ETV Bharat / state

ಕುಂಭದ್ರೋಣ ಮಳೆಗೆ ತತ್ತರಿಸಿದ ಬೆಳಗಾವಿ: ಅಂದಾಜು 315 ಕೋಟಿ ರೂ. ನಷ್ಟ

ರಾಜ್ಯದ ಉತ್ತರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಳಗಾವಿ ತತ್ತರಿಸಿದೆ. ಜಿಲ್ಲೆಯಲ್ಲಿ ಅಂದಾಜು ನಷ್ಟ 315 ಕೋಟಿ ರೂ.ಗೆ ತಲುಪಿದೆ. ಅಕ್ಟೋಬರ್ ತಿಂಗಳಲ್ಲಾದ ಮಳೆಯ ಅಬ್ಬರಕ್ಕೆ ಬೆಳಗಾವಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಆರು ಜಾನುವಾರು ಸಾವನ್ನಪ್ಪಿವೆ.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿಕೆ
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿಕೆ
author img

By

Published : Oct 16, 2020, 2:55 PM IST

ಬೆಳಗಾವಿ: ಕಳೆದ ವರ್ಷದ ಪ್ರಚಂಡ ಪ್ರವಾಹಕ್ಕೆ ತತ್ತರಿಸಿದ್ದ ಗಡಿ ಜಿಲ್ಲೆ ಬೆಳಗಾವಿ ಈ ಸಲ ಕುಂಭದ್ರೋಣ ಮಳೆಗೆ ನಲುಗಿದೆ. ಅಕ್ಟೋಬರ್ ತಿಂಗಳಲ್ಲಾದ ಮಳೆಯ ಅಬ್ಬರಕ್ಕೆ ಬೆಳಗಾವಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಆರು ಜಾನುವಾರು ಸಾವನ್ನಪ್ಪಿವೆ. ಮಳೆಯ ಅಬ್ಬರಕ್ಕೆ ನೂರಾರು ಮನೆಗಳು ಧರೆಗುರುಳಿದ್ದು, ಜನರ ಬದುಕು ಈ ವರ್ಷವೂ ಬೀದಿಗೆ ಬಿದ್ದಿದೆ. ಇನ್ನು ಜಿಲ್ಲೆಯಲ್ಲಿ ಅಂದಾಜು ನಷ್ಟ 315 ಕೋಟಿ ರೂ.ಗೆ ತಲುಪಿದೆ.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿಕೆ

ಜಿಲ್ಲಾಡಳಿತ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ನಾಲ್ಕು ದಿನಗಳ ಹಿಂದೆ ಹುಕ್ಕೇರಿ ಪಟ್ಟಣದಲ್ಲಿ ಸುರಿದ ಮಳೆಯಿಂದ ಮನೆ ಕುಸಿದು ವ್ಯಕ್ತಿಯೊಬ್ಬ ಮೃತನಾಗಿದ್ದಾನೆ. ಅಥಣಿಯಲ್ಲಿ ಎರಡು, ಹುಕ್ಕೇರಿಯಲ್ಲಿ ಎರಡು, ರಾಯಭಾಗ ಹಾಗೂ ರಾಮದುರ್ಗದಲ್ಲಿ ತಲಾ ಒಂದು ಜಾನುವಾರು ಮಳೆಗೆ ಸಾವನ್ನಪ್ಪಿವೆ. ಮಳೆ ಅಬ್ಬರಕ್ಕೆ ಜಿಲ್ಲೆಯಲ್ಲಿ 270 ಮನೆಗಳು ಕುಸಿದಿದ್ದು, 60 ಮನೆಗಳು ಸಂಪೂರ್ಣ ಸಂಪೂರ್ಣ ಹಾನಿಯಾಗಿವೆ.

ಎಲ್ಲಿ ಎಷ್ಟು ಹಾನಿ?: ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ನೀಡಿದ ಮಾಹಿತಿ ಪ್ರಕಾರ ಬೈಲಹೊಂಗಲದಲ್ಲಿ ಒಂದು ಮನೆ ಕುಸಿದು ಅರ್ಧದಷ್ಟು ಹಾನಿಯಾಗಿದ್ದು, 22 ಮನೆಗಳು ಸಂಪೂರ್ಣ ಹಾನಿಯಾಗಿವೆ. ಬೆಳಗಾವಿಯಲ್ಲಿ 16 ಹಾಗೂ ಚಿಕ್ಕೋಡಿಯಲ್ಲಿ ಒಂದು ಮನೆ ಕುಸಿದಿದೆ. ಗೋಕಾಕ್​​​​​ನಲ್ಲಿ 30 ಮನೆಗಳು ಕುಸಿದಿದ್ದು, 4 ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಹುಕ್ಕೇರಿಯಲ್ಲಿ 12, ಖಾನಾಪುರದಲ್ಲಿ 22, ರಾಮದುರ್ಗದಲ್ಲಿ 12 ಮನೆಗಳು ಕುಸಿದಿದ್ದು, ನಾಲ್ಕು ಮನೆಗಳು ಮಳೆ ಹೊಡೆತಕ್ಕೆ ಸಂಪೂರ್ಣ ನಾಶವಾಗಿವೆ. ರಾಯಭಾಗದಲ್ಲಿ 125 ಮನೆಗಳು ಮಳೆಗೆ ಕುಸಿದಿದ್ದು, 15 ಮನೆಗಳು ಸಂಪೂರ್ಣ ಹಾನಿಯಾಗಿವೆ. ಕಿತ್ತೂರಲ್ಲಿ 15 ಮನೆ ಕುಸಿತ ಹಾಗೂ ಎರಡು ಮನೆಗಳು ಸಂಪೂರ್ಣ ಹಾನಿಯಾಗಿವೆ. ಕಾಗವಾಡದಲ್ಲಿ 9, ಮೂಡಲಗಿಯಲ್ಲಿ 12 ಮನೆ ಕುಸಿತ ಹಾಗೂ 13 ಮನೆಗಳು ಮಳೆಗೆ ಸಂಪೂರ್ಣ ಹಾನಿಯಾಗಿವೆ.

ನೀರು ಪಾಲಾದ ಕಬ್ಬು, ಸೋಯಾ!
ಕುಂಭದ್ರೋಣ ಮಳೆಗೆ ಕಟಾವಿಗೆ ಬಂದಿದ್ದ ಕಬ್ಬು, ಹತ್ತಿ ಹಾಗೂ ಸೋಯಾ ಸೇರಿದಂತೆ ಬಹುತೇಕ ಬೆಳೆಗಳು ನೀರು ಪಾಲಾಗಿವೆ. ಕಳೆದ ವರ್ಷ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಬೆಳೆಗಳು, ಈ ವರ್ಷವೂ ನೀರು ಪಾಲಾಗಿದೆ. ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಅಕ್ಬೋಬರ್ ತಿಂಗಳಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ 35,238 ಹೆಕ್ಟರ್ ಕೃಷಿ ಭೂಮಿ ಜಲಾವೃತಗೊಂಡಿದೆ. 35.55 ಹೆಕ್ಟರ್ ತೋಟಗಾರಿಕೆ ಬೆಳೆಗಳು ಮಳೆಗೆ ಆಹುತಿಯಾಗಿವೆ. ಸರ್ಕಾರಕ್ಕೆ ಅಂದಾಜು ನಷ್ಟ ವರದಿ ಕಳುಹಿಲಾಗಿದೆ. ಎರಡು ತಿಂಗಳ ಹಿಂದೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಬೆಳೆಗಳ ಸಮೀಕ್ಷೆ ನಡೆಯುತ್ತಿದೆ. ಶೀಘ್ರವೇ ಪರಿಹಾರ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.