ್ದಾರೆ.
![ramesh-jarakiholi-visits-the-badrinath-and-kedarnath-temple](https://etvbharatimages.akamaized.net/etvbharat/prod-images/kn-bgm-01-13-ramesh-jarkiholi-temples-run-7201786_13102021091138_1310f_1634096498_772.jpg)
ರಮೇಶ್ ಜಾರಕಿಹೊಳಿಗೆ ಪುತ್ರ ಅಮರನಾಥ ಜಾರಕಿಹೊಳಿ, ಅಳಿಯ ಅಂಬಿರಾವ್ ಪಾಟೀಲ್ ಸಾಥ್ ನೀಡಿದ್ದು, ಹೆಲಿಕಾಪ್ಟರ್ ಮೂಲಕ ತೆರಳಿ ದೇವರ ದರ್ಶನ ಪಡೆದಿದ್ದಾರೆ. ಜೊತೆಗೆ ಇಂದು ಸಂಜೆ ಅಥವಾ ನಾಳೆ ಬೆಳಗಾವಿಗೆ ಮರಳುವ ಸಾಧ್ಯತೆ ಇದೆ.
![ramesh-jarakiholi-visits-the-badrinath-and-kedarnath-temple](https://etvbharatimages.akamaized.net/etvbharat/prod-images/kn-bgm-01-13-ramesh-jarkiholi-temples-run-7201786_13102021091138_1310f_1634096498_887.jpg)
ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಸಚಿವ ಸ್ಥಾನ ನೀಡುವಂತೆ ವರಿಷ್ಠರಲ್ಲಿ ಜಾರಕಿಹೊಳಿ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ. ಜಿಪಂ, ತಾಪಂ ಹಾಗೂ ವಿಧಾನ ಪರಿಷತ್ ಚುನಾವಣೆ ಹತ್ತಿರವಾಗುತ್ತಿದೆ. ಕ್ಷೇತ್ರದ ಜನರಿಗೆ ಮರಳಿ ಸಚಿವ ಸ್ಥಾನ ಸಿಗುತ್ತೆ ಎಂಬ ಮಾತು ಕೊಟ್ಟಿದ್ದೆ. ಹೀಗಾಗಿ ಸಚಿವ ಸ್ಥಾನ ನೀಡಿದ್ರೆ ಅನುಕೂಲವಾಗಲಿದೆ ಎಂದು ವರಿಷ್ಠರ ಬಳಿ ರಮೇಶ್ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
![ramesh-jarakiholi-visits-the-badrinath-and-kedarnath-temple](https://etvbharatimages.akamaized.net/etvbharat/prod-images/kn-bgm-01-13-ramesh-jarkiholi-temples-run-7201786_13102021091138_1310f_1634096498_358.jpg)