ETV Bharat / state

ದೆಹಲಿ ಹಿಂಸಾಚಾರ: ಬೆಳಗಾವಿಯಲ್ಲಿ ಹಮಾರಾ ದೇಶ ಸಂಘಟನೆಯಿಂದ ಪ್ರತಿಭಟನೆ..

author img

By

Published : Mar 2, 2020, 5:29 PM IST

ಸಿಎಎ ವಿರೋಧಿಸಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಿಂಸಾತ್ಮಕ  ಕೃತ್ಯದಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಹಮಾರಾ ದೇಶ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

Protest in Belgaum
ಬೆಳಗಾವಿಯಲ್ಲಿ ಹಮಾರಾ ದೇಶ ಸಂಘಟನೆಯಿಂದ ಪ್ರತಿಭಟನೆ

ಬೆಳಗಾವಿ: ಸಿಎಎ ವಿರೋಧಿಸಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಿಂಸಾತ್ಮಕ ಕೃತ್ಯದಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಹಮಾರಾ ದೇಶ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸದಸ್ಯರು, ದೆಹಲಿಯಲ್ಲಿ ಸಿಎಎ ವಿರೋಧಿಸಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಕಳೆದ ವಾರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ ವೇಳೆ ಹಿಂಸಾಚಾರ ರೂಪ ಪಡೆಯಿತು. ಇದು ಹಿಂದೂಗಳನ್ನು ಗುರಿಯಾಗಿಸಿಕೊಂಡ ಮಾಡಲಾಗುತ್ತಿರುವ ಪ್ರತಿಭಟನೆ. ಇಂತಹ‌ ದೇಶದ್ರೋಹ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದವರನ್ನು ಹತ್ತಿಕ್ಕುವ ‌ಕಾರ್ಯವನ್ನು‌ ಕೇಂದ್ರ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಅಲ್ಲದೇ ಈ ಪ್ರತಿಭಟನೆಯಲ್ಲಿ ಹಲವಾರು ಹಿಂದೂಗಳ ಮೇಲೆ ದಾಳಿ ಮಾಡಿದ್ದಾರೆ. ಇನ್ನು ಹಿಂಸಾತ್ಮಕ ಕೃತ್ಯವನ್ನು ನಿಯಂತ್ರಣ ಮಾಡುವ ವೇಳೆ ಪೊಲೀಸ್ ಇಲಾಖೆಯ ಮೇಲೆ ದಾಳಿ ಮಾಡಲಾಗಿದ್ದು, ಇದರಲ್ಲಿ ಪೊಲೀಸ್ ಪೆದೆ ರತನ ಲಾಲ್ ಹಾಗೂ ಐಬಿ ಆಫಿಸರ್ ಅಂಕಿತ ಶರ್ಮಾ ಅವರನ್ನು ಕ್ರೂರವಾಗಿ ಕೊಲೆ ಮಾಡಿದ್ದಾರೆ. ಇದನ್ನು ಹಮಾರ ದೇಶ ಸಂಘಟನೆ ತೀವ್ರವಾಗಿ ಖಂಡಿಸಲಿದೆ. ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.