ETV Bharat / state

ತಾಮ್ರದ ಬಿಂದಿಗೆ ಭವಿಷ್ಯ: ತಿರುಗಿದರೆ ಮಳೆ, ಜೋಳ ಬಿದ್ದರೆ ಬೆಳೆ; ಈ ಬಾರಿ ರೈತರಿಗೆ ಒಳಿತಾ, ಕೆಡುಕಾ? - copper pot Astrology - COPPER POT ASTROLOGY

ರಾಜ್ಯದಲ್ಲಿ ಕೆಲವೆಡೆ ಮಳೆ, ಬೆಳೆ ಭವಿಷ್ಯ ಕುರಿತು ಧಾರ್ಮಿಕ ಸ್ಥಳಗಳಲ್ಲಿ ಭವಿಷ್ಯ ವಾಣಿ ನುಡಿಯಲಾಗುತ್ತೆ. ಇದು ಆಯಾ ವರ್ಷದಲ್ಲಾಗುವ ಕೆಲ ಸಂಗತಿಗಳ ಕುರಿತು ತಿಳಿಸುತ್ತೆ. ಹಾಗೆಯೇ ಬಾಗಲಕೋಟೆಯಲ್ಲಿ ಜಿಲ್ಲೆಯಲ್ಲಿ ಶತಮಾನದಿಂದ ತಾಮ್ರದ ಬಿಂದಿಗೆಯನ್ನು ತಿರುಗಿಸುವ ಮೂಲಕ ಮಳೆ ಬೆಳೆ ಭವಿಷ್ಯ ಹೇಳಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಬಿಂದಿಗೆಯನ್ನು ಭಕ್ತರು ತಿರುಗಿಸಿದ್ದು, ಏನಿದೆ ಭವಿಷ್ಯ ನೋಡೋಣ ಬನ್ನಿ.

ತಾಮ್ರದ ಬಿಂದಿಗೆ ಭವಿಷ್ಯ
ತಾಮ್ರದ ಬಿಂದಿಗೆ ಭವಿಷ್ಯ (ETV Bharat)
author img

By ETV Bharat Karnataka Team

Published : Sep 8, 2024, 12:39 PM IST

ತಾಮ್ರದ ಬಿಂದಿಗೆ ಭವಿಷ್ಯ (ETV Bharat)

ಬಾಗಲಕೋಟೆ: ಇಂದಿನ ಆಧುನಿಕ ಯುಗದ ಭರಾಟೆ ಮಧ್ಯೆಯೂ ಗ್ರಾಮೀಣ‌ ಭಾಗದಲ್ಲಿ ಸಂಪ್ರದಾಯ ಆಚರಣೆ ಇನ್ನೂ ಜೀವಂತವಾಗಿದೆ. ತಾಮ್ರದ ಬಿಂದಿಗೆಯನ್ನು ತಿರುಗಿಸುವ ಮೂಲಕ ಮಳೆ ಬೆಳೆ ಭವಿಷ್ಯ ಹೇಳುವ ವಿಶೇಷ ಪದ್ಧತಿ ರೂಢಿಯಲ್ಲಿದೆ. ಈ ಆಚರಣೆಯನ್ನು ಜಿಲ್ಲೆಯ ಬಾದಾಮಿ ತಾಲೂಕಿನ‌ ಕಂಗಲಗೊಂಬ ಗ್ರಾಮದಲ್ಲಿ ಶತಮಾನಗಳ ಕಾಲದಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ಗ್ರಾಮದ ಮಳೆರಾಜೇಂದ್ರ ಮಠದಲ್ಲಿ ನೀರು ತುಂಬಿದ ತಾಮ್ರದ ಬಿಂದಿಗೆಯನ್ನು ಜೋಳದ ಮೇಲೆ ಇಟ್ಟು, ಅದಕ್ಕೆ ತಾಳಿ ಕಟ್ಟಿ ಪುಷ್ಪವನ್ನು ಹಾಕಿಮಳೆ ರಾಜೇಂದ್ರಸ್ವಾಮಿಗೆ ಪೂಜೆ ನೇರವೇರಿಸಲಾಗುತ್ತದೆ. ಮಠದ ಶ್ರೀಗಳಾದ ಜಗನ್ನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ಐದು ಜನರ ಪುರುಷರನ್ನು ನೇಮಿಸಿ, ಪೂಜೆ ಪುರಸ್ಕಾರಕ್ಕೆ ಸಿದ್ಧರಾಗುತ್ತಾರೆ.

ಶ್ರೀ ಜಗದ್ಗುರು ಮಳೆರಾಜೇಂದ್ರ ಸ್ವಾಮಿ ದೇಗುಲ
ಶ್ರೀ ಜಗದ್ಗುರು ಮಳೆರಾಜೇಂದ್ರ ಸ್ವಾಮಿ ದೇಗುಲ (ETV Bharat)

ಬಳಿಕ ಬಿಂದಿಗೆ ಪೂಜೆ ಸಲ್ಲಿಸಿ, ಕೇವಲ ಎರಡು ಬೆರಳು ಇಟ್ಟು ಐದು ಜನರು ಮಳೆ ಹೆಸರು ಹೇಳಿ ತಿರುಗಿಸುತ್ತಾರೆ. ಆಗ ಬಿಂದಿಗೆ ಜೋರಾಗಿ ತಿರುಗಿದರೆ ಹೆಚ್ಚು ಮಳೆ, ಕೆಳಗೆ ಹಾಕಿರುವ ಜೋಳ ಚೆಲ್ಲಾಪಿಲ್ಲಿಯಾದರೆ ಹೆಚ್ಚು‌ ಬೆಳೆ ಬರುತ್ತದೆ ಎಂದು ಭವಿಷ್ಯ ನುಡಿಯುತ್ತಾರೆ. ಹುಬ್ಬಿ ಹಾಗೂ ಉತ್ತರೆ ಮಳೆ ಹೆಚ್ಚು ಆಗಿ ಅತಿವೃಷ್ಠಿ ಆಗಲಿದೆ ಎಂದು ಸ್ವಾಮೀಜಿ ಬಿಂದಿಗೆಯ ಭವಿಷ್ಯ ಹೇಳಿದರು.

ಹುಬ್ಬಿ ಮಳೆಯಾಗುವ ಮುಂಚೆ ಭಾದ್ರಪದ ಮಾಸದ ಮೊದಲೇ ಗುರುವಾರ ದಿನದಂದು ಈ ಬಿಂದಿಗೆ ಭವಿಷ್ಯ ಸಂಪ್ರದಾಯ ಆಚರಣೆ ರಾತ್ರಿ ಸಮಯದಲ್ಲಿ ನಡೆಯುತ್ತಿದೆ. ಹುಬ್ಬಿ, ಉತ್ತರೆ, ಹಸ್ತಾ, ಚಿತ್ತಾ ಹಾಗೂ ಸ್ವಾತಿ ಮಳೆ ಈ ಐದು ಮಳೆಗಳ ಬಗ್ಗೆ ಮಾತ್ರ ಭವಿಷ್ಯ ಹೇಳಲಾಗುತ್ತದೆ. ಒಮ್ಮೆ ಬಿಂದಿಗೆ ಸುತ್ತುವಾಗ ಅದು ತಾನಾಗಿಯೇ ನಿಲ್ಲುವವರೆಗೂ ಸುತ್ತುತ್ತಾರೆ.

ಮಳೆ ರಾಜೇಂದ್ರ ಸ್ವಾಮಿ ದೇವರು
ಮಳೆ ರಾಜೇಂದ್ರ ಸ್ವಾಮಿ ದೇವರು (ETV Bharat)

ನಂತರ ಚೆಲ್ಲಾಪಿಲ್ಲಿಯಾದ ಜೋಳ ಒಂದೆಡೆ ಸೇರಿ, ಅದರ ಮೇಲೆ ಮತ್ತೆ ಬಿಂದಿಗೆ ಇಟ್ಟು ಪೂಜೆ ಸಲ್ಲಿಸಿ, ಇನ್ನೊಂದು ಮಳೆ ಹೆಸರನಲ್ಲಿ ಸುತ್ತುತ್ತಾರೆ. ಹೀಗೆ ಐದು ಮಳೆಗೆ, ಐದು ಬಾರಿ ಸುತ್ತುವ ಮೂಲಕ ಭವಿಷ್ಯ ತಿಳಿದುಕೊಳ್ಳುತ್ತಾರೆ. ಈ ಬಾರಿ ಉತ್ತರೆ ಮಳೆಗೆ ರೈತರು ಬಿತ್ತನೆ ಕಾರ್ಯ ಮಾಡಬೇಕು. ಚಿತ್ತಾ ಮತ್ತು ಸ್ವಾತಿ ಮಳೆ ಅಷ್ಟೊಂದು ಪರಿಣಾಮಕಾರಿ ಇಲ್ಲ ಎಂದು ಭವಿಷ್ಯ ಹೇಳಲಾಗಿದೆ.

ಬಿಂದಿಗೆ ತಿರುಗಿಸುತ್ತಿರುವ ಭಕ್ತರು
ಬಿಂದಿಗೆ ತಿರುಗಿಸುತ್ತಿರುವ ಭಕ್ತರು (ETV Bharat)

ಹೀಗೆ ಎಲ್ಲಾ ಗ್ರಾಮಸ್ಥರ ಸಮ್ಮುಖದಲ್ಲಿ ಬಿಂದಿಗೆ ಭವಿಷ್ಯದ ಬಗ್ಗೆ ಮಾಹಿತಿಯನ್ನು ಜಗನ್ನಾಥ ಸ್ವಾಮೀಜಿಗಳು ತಿಳಿಸುತ್ತಾರೆ. ನಂತರ ಬಂದ ಭಕ್ತರು, ಜೋಳದ ನುಚ್ಚು, ಸಾರು ಪ್ರಸಾದ ಸವಿದು ಮನೆಗೆ ಹೋಗುತ್ತಾರೆ. ಇಂದಿನ ಮಾಹಿತಿ ತಂತ್ರಜ್ಞಾನ, ಮೊಬೈಲ್​ ಯುಗದ ಭರಾಟೆ ಮಧ್ಯೆಯೂ ಗ್ರಾಮೀಣ ಪ್ರದೇಶದ ಇಂತಹ ಸಂಪ್ರದಾಯ ಆಚರಣೆ ಮೂಲಕ‌ ಮಳೆ ರಾಜೇಂದ್ರ ಮಠವು ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಹಲವರಿಗೆ ಅದೃಷ್ಟ, ಕೆಲವರಿಗೆ ಅಶುಭ: ಹೀಗಿದೆ ಈ ವಾರದ ನಿಮ್ಮ ರಾಶಿ ಭವಿಷ್ಯ - Weekly Horoscope

ETV Bharat Logo

Copyright © 2024 Ushodaya Enterprises Pvt. Ltd., All Rights Reserved.