ಅಥಣಿ : ಸೂತ್ತೂರು ಮಠಕ್ಕೆ ಭೇಟಿ ನೀಡಿರುವುದರಲ್ಲಿ ವಿಶೇಷ ಅರ್ಥ ಏನೂ ಇಲ್ಲ. ಅಲ್ಲಿಯ ಶ್ರೀಗಳ ತಾಯಿ ಇತ್ತೀಚೆಗೆ ನಿಧನ ಹೊಂದಿದ್ದರಿಂದ ಅವರನ್ನು ಭೇಟಿ ಮಾಡಲು ಹೋಗಿದ್ದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಅಥಣಿ ಪಟ್ಟಣದ ಸ್ನೇಹಿತರು ಮತ್ತು ಆರ್ಎಸ್ಎಸ್ ಹಿರಿಯ ಮುಖಂಡರ ಮನೆಗೆ ಭೇಟಿ ನೀಡಿದ ಬಳಿಕ ಪ್ರವಾಸಿ ಮಂದಿರದಲ್ಲಿ ಅವರು ಮಾತನಾಡಿದರು. ಶುಕ್ರವಾರ ಸುತ್ತೂರು ಮಠ ಭೇಟಿ ಮತ್ತು ಇಂದಿನ ಅಥಣಿ ಭೇಟಿಯಲ್ಲಿ ಏನೂ ವಿಶೇಷತೆ ಇಲ್ಲ. ಅಥಣಿಯಲ್ಲಿ ನಾನು ಕೆಲ ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದೇನೆ. ನಮ್ಮ ಹಿರಿಯರು ಬಹಿರಂಗವಾಗಿ ಮಾಧ್ಯಮಗಳ ಜೊತೆ ಮಾತನಾಡದಂತೆ ಖಾರವಾಗಿ ಹೇಳಿದ್ದಾರೆ.
ಓದಿ : ಅಥಣಿಯಲ್ಲಿ ಆರ್ಎಸ್ಎಸ್ ಹಿರಿಯ ಮುಖಂಡರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ
ಹಾಗಾಗಿ, ಒಂದು ವಾರ ಕಾಲ ಏನೂ ಮಾತನಾಡಲ್ಲ. ಎಂಟು-ಹತ್ತು ದಿನಗಳಲ್ಲಿ ರಾಜಕೀಯ ವಿಷಯಗಳ ಬಗ್ಗೆ ಮಾತನಾಡುತ್ತೇನೆ. ನನ್ನ ಹೇಳಿಕೆಗಳಿಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿದರು.