ETV Bharat / state

ಸುಡು ಬಿಸಿಲಿನಲ್ಲಿಯೇ ಮಕ್ಕಳ ಪ್ರತಿಭಾ ಕಾರಂಜಿ: ವಿದ್ಯಾರ್ಥಿಗಳಿಗೆ ಕಿರಿ ಕಿರಿ - latest chikkodi school programe news

ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ, ವಿದ್ಯಾರ್ಥಿಗಳೂ ಸೇರಿ ವೀಕ್ಷಕರೂ ಸಹ ಸುಡು ಬಿಸಿಲಿನಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸಿದ ದೃಶ್ಯ ಚಿಕ್ಕೋಡಿಯಲ್ಲಿ ಕಂಡುಬಂತು.

ಸುಡು ಬಿಸಿಲಿನಲ್ಲಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು
author img

By

Published : Nov 7, 2019, 10:52 PM IST

ಚಿಕ್ಕೋಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ, ವಿದ್ಯಾರ್ಥಿಗಳೂ ಸೇರಿ ವೀಕ್ಷಕರೂ ಸಹ ಸುಡು ಬಿಸಿಲಿನಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸುವ ದೃಶ್ಯ ಕಂಡುಬಂತು.

ಗುರುವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಒಂದು ಗಂಟೆ ತಡವಾಗಿ ಆರಂಭವಾಯಿತು. ಆದರೆ, ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿದ್ದ ಜಿಲ್ಲೆಯ ಎಲ್ಲಾ ವಲಯಗಳ ಮಕ್ಕಳನ್ನು ಬೆಳಗ್ಗೆ 9 ಗಂಟೆಗೆಯೇ ಕರೆದುಕೊಂಡು ಬಂದು ಸುಡುವ ಬಿಸಿಲಿನಲ್ಲಿಯೇ ಕೂರಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸುವ ಅತಿಥಿಗಳಿಗೆ ಮಾತ್ರ ಪೆಂಡಾಲ್ ಹಾಕಲಾಗಿತ್ತು.

Pratibha karanji program at chikkodi shows negligence of officers
ಸುಡುವ ಬಿಸಿಲಿನಲ್ಲಿಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು

ಸರ್ಕಾರ ಮಕ್ಕಳಲ್ಲಿ ಹುದುಗಿರುವ ಸೂಕ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದ್ರೆ, ಇಂತಹ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮಕ್ಕಳು ಸರಿಯಾದ ವೇದಿಕೆ ದೊರೆಯದೆ ವಂಚಿತರಾಗುತ್ತಿದ್ದಾರೆಂಬುದಕ್ಕೆ ಚಿಕ್ಕೋಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವೇ ಸಾಕ್ಷಿಯಾಗಿದೆ.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಆರಂಭವಾಗುವಷ್ಟರಲ್ಲಿಯೇ ಸುಮಾರು ಎರಡು ಗಂಟೆಗಳ ಬಿಸಿಲಿನಲ್ಲಿಯೇ ಕಾದು ಕುಳಿತಿದ್ದ ಮಕ್ಕಳು ಮತ್ತು ಶಿಕ್ಷಕರು ಖುರ್ಚಿಗಳನ್ನು ಖಾಲಿ ಮಾಡಿ ನೆರಳಿನತ್ತ ಸಾಗಿದ್ದರು. ಹೀಗಾಗಿ ಕಾರ್ಯಕ್ರಮ ಉದ್ಘಾಟಿಸಿದ ಡಿಡಿಪಿಐ ಮೋಹನ ಹಂಚಾಟೆಯವರು ಭಾಷಣ ಮಾಡುತ್ತಿದ್ದಾಗ ವೇದಿಕೆ ಎದುರಿನ ಎಲ್ಲಾ ಖುರ್ಚಿಗಳು ಖಾಲಿಯಾಗಿದ್ದವು. ಖುರ್ಚಿಗಳು ಖಾಲಿಯಾಗಿರುವುದನ್ನು ಕಂಡು ಡಿಡಿಪಿಐ ಮೋಹನ ಹಂಚಾಟೆಯವರು ತಮ್ಮ ಭಾಷಣ ಮೊಟಕುಗೊಳಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಸ್ಪರ್ಧೆಗಳು ನಡೆಯುವ ಕೊಠಡಿಗೆ ಹೋಗಬೇಕೆಂದು ಖಾಲಿ ಖುರ್ಚಿಗಳಿಗೆ ಹೇಳಿದರು.

ಆದರೆ, ಮಕ್ಕಳ ಬಗ್ಗೆ ಡಿಡಿಪಿಐ ಸೇರಿದಂತೆ ಜಿಲ್ಲಾ ಮತ್ತು ತಾಲೂಕಾ ಮಟ್ಟದ ನಮ್ಮ ಅಧಿಕಾರಿಗಳಿಗೆ ಯಾವುದೇ ಕಾಳಜಿ ಇಲ್ಲ. ಇದೊಂದು ಮಕ್ಕಳ ಪ್ರತಿಭೆ ಕುಗ್ಗಿಸುವ ಕಾರ್ಯಕ್ರಮ ಎಂಬ ಮಾತುಗಳು ಶಿಕ್ಷಕರು ಮಾತನಾಡಿಕೊಳ್ಳುತ್ತಿದ್ದರು.

Intro:Body:

ಚಿಕ್ಕೋಡಿ :

ಸುಡುವ ಬಿಸಿಲಿನಲ್ಲಿಯೇ ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಕುಳಿತಿದ್ದ ಮಕ್ಕಳು, ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಸಹ ಇಲ್ಲ, ಉಪಹಾರ ಮಾಡಲು ಮಕ್ಕಳಿಗೆ ಪ್ಲೇಟ್ ಸಹ ಇರಲಿಲ್ಲ, ತಮ್ಮ ಬುಕ್ಕನಲ್ಲಿನ ಕಾಗದ ಹರಿದುಕೊಂಡು ಕಾಗದಲ್ಲಿಯೇ ಉಪಹಾರ ಸೇವನೆ ಮಾಡುತ್ತಿದ್ದ ಮಕ್ಕಳು.

ಇಂತಹ ಅವ್ಯವಸ್ಥೆ ಕಂಡು ಬಂದದ್ದು ಎಲ್ಲಿಯೂ ಅಲ್ಲ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ. ಸರ್ಕಾರ ಮಕ್ಕಳಲ್ಲಿ ಹುದಗಿರುವ ಸೂಕ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ, ಇಂತಹ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ಮಕ್ಕಳು ಸರಿಯಾದ ವೇದಿಕೆ ದೊರೆಯದೆ ವಂಚಿತರಾಗುತ್ತಿದ್ದಾರೆಂಬುದಕ್ಕೆ ಚಿಕ್ಕೋಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವೇ ಜೀವಂತ ನಿದರ್ಶನ.

ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಬೇಕಿತ್ತು. ಒಂದು ಗಂಟೆ ತಡವಾಗಿ ಆರಂಭವಾಯಿತು. ಆದರೆ, ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿದ್ದ ಚಿಕ್ಕೋಡಿ ಜಿಲ್ಲೆಯ ಎಲ್ಲ ವಲಯಗಳಿಂದ ಮಕ್ಕಳನ್ನು ಬೆಳಗ್ಗೆ 9 ಗಂಟೆಗೆಯೇ ಕರೆದುಕೊಂಡು ಬಂದು ಸುಡುವ ಬಿಸಿಲಿನಲ್ಲಿಯೇ ಕೂಡ್ರಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸುವ ಅತಿಥಿಗಳಿಗಾಗಿ ಮಾತ್ರ ಪೆಂಡಾಲ ಹಾಕಲಾಗಿತ್ತು. ಶಿಕ್ಷಣ ಇಲಾಖೆಯ ಜಿಲ್ಲಾ ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ನೆರಳಿನಲ್ಲಿ ಕುಳಿತಿದ್ದರು.

ನೆರಳಿನಲ್ಲಿ ಕುಳಿತಿದ್ದ ಅಧಿಕಾರಿಗಳಿಗೆ ಬಿಸಲಿನಲ್ಲಿ ಕುಳಿತಿದ್ದ ಮಕ್ಕಳ ಬಗ್ಗೆ ಯಾವ ಅಧಿಕಾರಿಗಳು ಗಮನ ಹರಿಸದಿರುವುದು ವಿಷಾದನೀಯ ಸಂಗತಿ ಎಂಬ ಮಾತು ಕಾರ್ಯಕ್ರಮದಲ್ಲಿ ಭಾಗವಹಿಸಲು ಮಕ್ಕಳನ್ನು ಕರೆ ತಂದಿರುವ ಶಿಕ್ಷಕ ವಲಯದಿಂದ ಕೇಳಿ ಬರುತ್ತಿದ್ದವು. ಬಿಸಿಲಿನಲ್ಲಿ ಕುಳಿತಿದ್ದ ಮಕ್ಕಳು ನೆರಳಿನಲ್ಲಿ ಕುಳಿತಿದ್ದ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿರುವುದು ಸಾಮಾನ್ಯವಾಗಿತ್ತು.

ಖುರ್ಚಿ ಖಾಲಿ ಖಾಲಿ ಅವ್ಯವಸ್ಥೆಯ ಆಗದ್ದರಿಂದ ಕೂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಆರಂಭವಾಗುವಷ್ಟರಲ್ಲಿಯೇ ಸುಮಾರು ಎರಡು ಗಂಟೆಗಳ ಬಿಸಿಲಿನಲ್ಲಿಯೇ ಕಾಯ್ದು ಕುಳಿತಿದ್ದ ಮಕ್ಕಳು ಮತ್ತು ಶಿಕ್ಷಕರು ಖುರ್ಚಿಗಳನ್ನು ಖಾಲಿ ಮಾಡಿ ನೆರಳಿನತ್ತ ಸಾಗಿದ್ದರು.

ಹೀಗಾಗಿ ಕಾರ್ಯಕ್ರಮ ಉದ್ಘಾಟಿಸಿದ ಡಿಡಿಪಿಐ ಮೋಹನ ಹಂಚಾಟೆಯವರು ಭಾಷಣ ಮಾಡುತ್ತಿದ್ದಾಗ ವೇದಿಕೆ ಎದುರಿನ ಎಲ್ಲ ಖುರ್ಚಿ ಖಾಲಿಯಾಗಿದ್ದವು. ಖುರ್ಚಿಗಳು ಖಾಲಿಯಾಗಿರುವುದನ್ನು ಕಂಡು ಡಿಡಿಪಿಐ ಮೋಹನ ಹಂಚಾಟೆಯವರು ತಮ್ಮ ಭಾಷಣ ಮೊಟಕುಗೊಳಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಸ್ಪರ್ಧೆಗಳು ನಡೆಯುವ ಕೊಠಡಿಗೆ ಹೋಗಬೇಕು ಎಂದು ಖಾಲಿ ಖುರ್ಚಿಗಳ ಸಮರ್ಥನೆ ಮಾಡಿಕೊಂಡರು. ಆದರೆ, ಮಕ್ಕಳ ಬಗ್ಗೆ ಡಿಡಿಪಿಐ ಸೇರಿದಂತೆ ಜಿಲ್ಲಾ ಮತ್ತು ತಾಲೂಕಾ ಮಟ್ಟದ ನಮ್ಮ ಅಧಿಕಾರಿಗಳಿಗೆ ಯಾವುದೇ ಕಾಳಜಿ ಇಲ್ಲ. ಇದೊಂದು ಮಕ್ಕಳ ಪ್ರತಿಭೆ ಕುಗ್ಗಿಸುವ ಕಾರ್ಯಕ್ರಮ ಎಂಬ ಮಾತು ಶಿಕ್ಷಕ ಬಳಗದಲ್ಲಿ ಚರ್ಚೆ ನಡೆಯುತ್ತಿರುವುದು ಕಂಡು ಬಂದಿತು.

ಅವ್ಯವಸ್ಥೆಯ ಆಗರ :

ಇದೊಂದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ. ಇಲ್ಲಿ ಸ್ಪರ್ಧೆಯಲ್ಲಿ ಭಾಗಹಿಸುವ ಮಕ್ಕಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿರುವ ಮಕ್ಕಳಿಗೆ ಬೆಳಗ್ಗೆ ಮಾಡಿದ್ದ ಉಪಹಾರ ಸೇವಿಸಲು ಶಿಕ್ಷಣ ಇಲಾಖೆ ಪ್ಲೇಟ್ ವ್ಯವಸ್ಥೇ ಸಹ ಮಾಡಿರಲಿಲ್ಲ. ಮಕ್ಕಳು ತಮ್ಮ ನೋಟ್ ಬುಕ್ಕನಲ್ಲಿ ಕಾಗದ ಹರಿದುಕೊಂಡು ಉಪ್ಪಿಟ್ಟು ತಿನ್ನುತ್ತಿರುವುದು ಸಾಮಾನ್ಯವಾಗಿತ್ತು. ಮಕ್ಕಳು ಮತ್ತು ಶಿಕ್ಷಕರು ಶೌಚಾಲಯಕ್ಕಾಗಿ ಸಹ ಪರದಾಡಿದ ಘಟನೆ ನಡೆಯಿತು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.