ಬೆಳಗಾವಿ: ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ವಿರುದ್ಧ ಕೇಸ್ ದಾಖಲು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕುಮಾರ ಟಾಕಳೆ, ನವ್ಯಶ್ರೀ ಮತ್ತು ಅವರ ಆಪ್ತ ತಿಲಕ್ ಜೊತೆಯಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನ ರಿಲೀಸ್ ಮಾಡಿದ್ದಾರೆ.
ಆಡಿಯೋದಲ್ಲಿ ನಾನು ಒಪ್ಪಿಕೊಂಡಿದ್ದೇನೆ. ಅವಳು ಒಪ್ಪಿಕೊಂಡಿದ್ದಾಳೆ. ನನ್ನ ಹೆಂಡತಿಯನ್ನೂ ಒಪ್ಪಿಸುತ್ತೇನೆ. ನನ್ನ ಹೆಂಡತಿ, ಮಕ್ಕಳ ಜತೆಗೆ ನವ್ಯಶ್ರೀಯನ್ನ ಮನೆಯಲ್ಲಿ ಇಟ್ಟುಕೊಳುತ್ತೇನೆ. ಯಾವುದಕ್ಕೂ ತಲೆ ಕೆಡಸಿಕೊಳ್ಳಬೇಡಿ. ನನ್ನ ಮಗಳಿಗೂ ಹೇಳಿದ್ದೇನೆ. ಏನು ತೊಂದರೆ ಇಲ್ಲ ಅಂತಾ ರಾಜಕುಮಾರ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನ ನವ್ಯಶ್ರೀ ರಿಲೀಸ್ ಮಾಡಿದ್ದಾರೆ.
ಓದಿ: 'ಅವನೇ ನನ್ನ ಗಂಡ'.. ಬೆಳಗಾವಿಯಲ್ಲಿ ಸಾಮಾಜಿಕ ಕಾರ್ಯಕರ್ತೆ - ಅಧಿಕಾರಿ ಮಧ್ಯೆ ವಿವಾದ