ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಅಕಾಲಿಕ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ತಾಲೂಕಿನ ವಿವಿಧ ಪ್ರದೇಶಗಳಲ್ಲಿ ವರ್ಷದ ಮೊದಲ ಮಳೆಯಾಗಿದೆ. ಅಥಣಿ ಪಟ್ಟಣದಲ್ಲಿ, ಆಲಿಕಲ್ಲು ಸಮೇತ ಮಳೆಯಾಗಿದೆ. ಮಳೆ ಜತೆಗೆ ಭಾರಿ ಪ್ರಮಾಣದ ಗಾಳಿ ಬೀಸಿದ್ದರಿಂದ ಕೆಲವು ಮನೆಗಳ ತಗಡು ಹಾರಿ ಹೋಗಿವೆ. ಇನ್ನೂ ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ಮಾವು, ಜೋಳ ನೆಲ ಕಚ್ಚಿದ್ದು, ಅಕಾಲಿಕ ಮಳೆಯಿಂದ ರೈತರಿಗೆ ನಷ್ಟವಾಗಿದೆ.