ಬೆಳಗಾವಿ: ಕೊರೊನಾ ವ್ಯಾಕ್ಸಿನ್ ತಯಾರಿಸಿದ ಎರಡು ಕಂಪನಿಗಳ ಮಧ್ಯೆ ವ್ಯಾಕ್ಸಿನ್ ವಾರ್ನ ಜತೆಗೆ ರಾಜಕೀಯ ಬೆರೆಸಬಾರದು. ಮನುಷ್ಯರ ಜೀವ ಉಳಿಸಲು ಕೊವ್ಯಾಕ್ಸಿನ್ ಸಿದ್ಧಪಡಿಸಲಾಗಿದೆ ಎಂದು ಕ್ಲಿನಿಕಲ್ ಟ್ರಯಲ್ ನಡೆಸುತ್ತಿರುವ ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆ ವೈದ್ಯ ಡಾ.ಅಮಿತ್ ಭಾತೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೊವ್ಯಾಕ್ಸಿನ್ ಬಗ್ಗೆ ಅಪಸ್ವರಕ್ಕೆ ಕ್ಲಿನಿಕಲ್ ಟ್ರಯಲ್ ನಡೆಸುತ್ತಿರುವ ವೈದ್ಯ ಡಾ.ಅಮಿತ್ ಭಾತೆ ಮಾತನಾಡಿ, ಕೊವ್ಯಾಕ್ಸಿನ್, ಕೋವಿಶಿಲ್ಡ್ ಎರಡು ಲಸಿಕೆಗೆ ಡಿಸಿಜಿಐ ಅನುಮತಿ ನೀಡಿದೆ. ಈ ಎರಡು ವ್ಯಾಕ್ಸಿನ್‌ಗಳು ಇಕ್ವಲಿ ಎಫೆಕ್ಟ್ ಇವೆ. ಎಲ್ಲರೂ ವ್ಯಾಕ್ಸಿನ್ ವಾರ್ ಶುರು ಮಾಡಿದ್ದಾರೆ. ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆ ಸೇರಿ 25 ಆಸ್ಪತ್ರೆಗಳಲ್ಲಿ 26 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ನಾನು ಖುದ್ದಾಗಿ ಈ ಲಸಿಕೆಯ ಎಫೆಕ್ಟ್ ಯಾವ ರೀತಿ ಇದೆ ಎಂದು ನೋಡಿದ್ದೇನೆ. ಕೊವ್ಯಾಕ್ಸಿನ್ ಲಸಿಕೆಯಿಂದ ಯಾವುದೇ ಸೈಡ್ ಎಫೆಕ್ಟ್ ಆಗಿಲ್ಲ. ಎರಡು ಕಂಪನಿಗಳ ಮಧ್ಯೆ ವ್ಯಾಕ್ಸಿನ್ ವಾರ್, ರಾಜಕಾರಣ ಆಗಬಾರದು. ಮನುಷ್ಯರ ಜೀವ ಉಳಿಸಲು ವ್ಯಾಕ್ಸಿನ್ ಸಿದ್ಧಪಡಿಸಲಾಗಿದೆ. ಕೊವ್ಯಾಕ್ಸಿನ್, ಕೋವಿಶಿಲ್ಡ್ ಇರಲಿ ಆರೋಗ್ಯದ ಹಿತಕ್ಕಾಗಿ ಮಾಡಲಾಗಿದ್ದು, ಈ ಎರಡು ವ್ಯಾಕ್ಸಿನ್‌ಗಳ ಡೇಟಾ ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಕೆಯಾಗಿವೆ ಎಂದರು.
ಕೊವ್ಯಾಕ್ಸಿನ್ ಲಸಿಕೆ ಮಕ್ಕಳಿಗೆ ಕೊಡುವ ವಿಚಾರಕ್ಕೆ, ರೂಪಾಂತರಿ ಕೊರೊನಾ ವೈರಸ್ 18 ವರ್ಷದೊಳಗಿನವರ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಮಾಹಿತಿ ಇದೆ. ಮಕ್ಕಳಿಗಾಗಿ ಬೇರೆ ವ್ಯಾಕ್ಸಿನ್ ತಯಾರಿಸಲು ಭಾರತ್ ಬಯೋಟೆಕ್ ಸಿದ್ಧತೆ ನಡೆಸಿದೆ. ಬೆಳಗಾವಿಯಲ್ಲಿ ಈವರೆಗೂ 2000 ಜನರಿಗೆ ಕೊವ್ಯಾಕ್ಸಿನ್ ನೀಡಿದ್ದು, ಯಾರಿಗೂ ಸೈಡ್ ಎಫೆಕ್ಟ್ ಆಗಿಲ್ಲ. ಮೊದಲ ಮತ್ತು ಎರಡು ಹಂತದ ಕ್ಲಿನಿಕಲ್ ಟ್ರಯಲ್ ಡೇಟಾ ಈಗಾಗಲೇ ಸಲ್ಲಿಕೆಯಾಗಿದೆ. ಇನ್ನೊಂದು ತಿಂಗಳಲ್ಲಿ ಮೂರನೇ ಹಂತದ ಡೇಟಾ ಸಲ್ಲಿಕೆಯಾಗಬಹುದು.
ಕೊರೊನಾ ವೈರಸ್ ಪಾಲಿಟಿಕ್ಸ್ ನೋಡಲ್ಲ. ಇದು ಬಿಜೆಪಿ ವ್ಯಾಕ್ಸಿನ್ ಕಾಂಗ್ರೆಸ್ ವ್ಯಾಕ್ಸಿನ್ ಅಂತಾ ನೋಡಬಾರದು. ನಮ್ಮ ದೇಶದಿಂದ ಕೊರೊನಾ ಹೊಡೆದೊಡಿಸಲು ನಾವೆಲ್ಲರೂ ಹೋರಾಡಬೇಕು ಎಂದು ಡಾ.ಅಮಿತ್ ಭಾತೆ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.