ಚಿಕ್ಕೋಡಿ: ವರುಣನ ಅಬ್ಬರಕ್ಕೆ ರಸ್ತೆಯ ಮೇಲೆ ನಿಂತಿದ್ದ ವಾಹನಗಳು ಮಳೆಯ ರಭಸದಿಂದ ಕೊಚ್ಚಿಹೋಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದಿದೆ.
ಚಿಕ್ಕೋಡಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ಜನಜೀವನ, ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ಸತತ ನಾಲ್ಕು ತಿಂಗಳಿಂದ ಬಿಸಿಲಿನ ಬೇಗೆಗೆ ಜನ ಮತ್ತು ಜಾನುವಾರುಗಳು ಕಂಗಾಲಾಗಿದ್ದರು. ಆದರೆ, ಅಬ್ಬರದ ಮಳೆಯಿಂದಾಗಿ ತಂಪಿನ ವಾತಾವರಣ ಸೃಷ್ಟಿಯಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಸಣ್ಣಪುಟ್ಟ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.