ETV Bharat / state

ಸಿಎಂ ಬದಲಾವಣೆ ಇಲ್ಲ, ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ: ರಮೇಶ್​ ಜಾರಕಿಹೊಳಿ‌ - Belagavi latest news

ಮುಂದಿನ ಎರಡೂವರೆ ವರ್ಷ ಸಿಎಂ ಆಗಿ ಬಿಎಸ್‌ವೈ ಮುಂದುವರೆಯುತ್ತಾರೆ ಎಂದು ಬೆಳಗಾವಿಯಲ್ಲಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ.

Ramesh Jarakiholi
ರಮೇಶ್​ ಜಾರಕಿಹೊಳಿ‌
author img

By

Published : Dec 26, 2020, 4:05 PM IST

Updated : Dec 26, 2020, 5:08 PM IST

ಬೆಳಗಾವಿ: ಸಿಎಂ ಬದಲಾವಣೆ ಇಲ್ಲ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಪದೇ ಪದೆ ಈ ಬಗ್ಗೆ ಕೇಳದೆ ಈ ವಿಚಾರ ಕ್ಲೋಸ್ ಮಾಡಿ ಬಿಡಿ ಎಂದು ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.

ಸಚಿವ ರಮೇಶ್ ಜಾರಕಿಹೊಳಿ

ಸಂಕ್ರಾಂತಿ ಬಳಿಕ ಉತ್ತರಾಯಣ ಕಾಲದಲ್ಲಿ ಎಲ್ಲವೂ ಬದಲಾಗುತ್ತೆ ಎಂಬ ಯತ್ನಾಳ್ ಹೇಳಿಕೆಗೆ ನಗರದ‌ ಪ್ರವಾಸಿ ಮಂದಿರದಲ್ಲಿ ಪ್ರತಿಕ್ರಿಯೆ ನೀಡಿದ ರಮೇಶ್​, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವೈಯಕ್ತಿಕ ವಿಚಾರವಾಗಿದ್ದು, ಯತ್ನಾಳ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಸಿಎಂ ಬದಲಾವಣೆ ಇಲ್ಲ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಪದೇ ಪದೆ ಈ ಬಗ್ಗೆ ಕೇಳದೇ ಈ ವಿಚಾರ ಕ್ಲೋಸ್ ಮಾಡಿಬಿಡಿ. ಮುಂದಿನ ಎರಡೂವರೆ ವರ್ಷ ಸಿಎಂ ಆಗಿ ಬಿಎಸ್‌ವೈ ಮುಂದುವರೆಯುತ್ತಾರೆ ಈ ಬಗ್ಗೆ ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬೆಂಬಲಿಗರಿಂದ ಕ್ಯಾಲೆಂಡರ್‌ಗಳ ವಿತರಣೆ ವಿಚಾರಕ್ಕೆ, ಕ್ಯಾಲೆಂಡರ್ ವಿತರಣೆ ಮಾಡೋದು ಏನು ಮಹಾ ಅಪರಾಧಾನಾ..? ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಬಿಜೆಪಿ ಪಡೆಯಬೇಕೆಂದು ಸಂಕಲ್ಪ ಮಾಡಿಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಗೆಲ್ಲುವುದು, ಬಿಡುವುದು ಮುಂದಿನ ವಿಚಾರ. ಅದನ್ನು ಮತದಾರರು ನಿರ್ಣಯ ಮಾಡ್ತಾರೆ‌ ಎಂದರು.

ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಮಾತನಾಡಬೇಡ ಅಂತಾ ವಾರ್ನಿಂಗ್ ಇದೆ ಎಂಬ ರಮೇಶ್ ಜಾರಕಿಹೊಳಿ‌ ಹೇಳಿಕೆಗೆ, ಗ್ರಾಮೀಣ ಶಾಸಕಿ ಬಗ್ಗೆ ಮಾತನಾಡಬೇಡ ಅಂತಾ ವರಿಷ್ಠರು ಹೇಳಿದ್ದಾರೆ ಅಂತಾ ನಾನು ಹೇಳಿಲ್ಲ. ನನ್ನ ಹಿತೈಷಿಗಳು ಹೇಳಿದ್ದಾರೆ ಅಂತಾ ಹೇಳಿದ್ದೇನೆ. ನಮ್ಮ ವರಿಷ್ಠರು ಶಾಸಕಿಗೆ ಏನು ಸಂಬಂಧ? ವರಿಷ್ಠರು ಏಕೆ ಹೇಳ್ತಾರೆ?. ನನ್ನ ಹಿತೈಷಿಗಳು ಆಕೆ ಬಗ್ಗೆ ಮಾತನಾಡಬೇಡ ಅಂತಾ ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಹಿತೈಷಿಗಳು ಸಲಹೆ ಕೊಟ್ಟಿದ್ದಕ್ಕೆ ಆಕೆ ಬಗ್ಗೆ ಮಾತನಾಡೋದನ್ನ ಬಿಟ್ಟಿದ್ದೇನೆ. ವರಿಷ್ಠರು ಹೇಳೋಕೆ ಆಕೆ ಏನು ಅಂತಹ ದೊಡ್ಡ ಲೀಡರ್​ ಹಾ?... ಎಂದು ಪರೋಕ್ಷವಾಗಿ ಏಕವಚನದಲ್ಲೇ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ‌ ವಾಗ್ದಾಳಿ ನಡೆಸಿದರು.

ಬಿಜೆಪಿ ಚಿಹ್ನೆ ಮೇಲೆ ಬೆಳಗಾವಿ ಮಹಾನಗರ ಪಾಲಿಕೆ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ಇಲ್ಲ. ಬೆಂಗಳೂರು, ಮಂಗಳೂರು ಪಾಲಿಕೆ ವಿಚಾರ ಬೇರೆಯಾಗಿದ್ದು, ಬೆಳಗಾವಿಯ ಸಮಸ್ಯೆ ಬೇರೆ ಇದೆ. ವರಿಷ್ಠರ ಜೊತೆ ಚರ್ಚಿಸಿ ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡ್ತಾರೆ. ಕಾಂಗ್ರೆಸ್ ಚಿಹ್ನೆ ಮೇಲೆ ಸ್ಪರ್ಧೆ ಮೇಲೆ ಮಾಡೋದಾದರೆ ಮಾಡಲಿ ಎಂದರು.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ, ನಮ್ಮ ಭಾರತ ದೇಶದಲ್ಲಿ ಎಲ್ಲ ಧಾರ್ಮಿಕ ಭಾವನೆ ಮೇಲೆ ನಡೆಯುತ್ತೆ. ಹೀಗಾಗಿ ಕೆಲವೊಂದು ಅಡೆ ತಡೆಗಳು ಬಂದಿವೆ. ಅದನ್ನು ಸಿಎಂ ನೋಡಿಕೊಂಡು ಸರಿಪಡಿಸ್ತಾರೆ‌ ಎಂದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರಕ್ಕೆ, ದಿ.ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್ ಕೊಟ್ಟರೆ ಒಳ್ಳೆಯದು ಅಂತಾ ಹೇಳಿದ್ದೇವೆ. ವರಿಷ್ಠರು ಯಾರಿಗೆ ಟಿಕೆಟ್ ಕೊಡ್ತಾರೋ ಅವರ ಪರ ಕೆಲಸ ಮಾಡುವ ಮೂಲಕ ಗಟ್ಟಿಯಾಗಿ ದುಡಿದು ಆ ಅಭ್ಯರ್ಥಿ ಆರಿಸಿ ತರುವ ಕೆಲಸ ಮಾಡುತ್ತೇವೆ ಎಂದರು.

ಪಕ್ಷದ ಕಾರ್ಯಕರ್ತೆಯಾಗಿ, ಸುರೇಶ್ ಅಂಗಡಿ ಪುತ್ರಿಯಾಗಿ ಶ್ರದ್ಧಾ ಶೆಟ್ಟರ್ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿಕೆ ನೀಡಿದರು.

Last Updated : Dec 26, 2020, 5:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.