ಬೆಳಗಾವಿ: ಸದಾಶಿವ ಆಯೋಗದ ವರದಿ ಕೈಬಿಡಬೇಕು ಎಂದು ಒತ್ತಾಯಿಸಿ ಬಂಜಾರ ಸಮುದಾಯದ ಮುಖಂಡರು ಹಾಗೂ ತಾಂಡಾ ರಕ್ಷಣಾ ವೇದಿಕೆ ವತಿಯಿಂದ ಪತ್ರ ಚಳುವಳಿ ಮೂಲಕ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ಸಂಘದ ಪದಾಧಿಕಾರಿಗಳು, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ದೃಷ್ಟಿಯಿಂದ ಹಿಂದುಳಿದವರ ಪಟ್ಟಿಯಲ್ಲಿರುವ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಮೀಸಲಾತಿಯಿಂದ ಹೊರಗಿಡುವ ಮೂಲಕ ವಂಚಿಸಬಾರದು ಎಂದು ಆಗ್ರಹಿಸಿದರು.
![protest by banjara and tanda community](https://etvbharatimages.akamaized.net/etvbharat/prod-images/kn-bgm-03-10-banjar-community-protest-01-ka10029_10062020142151_1006f_01256_98.jpg)
ರಾಜ್ಯದ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಸದ್ಯ ಎಸ್ಸಿ/ಎಸ್ಟಿ ವರ್ಗದಲ್ಲಿ ಮೀಸಲಾತಿ ನೀಡಲಾಗಿದೆ. ಆದರೆ ಸದಾಶಿವ ಆಯೋಗದ ವರದಿಯಲ್ಲಿ ಹಲವು ಸಮುದಾಯಗಳಿಗೆ ಮೀಸಲಾತಿ ಬೇಡ ಎಂದು ಹೇಳಲಾಗಿದೆ. ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಮೀಸಲಾತಿಯಿಂದ ವಂಚಿಸಬಾರದು. ತಪ್ಪು ಮಾಹಿತಿಯಿಂದ ಸಮುದಾಯಕ್ಕೆ ಮೀಸಲಾತಿ ತಪ್ಪಿಸಲು ಹೊರಟಿರುವ ಸದಾಶಿವ ಆಯೋಗದ ವರದಿ ಕೈ ಬಿಡಬೇಕು ಎಂದು ಒತ್ತಾಯಿಸಿದರು.