ಬೆಳಗಾವಿ : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಜೈಲಿನಲ್ಲಿ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆ ಹಿಂಡಲಗಾ ಜೈಲು ಅಧೀಕ್ಷಕ ಕೃಷ್ಣಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬಂಧಿಖಾನೆ ಇಲಾಖೆಯ ಡಿಐಜಿ ಸೋಮಶೇಖರ್ ಜತೆಗಿನ ಸಭೆ ಬಳಿಕ ಹೊರಬಂದ ಕೃಷ್ಣಕುಮಾರ್ ಅವರು, ಮಾಧ್ಯಮದವರ ಪ್ರಶ್ನೆಗೆ ತಬ್ಬಿಬ್ಬಾದರು. ವಿನಯ್ ಕುಲಕರ್ಣಿ ಸಂಬಂಧಿಕರು ಜೈಲಿಗೆ ಮೆಡಿಸಿನ್ ಕೊಡಲು ಬಂದಿದ್ರು ಅಷ್ಟೇ ಎಂದಿದ್ದಾರೆ.
ಅವರು ಊಟ ಏನೂ ತಂದಿಲ್ಲ, ಜೈಲು ನಿಯಮಾವಳಿ ಪ್ರಕಾರ ಮಾತ್ರೆಗಳನ್ನು ನೀಡಿದ್ದಾರೆ. ವಿನಯ್ ಕುಲಕರ್ಣಿ ಯಾರಿಗೂ ಫೋನ್ ಮಾಡಿಲ್ಲ. ಜೈಲಿಗೆ ನಿತ್ಯ ಹೊರಗಿನಿಂದ ಊಟ ಸಪ್ಲೈ ಆಗಿಲ್ಲ.
ಒಳಗೆ ಊಟದ ವ್ಯವಸ್ಥೆ ಇದೆ ಎಂದ ಅವರು, ಕೋವಿಡ್ ಹಿನ್ನೆಲೆ ನಿಯಮಗಳ ಬಗೆಗಿನ ಪ್ರಶ್ನೆಗೆ ಸೂಕ್ತ ಉತ್ತರ ನೀಡದೇ ಕೃಷ್ಣಕುಮಾರ್ ಹಿಂದೆ ಸರಿದರು. ಧಾರವಾಡದ ಹೆಬ್ಬಳ್ಳಿ ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.