ETV Bharat / state

ಕಲಬೆರಕೆ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸ್​ ದಾಳಿ : ಆರೋಪಿ ಅಂದರ್​

ಅಥಣಿ ತಾಲೂಕಿನ ಝುಂಜರವಾಡ ಗ್ರಾಮದ ಹೊರವಲಯದಲ್ಲಿರುವ ಕಲಬೆರಕೆ ಹಾಲು ತಯಾರಿಕಾ ಘಟಕದ ಮೇಲೆ ಡಿಸಿಪಿಬಿ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

accused
ಆರೋಪಿ ಅಂದರ್​
author img

By

Published : Feb 25, 2020, 5:43 AM IST

Updated : Feb 25, 2020, 8:49 AM IST

ಅಥಣಿ: ಕಲಬೆರಕೆ ಹಾಲು ತಯಾರಿಕಾ ಘಟಕದ ಮೇಲೆ ಡಿಸಿಪಿಬಿ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಝುಂಜರವಾಡ ಗ್ರಾಮದ ಹೊರವಲಯದ ಮನೆಯೊಂದರಲ್ಲಿ ನಡೆದಿದೆ.

ಉಮರ್​ ಅಲಿ ಹಾಜೀಸಾಬ (23) ಬಂಧಿತ ಆರೋಪಿ. ಬೆಳಗಾವಿ ಜಿಲ್ಲೆ ಪೊಲೀಸ್ ಸಿಬ್ಬಂದಿಯು ಎಸ್ಪಿಯವರ ಮಾರ್ಗದರ್ಶನದಂತೆ ಡಿಸಿಪಿಬಿ ಘಟಕದ ಪೊಲೀಸ್​ ಇನ್ಸ್​ಪೆಕ್ಟರ್ ನಿಂಗನಗೌಡ ಪಾಟೀಲ್ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದೆ. ಸುಮಾರು 49,270 ಲೀಟರ್​​ಗೂ ಅಧಿಕ ಕಲಬೆರಕೆ ಹಾಲು ಹಾಗೂ ಕಲಬೆರಕೆ ಮಾಡುವ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ.

ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

Last Updated : Feb 25, 2020, 8:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.