ETV Bharat / state

ನಿಪ್ಪಾಣಿ ಕ್ಷೇತ್ರದ ಸಮಸ್ಯೆ ಕುರಿತು ಚರ್ಚೆ: ರಮೇಶ್​​ ಜಾರಕಿಹೊಳಿ ಮಾತಿಗೆ ಶಶಿಕಲಾ ಜೊಲ್ಲೆ ಗರಂ!

ಚಿಕ್ಕೋಡಿಯಲ್ಲಿ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ರಮೇಶ್​ ಜಾರಕಿಹೊಳಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ನಡುವೆ ಮಾತಿನ ಚಕಮಕಿ ನಡೆದಿದೆ.

ramesh jarkiholi and shashikala jolle in chikkodi meeting
ಪ್ರಗತಿ ಪರಿಶೀಲನಾ ಸಭೆ
author img

By

Published : Jun 16, 2020, 5:08 PM IST

ಚಿಕ್ಕೋಡಿ: ಸಮಸ್ಯೆ ಹೇಳಿಕೊಂಡು ಬಂದ ವ್ಯಕ್ತಿಗೆ ನನ್ನ ಬಳಿ ವೈಯುಕ್ತಿಕವಾಗಿ ಬಂದು ಭೇಟಿ ಆಗಿ ಎಂದ ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್​​ ಜಾರಕಿಹೊಳಿ ಮಾತಿಗೆ ಸಚಿವೆ ಶಶಿಕಲಾ ಜೊಲ್ಲೆ ಗರಂ ಆದ ಘಟನೆ ನಡೆದಿದೆ.

ಪ್ರಗತಿ ಪರಿಶೀಲನಾ ಸಭೆ
ಚಿಕ್ಕೋಡಿ ಲೋಕೋಪಯೋಗಿ ಇಲಾಖೆಯ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಮಾತಿಗೆ ಶಾಸಕಿ ಶಶಿಕಲಾ ಜೊಲ್ಲೆ ವಿರೋಧ ವ್ಯಕ್ತಪಡಿಸಿದ್ರು. ಕಾರದಗಾ ಗ್ರಾಮದಲ್ಲಿ ಕಳೆದ ವರ್ಷ ಪ್ರವಾಹದಲ್ಲಿ ಬಿದ್ದ ಮನೆಗಳ ಮರು ನಿರ್ಮಾಣ ವಿಚಾರವಾಗಿ ಚರ್ಚೆ ನಡೆಯುತ್ತಿದ್ದ ವೇಳೆ ನಿಪ್ಪಾಣಿ ಮತಕ್ಷೇತ್ರದ ಕಾರದಗಾ ಗ್ರಾಮದ ವ್ಯಕ್ತಿಗೆ ಸಚಿವ ರಮೇಶ್, ನನ್ನ ಬಳಿ ಬನ್ನಿ ಎಂದು ಹೇಳಿದ ಮಾತಿಗೆ ಶಶಿಕಲಾ ಜೊಲ್ಲೆ ಗರಂ ಆದರು. ನಂತರ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಸಂತ್ರಸ್ತ ವ್ಯಕ್ತಿಗೆ ಮೊದಲು ನೀವು ನನ್ನ ಬಳಿ ಬನ್ನಿ. ನನ್ನ ಕೈಯಿಂದ ಸಮಸ್ಯೆ ಬಗೆಹರಿಸಲಾಗದಿದ್ದರೆ ರಮೇಶ್​ ಜಾರಕಿಹೊಳಿ ಬಳಿ ನಾನೇ ಕರೆದುಕೊಂಡು ಹೋಗುತ್ತೇನೆ ಎಂದರು. ಇಬ್ಬರು ಸಚಿವರ ಜಟಾಪಟಿಯಿಂದ ಸಭೆಯಲ್ಲಿ ಕೆಲ ಹೊತ್ತು ಗೊಂದಲ ಸೃಷ್ಟಿಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.