ETV Bharat / state

ಕಾಮಗಾರಿ ಎಡವಟ್ಟಿನಿಂದ ಜಮೀನಿನಲ್ಲಿ‌ ನಿಂತ ನೀರು: ರೈತರ ಆಕ್ರೋಶ - poor work construction alligations

ಚಿಕ್ಕೋಡಿಯ ಪಶ್ಚಿಮ ಭಾಗದಲ್ಲಿ ಬರಡು ಭೂ ಪ್ರದೇಶಕ್ಕೆ ನೀರಾವರಿಯ ಅನುಕೂಲಕ್ಕಾಗಿ ನೀರಾವರಿ ಯೋಜನೆಯ ಕಾಮಗಾರಿ ನಡೆದಿದೆ. ಆದರೆ, ಕಾಮಗಾರಿ ಮುಗಿದ ಮೇಲೆ ಕಾಲುವೆ ಸರಿಪಡಿಸದೇ ಸಂಪೂರ್ಣವಾಗಿ ಮುಚ್ಚಲಾಗಿದೆ. ಇದರಿಂದ ಮಳೆ ನೀರು ಬೇರೆ ಕಡೆ ಹೋಗದೇ ಜಮೀನುಗಳಲ್ಲಿ ನಿಂತು ಸುಮಾರು 200 ಎಕರೆಯಲ್ಲಿನ ಬೆಳೆ ನಾಶವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

poor work construction alligations against amrutha constructions
ರೈತರ ಆಕ್ರೋಶ
author img

By

Published : Nov 2, 2020, 1:01 PM IST

ಚಿಕ್ಕೋಡಿ: ಬೆಳಗಾವಿ‌ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಅಮೃತ ಕನ್ಟ್ರಕ್ಷನ್​​ನಿಂದ ಬೃಹತ್ ನೀರಾವರಿ ಯೋಜನೆಯೊಂದು ಕಾರ್ಯಾರಂಭದಲ್ಲಿದೆ. ಆದರೆ, ಈ ಯೋಜನೆಯ ಗುತ್ತಿಗೆದಾರನ ಎಡವಟ್ಟಿನಿಂದ ನೂರಾರು ಎಕರೆಯಷ್ಟು ಭೂಪ್ರದೇಶ ಹಾಳಾಗುತ್ತಿದೆ. ಹೀಗಾಗಿ ಜಮೀನಿನಲ್ಲಿ ನಿಂತ ನೀರಿನಿಂದ ಬೆಳೆಗಳೆಲ್ಲವೂ ಹಾಳಾಗಿವೆ.

ಕಾಮಗಾರಿ ಎಡವಟ್ಟು: ರೈತರ ಆಕ್ರೋಶ
ಚಿಕ್ಕೋಡಿಯ ಪಶ್ಚಿಮ ಭಾಗದಲ್ಲಿ ಬರಡು ಭೂಪ್ರದೇಶಕ್ಕೆ ನೀರಾವರಿ ಅನುಕೂಲಕ್ಕಾಗಿ ನೀರಾವರಿ ಯೋಜನೆಯ ಕಾಮಗಾರಿಯು ಪ್ರಗತಿಯಲ್ಲಿದೆ. ಆದರೆ, ಈ ಕಾಮಗಾರಿಯ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಅಂಕಲಿ ಚಿಕ್ಕೋಡಿ ರಸ್ತೆಯ ಪಕ್ಕದ ಕಾಲುವೆ ಅಗೆದು ಪೈಪ್​​​ ಲೈನ್​​ ಹಾಕಲಾಗಿದೆ.
ಆದರೆ, ಕಾಮಗಾರಿ ಮುಗಿದ ಮೇಲೆ ಕಾಲುವೆ ಸರಿಪಡಿಸದೇ ಕಾಲುವೆ ಸಂಪೂರ್ಣವಾಗಿ ಮುಚ್ಚಲಾಗಿದೆ. ಇದರಿಂದ ಮಳೆ ನೀರು ಬೇರೆ ಕಡೆ ಹೋಗದೆ ರಸ್ತೆಯ ಮೇಲೆ ಹಾಗೂ ಜಮೀನುಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಈ ಭಾಗದ ರೈತರ ಮುಂಗಾರು ಬೆಳೆ ಹಾಳಾದರೂ ಹಿಂಗಾರು ಬೆಳೆ ಬೆಳೆಯಬೇಕಾಗಿದ್ದ ರೈತರಿಗೆ ಈ ಬೃಹತ್ ಕಾಮಗಾರಿಯಿಂದ ಸುಮಾರು 200 ಎಕರೆಗಿಂತ ಅಧಿಕ ಜಮೀನಿನಲ್ಲಿ‌ ನೀರು ನಿಂತ ಪರಿಣಾಮ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಸುತ್ತಮುತ್ತಲಿನ ರೈತರು ತೊಂದರೆ ಅನುಭವಿಸುವ ಪರಿಸ್ಥಿತಿ ಎದುರಾಗಿದೆ‌. ಗುತ್ತಿಗೆದಾರನ ನಿರ್ಲಕ್ಷ್ಯದಿಂದ ನಮಗೆ ನಷ್ಟವಾಗುತ್ತಿದೆ ಎಂದು ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಅಂದ ಹಾಗೆ ಈ ಬೃಹತ್ ಕಾಮಗಾರಿಯು ಕೃಷ್ಣಾ ನದಿಯಿಂದ ಚಿಕ್ಕೋಡಿ ತಾಲೂಕಿನ ಮಡ್ಡಿ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಆರಂಭವಾಗಿದೆ. ಬೆಂಗಳೂರಿನ ಅಮೃತ ಕನ್ಟ್ರಕ್ಷನ್ ಕಂಪನಿಯವರು ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ, ಕಾಮಗಾರಿಯ ವೇಳೆ ರೈತರ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಇದರ ನಷ್ಟವನ್ನು ಈ ಕಂಪನಿಯವರು ತುಂಬಿ ಕೊಡಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.