ಬೆಳಗಾವಿ: ಜೀವ ಭಯದಲ್ಲೇ ಕಾರ್ಯನಿರ್ವಹಿಸುತ್ತಿರುವ ಸ್ಮಶಾನ ಸಿಬ್ಬಂದಿ ಸಂಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸಿದೆ. ಸ್ಮಶಾನ ಕಾವಲುಗಾರ ಹಾಗೂ ಆ್ಯಂಬುಲೆನ್ಸ್ ಚಾಲಕರಿಗೆ ಜಿಲ್ಲಾಡಳಿತ ಪಿಪಿಇ ಕಿಟ್ ಪೂರೈಸಿದೆ.
![ಸ್ಮಶಾನ ಕಾವಲುಗಾರರಿಗೆ ಪಿಪಿಇ ಕಿಟ್ ಪೂರೈಸಿದ ಜಿಲ್ಲಾಡಳಿತ](https://etvbharatimages.akamaized.net/etvbharat/prod-images/kn-bgm-07-27-ppe-kit-impact-news-ka10029_27072020192058_2707f_02766_56.jpg)
ಇದನ್ನು ಓದಿ: ಪಿಪಿಇ ಕಿಟ್ ಧರಿಸದೇ ಅಂತ್ಯ ಸಂಸ್ಕಾರ; ಸಿಬ್ಬಂದಿಗೆ ಕಿಟ್ ನೀಡದ ಬೆಳಗಾವಿ ಪಾಲಿಕೆ?
ಈ ಕುರಿತು ನಿನ್ನೆಯಷ್ಟೇ 'ಈಟಿವಿ ಭಾರತ' ವರದಿ ಮಾಡಿತ್ತು. ಈ ವರದಿ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಮಶಾನ ಸಿಬ್ಬಂದಿಗೆ ಮಾಸ್ಕ್, ಪಿಪಿಇ ಕಿಟ್ ನೀಡಿದ್ದಾರೆ. ಈ ಮೊದಲು ಸ್ಮಶಾನ ಕಾವಲುಗಾರರು ಹಾಗೂ ಪಾಲಿಕೆಯ ಆ್ಯಂಬುಲೆನ್ಸ್‌ನಲ್ಲಿ ಜನಸಾಮಾನ್ಯರ ಶವ ತರುತ್ತಿದ್ದ ಚಾಲಕರು ಮಾಸ್ಕ್ ಹಾಗೂ ಪಿಪಿಇ ಕಿಟ್ ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದರು. ಮಹಾನಗರ ಪಾಲಿಕೆಯ ಬೇಜವಾಬ್ದಾರಿ ಬಗ್ಗೆ 'ಈಟಿವಿ ಭಾರತ' ಜಿಲ್ಲಾಡಳಿತದ ಗಮನ ಸೆಳೆದಿತ್ತು.