ETV Bharat / state

ಜಾರಕಿಹೊಳಿ, ಕುಮಟಳ್ಳಿ ಅಭಿಮಾನಿಗಳಿಂದ ಅಥಣಿಯಲ್ಲಿ ಸಂಭ್ರಮಾಚರಣೆ..

author img

By

Published : Jun 2, 2020, 8:45 PM IST

ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರನ್ನು ಕರ್ನಾಟಕ ಕೊಳಚೆ ಪ್ರದೇಶಗಳ ( ಅಭಿವೃದ್ಧಿ ಮತ್ತು ನಿರ್ಮೂಲನೆ ) ಅಧಿನಿಯಮ, 1973 ರ ಕಲಂ 34 ( 2 ) ( ಎ ) ರ ಅಡಿಯಲ್ಲಿ ಅಧ್ಯಕ್ಷರನ್ನಾಗಿ ನೇಮಿಸುವುದರ ಜೊತೆಗೆ, ರಮೇಶ್​ ಜಾರಕಿಹೊಳಿ ಅವರಿಗೆ ಬೆಳಗಾವಿ ಉಸ್ತುವಾರಿಯಾಗಿ ನೇಮಿಸಲಾಗಿದೆ.

ramesh-and-kumathalli-followers
ಶಾಸಕ ಮಹೇಶ ಕುಮಟಳ್ಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ

ಅಥಣಿ : ಬೆಳಗಾವಿ ಜಿಲ್ಲಾ ಉಸ್ತುವಾರಿಯಾಗಿ ರಮೇಶ್ ಜಾರಕಿಹೊಳಿ ಹಾಗೂ ಶಾಸಕ ಮಹೇಶ ಕುಮಟಳ್ಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಸಿಎಂ ಯಡಿಯೂರಪ್ಪ ಆದೇಶ ಹೊರಡಿಸಿದ ಬೆನ್ನಲ್ಲೇ, ಅಥಣಿಯಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ramesh-and-kumathalli-followers
ಶಾಸಕ ಮಹೇಶ ಕುಮಟಳ್ಳಿಗೆ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ

ಇದೇ ಸಂದರ್ಭದಲ್ಲಿ ಮಾತನಾಡಿದ ಕುಮಟಳ್ಳಿ ಬೆಂಬಲಿಗ ವಿನಯ್ ಪಾಟೀಲ್, ಈ ಇಬ್ಬರು ನಾಯಕರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಬೆಳಗಾವಿ ಜಿಲ್ಲೆಯ ಉಸ್ತುವಾರಿ ಮತ್ತು ನಿಗಮ ಮಂಡಳಿ ಸ್ಥಾನಕ್ಕೆ ನೇಮಕ ಮಾಡಿದ ಬಿಎಸ್​ವೈ ಮತ್ತು ಕೇಂದ್ರ ನಾಯಕರಿಗೆ ಅಭಿನಂದನೆ ಎಂದರು. ರಮೇಶ ಜಾರಕಿಹೊಳಿ ಅವರಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಕೊಟ್ಟಿದ್ದು ಸಂತೋಷದ ವಿಷಯ. ಅದೇ ರೀತಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಸ್ಲಮ್ ಬೋರ್ಡ್​ ಅಧ್ಯಕ್ಷರನ್ನಾಗಿ ನೇಮಿಸಿರುವುರಿಂದ ಅನೇಕ ಕೊಳಗೇರಿಗಳು ಅಭಿವೃದ್ದಿಯಾಗುವುದರಲ್ಲಿ ಅನುಮಾನವಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.