ETV Bharat / state

ಜನರ ರಕ್ಷಣೆಗಾಗಿ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಿದ ಪೊಲೀಸರು

ಕೊರೊನಾ ವೈರಸ್​ ತಡೆಗಟ್ಟಲು ಲಾಕ್​ಡೌನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಬೈಲಹೊಂಗಲದಲ್ಲಿ ಪೊಲೀಸರು ಪಥಸಂಚಲನ ನಡೆಸಿದ್ದಾರೆ. ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಯಾರೊಬ್ಬರೂ ಮನೆ ಬಿಟ್ಟು ಹೊರಗಡೆ ಬಾರದಂತೆ ಜಾಗೃತಿ ಮೂಡಿಸಿದರು.

author img

By

Published : Apr 8, 2020, 9:58 PM IST

police  parade in Belgavi to create awareness about corona
ಕೊರೊನಾ: ಜನರ ರಕ್ಷಣೆಗಾಗಿ ಪಥ ಸಂಚಲನ ನಡೆಸಿದ ಪೊಲೀಸರು

ಬೆಳಗಾವಿ (ಬೈಲಹೊಂಗಲ): ಕೊರೊನಾ ವೈರಸ್ ವಿರುದ್ಧ ಸಮರ ಸಾರಿರುವ ಆರಕ್ಷಕರು ಜನರ ರಕ್ಷಣೆಗಾಗಿ ತಾಲೂಕಿನಲ್ಲಿ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವಿಶೇಷ ಪೊಲೀಸ್‌ ಪಡೆಯೊಂದಿಗೆ ಇಂದು ಜಾಗೃತಿ ಪಥಸಂಚಲನ ನಡೆಸಿದರು.

ನಗರದ ಪೊಲೀಸ್ ಠಾಣೆ ಆವರಣದಿಂದ ತೆರಳಿದ ಪೊಲೀಸರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಯಾರೊಬ್ಬರೂ ಮನೆ ಬಿಟ್ಟು ಹೊರಗಡೆ ಬಾರದಂತೆ ಜಾಗೃತಿ ಮೂಡಿಸಿದರು.

ಈ ವೇಳೆ ಡಿವೈಎಸ್​ಪಿ ಜೆ.ಎಂ.ಕರುಣಾಕರಶೆಟ್ಟಿ ಮಾತನಾಡಿ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನರ ರಕ್ಷಣೆಗಾಗಿ ವಿಶೇಷ ಪೊಲೀಸ್ ಪಡೆ ನಿಯೋಜಿಸಲಾಗಿದೆ. ವಿನಾ ಕಾರಣ ಮನೆಯಿಂದ ಜನರು ಆಚೆ ಬರಬಾರದು. ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು. ದಿನನಿತ್ಯದ ಅವಶ್ಯಕತೆಗೆ ಬೇಕಾದ ದಿನಸಿ, ಆಹಾರ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಜವಾವ್ದಾರಿಯನ್ನು ಅಧಿಕಾರಿಗಳು ವಹಿಸಿಕೊಳ್ಳಲಿದ್ದಾರೆ ಎಂದರು.

ಇವರಿಗೆ ಸಿಪಿಐ ಮಂಜುನಾಥ ಕುಸುಗಲ್, ಪಿಎಸ್ಐ ಎಂ.ಎಸ್.ಹೂಗಾರ, ಎಎಸ್ಐ ಎಂ.ವಿ.ಮಾವಿನಕಟ್ಟಿ, ಸಿಬ್ಬಂದಿ ಎಸ್.ಐ.ಅಮರಾಪುರ, ವಿ.ಎಸ್.ಯರಗಟ್ಟಿಮಠ, ಎಸ್.ಎಚ್.ಹಾದಿಮನಿ ಸೇರಿದಂತೆ ಐವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸಾಥ್ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.