ಬೆಳಗಾವಿ : ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹಾವು ಮುಂಗುಸಿ ಇದ್ದಂಗೆ. ಯಾರು, ಯಾರನ್ನು, ಯಾವಾಗ ಹೊಡಿಯಬೇಕೆಂದು ಇಬ್ಬರೂ ಕಾಯುತ್ತಾ ಕುಳಿತಿದ್ದಾರೆ. ಚಾನ್ಸ್ ಸಿಕ್ಕರೆ ತಲೆ ತೆಗೆದೇ ಬಿಡೋದು ಎನ್ನುತ್ತಿದ್ದಾರೆ. ಇಂತವರ ನೇತೃತ್ವದಿಂದ ರಾಜ್ಯ ಮತ್ತು ದೇಶಕ್ಕೆ ಯಾವುದೇ ರೀತಿ ಒಳ್ಳೆಯದಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಉಪಚುನಾವಣೆ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಕೆ ಬಳಿಕ ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಓದಿ : ರಾಜ್ಯದ ಎಲ್ಲಾ ಜನರಿಗೂ ಮನೆ ಕಟ್ಟಿಸಿಕೊಡುತ್ತೇನೆ : ಸಿಎಂ ಬಿಎಸ್ವೈ
ಸಿದ್ದರಾಮಯ್ಯನವರ ವರ್ಚಸ್ಸು ಕಡಿಮೆ ಮಾಡಲು ಡಿ ಕೆ ಶಿವಕುಮಾರ್ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಯಾರು, ಯಾರನ್ನು, ಯಾವಾಗ ಏನು ಮಾಡುತ್ತಾರೆ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಎಂದರೆ ಭೂತ ಕಾಲದ ಪಕ್ಷ ಇದ್ದಂಗೆ. ಮೋದಿ ಮಾಡಿದ್ದನ್ನು ವಿರೋಧ ಮಾಡುವುದೇ ಕಾಂಗ್ರೆಸ್ ಪಕ್ಷದವರ ಕೆಲಸವಾಗಿದೆ.
ಬೆಳಗಾವಿ ಜನರು ತೀರ್ಮಾನ ಮಾಡಬೇಕಿದೆ. ಮೋದಿ ಸರ್ಕಾರದ ಮಾಡಿದ ಎಲ್ಲಾ ಕಾರ್ಯಗಳಿಗೆ ಬೆಂಬಲ ನೀಡುವ ಸದ್ಗುಣ ಗೃಹಿಣಿಯನ್ನು ಲೋಕಸಭೆಗೆ ಕಳಿಸಬೇಕು. ಏನೂ ತಿಳಿಯದ ರಾಹುಲ್ ಗಾಂಧಿ ಮಾತನ್ನು ಯಾವುದೇ ಕಾರಣಕ್ಕೂ ಕೇಳಬಾರದು ಎಂದು ಹೇಳಿದರು.
ಸತೀಶ್ ಜಾರಕಿಹೊಳಿಯವರು, 'ನಾ ಕೈಮುಗಿಯುತ್ತೇನೆ ಮಾರಾಯಾ, ನನ್ನ ಬಿಟ್ಟು ಬಿಡಿ' ಎಂದರೂ ಕೆಪಿಸಿಸಿಯವರು ನಾಮಿನೇಶನ್ ಮಾಡಿಸಿದ್ದಾರೆ. ಸುರೇಶ್ ಅಂಗಡಿಯವರು ಮಾಡಿದ ಕೆಲಸವನ್ನು ಮಂಗಳಾ ಅವರು ಮುಂದುವರಿಸಿಕೊಂಡು ಹೋಗುತ್ತಾರೆ. ಇಡೀ ಬಿಜೆಪಿ ಪಕ್ಷ ಮಂಗಳಾ ಅಂಗಡಿಯವರ ಪರ ಇರುತ್ತದೆ ಎಂದು ಭರವಸೆ ನೀಡಿದರು.