ETV Bharat / state

ನಿಷೇಧವಿದ್ದರೂ ಬೆಳಗಾವಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಒಪಿ ಗಣಪತಿ ಮೂರ್ತಿಗಳು.. ಪರಿಸರ ಪ್ರೇಮಿಗಳ ಆತಂಕ..

ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ಜಿಲ್ಲೆಯಲ್ಲಿ ನಿಷೇಧವಿದೆ. ಆದರೂ ಹೊರ ರಾಜ್ಯಗಳಿಂದ ಪಿಒಪಿ ಮೂರ್ತಿಗಳು ನಗರಕ್ಕೆ ಬರುತ್ತಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಜಿಲ್ಲಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರ ಜೊತೆಗೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ..

ಪಿಒಪಿ ಗಣಪತಿ ಮೂರ್ತಿಗಳು
ಪಿಒಪಿ ಗಣಪತಿ ಮೂರ್ತಿಗಳು
author img

By

Published : Aug 3, 2023, 9:19 PM IST

Updated : Aug 3, 2023, 9:47 PM IST

ಪಿಒಪಿ ಗಣೇಶ ಮೂರ್ತಿಗಳು

ಬೆಳಗಾವಿ: ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ನಿಷೇಧವಿದ್ದರೂ, ಬೆಳಗಾವಿಯಲ್ಲಿ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ತರಹೇವಾರಿ ಗಣೇಶನ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಲವಾರು ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಮಾತ್ರ ಅನುಮತಿ ನೀಡಬೇಕೆಂದು ಜಿಲ್ಲೆಯ ಪರಿಸರ ಪ್ರೇಮಿಗಳು ಆಗ್ರಹಿಸುತ್ತಿದ್ದಾರೆ.

ಹೌದು, ಗಣೇಶೋತ್ಸವಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗ ಬೆಳಗಾವಿಯಲ್ಲಿ ಗಣೇಶ ಮೂರ್ತಿಗಳ ತಯಾರಿಕೆ ಭರದಿಂದ ಸಾಗಿದೆ. ಪರಿಸರ ಸ್ನೇಹಿ ಮೂರ್ತಿ ತಯಾರಕರು, ಮಾರಾಟಗಾರರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಪರಿಸರ ಸ್ನೇಹಿ ಗಣಪನ ಬಳಕೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿರೋದು ಪರಿಸರ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಪಿಒಪಿ ಗಣೇಶ ಮಾರಾಟ ನಿಷೇಧ, ಉಲ್ಲಂಘಿಸಿದರೆ ದಂಡ ಜೈಲು ಶಿಕ್ಷೆ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮತ್ತು ಹಾನಿಕಾರಕ ರಾಸಾಯನಿಕಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟವನ್ನು ಜುಲೈ 20, 2016ರ ಅಧಿಸೂಚನೆಯ ಪ್ರಕಾರ ಜಲ ಕಾಯಿದೆ, 1974 ರ ಸೆಕ್ಷನ್ 33 (A) ಅಡಿಯಲ್ಲಿ ನಿಷೇಧಿಸಲಾಗಿದೆ.

ಅಪರಾಧಿಗಳು 10 ಸಾವಿರ ರೂ. ದಂಡ ತುಂಬಬೇಕಾಗುತ್ತದೆ. ಅಲ್ಲದೇ 1974 ರ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆಯ ಸೆಕ್ಷನ್ 45ಎ ಅಡಿ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಇಷ್ಟೆಲ್ಲ ಕಾಯ್ದೆ ಇದ್ದರೂ, ಬೆಳಗಾವಿ, ಚಿಕ್ಕೋಡಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿಗಳಿವೆ. ಪ್ರತ್ಯೇಕ ಪರಿಸರ ಅಧಿಕಾರಿಗಳು ಇದ್ದಾರೆ.

ಆದರೆ ಅಧಿಕಾರಿಗಳ ಕಣ್ತಪ್ಪಿಸಿ, ಬಹಳ ದೊಡ್ಡ ಪ್ರಮಾಣದಲ್ಲಿ ಪಿಒಪಿ ಮೂರ್ತಿಗಳು ಮಾರುಕಟ್ಟೆಗೆ ಬಂದಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಪ್ರಜ್ಞಾವಂತರನ್ನು ಕಾಡುತ್ತಿದೆ‌. ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದಲೂ ಮೂರ್ತಿಗಳು ಬರುತ್ತಿದ್ದು, ತಡೆಯುವ ಪ್ರಯತ್ನ ನಡೆದಿಲ್ಲ. ಅಲ್ಲದೇ ಈ ಸಂಬಂಧ ಜಿಲ್ಲಾಡಳಿತ ಈ ವರೆಗೆ ಸಭೆಯನ್ನೂ ಕೂಡ ಮಾಡಿಲ್ಲ.

ಬೆಳಗಾವಿ ಜಿಲ್ಲೆಯಲ್ಲಿ ಬೆರಳಣಿಕೆಯಷ್ಟು ಮಣ್ಣಿನ ಗಣೇಶ ಮೂರ್ತಿ ತಯಾರಕರಿದ್ದು, ಬಹಳಷ್ಟು ವ್ಯಾಪಾರಿಗಳು ಪಿಒಪಿ ಗಣಪನನ್ನು ನೆಚ್ಚಿಕೊಂಡಿದ್ದಾರೆ. ಜನ ಕೂಡ ಬಣ್ಣ ಬಣ್ಣದ ಆಕರ್ಷಕ ಮತ್ತು ಸುಂದರವಾದ ತರಹೇವಾರಿ ಪಿಒಪಿ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇಡುತ್ತಿದ್ದಾರೆ.

ಪರಿಸರ ಸ್ನೇಹಿ ಗಣೇಶ ಮೂರ್ತಿ:ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ನೈಸರ್ಗಿಕ ಮಣ್ಣು, ಕೆಂಪು ಮಣ್ಣು, ನಾರು, ಪೇಪಿಯರ್ ಮ್ಯಾಚೆ ಮತ್ತು ಇತರ ಜೈವಿಕ ವಿಘಟನೀಯ ವಸ್ತುಗಳಿಂದ ಮಾಡಲಾಗಿರುತ್ತದೆ. ಅವುಗಳಿಗೆ ನೈಸರ್ಗಿಕ ಬಣ್ಣ ಉಪಯೋಗಿಸಲಾಗಿರುತ್ತದೆ. ಪರಿಸರ ಸ್ನೇಹಿ ವಿಗ್ರಹಗಳು ನೀರಿನಲ್ಲಿ ಬೇಗ ಕರಗುತ್ತವೆ. ಇದರಿಂದ ಪರಿಸರಕ್ಕೆ ಹಾನಿ ಆಗುವುದಿಲ್ಲ.

ಪರಿಸರ ಸ್ನೇಹಿ ಗಣೇಶ ಮೂರ್ತಿ ಗ್ರಾಹಕರು ಕೇಳುತ್ತಿಲ್ಲ.. ನೆಹರು ನಗರದ ವ್ಯಾಪಾರಿ ಸಂತೋಷ ಬಡಿಗೇರ ಈಟಿವಿ ಭಾರತ ಜೊತೆಗೆ ಮಾತನಾಡಿ, ನಾವು 12 ವರ್ಷಗಳಿಂದ ಗಣೇಶ ಮೂರ್ತಿ ಮಾರಾಟ ಮಾಡುತ್ತಿದ್ದೇವೆ. ಮಹಾರಾಷ್ಟ್ರದ ಮುಂಬೈನಿಂದ ಸಂತ ತುಕಾರಾಮ, ಮಾವುಲಿ, ಲಾಲಬಾಗ್ ಚಾ ರಾಜಾ, ಲಂಬೋದರ, ಸಿಂಹಾಸನ, ಚಿಂತಾಮಣಿ, ಮಾವುಲಿ, ದಗಡುಶೇಟ ಸೇರಿ ಮತ್ತಿತರ ಶೈಲಿಯ ಮೂರ್ತಿಗಳನ್ನು ತರಿಸಿ ಮಾರಾಟ ಮಾಡುತ್ತಿದ್ದೇವೆ. ನಮ್ಮ ಬಳಿ ಬರುವ ಬಹಳಷ್ಟು ಗ್ರಾಹಕರು ಮಣ್ಣಿನ ಮೂರ್ತಿಗಳಿಗಿಂತ ಪಿಒಪಿ ಗಣಪತಿಗಳಿಗೆ ಹೆಚ್ಚು ಬೇಡಿಕೆ ಇಡುತ್ತಾರೆ. ಹಾಗಾಗಿ ಪಿಒಪಿ ಗಣಪತಿಗಳನ್ನು ಮಾರಾಟಕ್ಕೆ ಇಟ್ಟಿದ್ದೇವೆ. ಒಂದು ವೇಳೆ ಗ್ರಾಹಕರು ಮಣ್ಣಿನ ಮೂರ್ತಿ ಕೇಳಿದರೆ ನಾವು ನೀಡಲು ಸಿದ್ಧರಿದ್ದೇವೆ ಎಂದರು.

ಅಧಿಕಾರಿಗಳು ಏನಂತಾರೆ? ಮಹಾನಗರ ಪಾಲಿಕೆ ಆಯುಕ್ತ ಅಶೋಕ್​ ದುಡಗುಂಟಿ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ಪಿಒಪಿ ಗಣೇಶ ಮೂರ್ತಿಗಳ ಮಾರಾಟಕ್ಕೆ ನಿಷೇಧವಿದೆ. ಆದರೂ ಹೊರ ರಾಜ್ಯಗಳಿಂದ ಪಿಒಪಿ ಮೂರ್ತಿಗಳು ನಗರಕ್ಕೆ ಬಂದಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೇ ಜಿಲ್ಲಾಧಿಕಾರಿಗಳು, ನಗರ ಪೊಲೀಸ್ ಆಯುಕ್ತರ ಜೊತೆಗೆ ಸಭೆ ನಡೆಸಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯ ಪರಿಸರ ಮಾಲಿನ್ಯ ಮಂಡಳಿಯ ಪರಿಸರ ಅಧಿಕಾರಿ ಶೋಭಾ ಪೋಳ ಮಾತನಾಡಿ, ಬೆಳಗಾವಿಯಲ್ಲಿ ಪಿಒಪಿ ಗಣಪತಿ ಮೂರ್ತಿಗಳ ತಯಾರಿಕೆ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ. ಅಲ್ಲದೇ ಈ ಸಂಬಂಧ ಮಹಾನಗರ ಪಾಲಿಕೆ ಸೇರಿ ಸ್ಥಳಿಯ ಸಂಸ್ಥೆಗಳಿಗೆ ಪತ್ರ ಬರೆದಿದ್ದೇವೆ. ಒಂದು ವೇಳೆ ಪಿಒಪಿ ಗಣೇಶ ಮೂರ್ತಿಗಳು ಕಂಡು ಬಂದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಇನ್ನು ಗ್ರಾಹಕ ಸಂಜಯ ಸುತಾರ ಮತ್ತು ಓಂಕಾರ‌ ಲೋಹಾರ ಮಾತನಾಡಿ, ನೆಹರು ನಗರದಲ್ಲಿ ತುಂಬಾ ಆಕರ್ಷಕ ಮತ್ತು ಸುಂದರ ಗಣಪತಿ ಮೂರ್ತಿ ತಯಾರು ಮಾಡುತ್ತಾರೆ. ಹಾಗಾಗಿ ಪ್ರತಿ ವರ್ಷ ನಾವು ಇಲ್ಲಿಯೇ ತೆಗೆದುಕೊಂಡು ಹೋಗುತ್ತೇವೆ. ಗಣಪತಿ ದೇವರು ನಮಗೆ ಒಳ್ಳೆಯದು ಮಾಡುತ್ತಾನೆ ಎಂದರು.

ಜನರ ಬೇಡಿಕೆಯಂತೆ ನಾವು ಗಣೇಶ ಮೂರ್ತಿ ಮಾರುತ್ತಿದ್ದೇವೆ ಎಂದು ವ್ಯಾಪಾರಿಗಳು ಹೇಳುತ್ತಿದ್ದರೆ, ಅಧಿಕಾರಿಗಳು ಮಾತ್ರ ಇನ್ನು ಸಭೆ ಮಾಡುವ ಬಗ್ಗೆ ಚಿಂತನೆಯಲ್ಲಿದ್ದಾರೆ .ಆದರೆ ಬೇರೆ ರಾಜ್ಯಗಳಿಂದ ಪಿಒಪಿ ಗಣಪತಿ ಆಮದು ಜಿಲ್ಲೆಯಲ್ಲಿ ಜೋರಾಗಿ ನಡೆಯುತ್ತಿದೆ.

ಇದನ್ನೂ ಓದಿ: ಗಣೇಶ ಚತುರ್ಥಿಗೆ ದಿನಗಣನೆ: ಕುನ್ನೂರಿನಲ್ಲಿ ಸಿದ್ಧವಾಗುತ್ತಿವೆ ಪ್ರಸಿದ್ಧ ಗಣೇಶ ಮೂರ್ತಿಗಳು..

Last Updated : Aug 3, 2023, 9:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.