ಬೆಳಗಾವಿ: 15 ದಿನಗಳ ಒಳಗಾಗಿ ನೆರೆ ಸಂತ್ರಸ್ತ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಾಗಬೇಕು. ಇಲ್ಲವಾದರೆ ವಿದ್ಯುತ್ ಪೂರೈಸುವವರೆಗೂ ನೀವು ಅಲ್ಲೆ ವಾಸಿಸಬೇಕು ಎಂದು ಸಚಿವ ಲಕ್ಷ್ಮಣ್ ಸವದಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗೋಕಾಕ್ ನಗರದಲ್ಲಿ ಗುರುವಾರ ನಡೆದ ಪುನರ್ವಸತಿ ಸಭೆಯಲ್ಲಿ ಈ ಘಟನೆ ಸಚಿವರು ಅಧಿಕಾರಿಗಳಿಗೆ ಈ ಖಡಕ್ ಸೂಚನೆ ನೀಡಿದ್ರು.
ಪ್ರವಾಹದಿಂದ ಕೊಚ್ಚಿ ಹೋಗಿದ್ದ ವಿದ್ಯುತ್ ಕಂಬಗಳ ದುರಸ್ತಿಗೆ ಹೆಸ್ಕಾಂ ಅಧಿಕಾರಿಗಳು 2 ತಿಂಗಳ ಕಾಲಾವಕಾಶ ಕೇಳಿದ್ದರು. ಇದಕ್ಕೊಪ್ಪದ ಸಚಿವ ಸವದಿ ಅವರು, ಅಗತ್ಯ ಪರಿಕರ, ಸೌಲಭ್ಯಗಳನ್ನು ಒದಗಿಸುತ್ತೇವೆ. ಕೂಡಲೇ ಕೆಲಸ ಪ್ರಾರಂಭಿಸಿ ಎಂದು ಹೇಳಿದ್ರು.
15 ದಿನಗಳಲ್ಲಿ ಕೆಲಸ ಮುಗಿಯದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆಯೂ ಜಿಲ್ಲಾಧಿಕಾರಿಗೆ ಸೂಚಿಸಿದ್ರು.