ETV Bharat / state

ಡಿಸಿ ನಿವಾಸದಲ್ಲಿ ಪೇದೆ ಆತ್ಮಹತ್ಯೆಗೆ ಕಾರಣವಾಯಿತಾ ಸ್ಮಾರ್ಟ್​ ಫೋನ್ ಗೀಳು?​ - ಸ್ಮಾರ್ಟ್ ಫೋನ್ ಗೀಳಿನಿಂದ ಆತ್ಮಹತ್ಯೆ

ಪೊಲೀಸ್‌ ಪೇದೆ ಒಂದು ವಾರದಿಂದ ಡಿಸಿ ನಿವಾಸದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನಲ್ಲಿ ನೇಮಕಗೊಂಡಿದ್ದ ಪೇದೆ ಬೆಳಗಾವಿಗೆ ವರ್ಗಾವಣೆಗೊಂಡಿದ್ದರು. ಬೆಳಗಾವಿಯ ಪಿಡಬ್ಲ್ಯೂಡಿ ವಸತಿಗೃಹದಲ್ಲಿ ಕುಟುಂಬಸ್ಥರ ಜೊತೆ ವಾಸವಿದ್ದರು.

police constable suicide
ಪೇದೆ ಆತ್ಮಹತ್ಯೆ
author img

By

Published : May 6, 2020, 11:46 AM IST

Updated : May 6, 2020, 12:37 PM IST

ಬೆಳಗಾವಿ : ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ಬೆಳಗಾವಿ ‌ಜಿಲ್ಲಾಧಿಕಾರಿ ಸರ್ಕಾರಿ ನಿವಾಸದಲ್ಲಿ ಪೇದೆ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಲು ಸ್ಮಾರ್ಟ್ ಫೋನ್ ಗೀಳು ಕಾರಣವಾಯಿತೇ ಎಂಬ ಅನುಮಾನ ವ್ಯಕ್ತವಾಗಿದೆ.

ಪೊಲೀಸ್‌ ಪೇದೆ ಆತ್ಮಹತ್ಯೆ

ಪ್ರಕರಣ ಸಂಬಂಧ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್, ಡಿಸಿ ನಿವಾಸದ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆ ಪ್ರಕಾಶ್ ಗುರವಣ್ಣನವರ್(35) ಎಸ್‌ಎಲ್‌ಆರ್ ಬಂದೂಕಿನಿಂದ ಕತ್ತಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೇದೆ ಒಂದು ವಾರದಿಂದ ಡಿಸಿ ನಿವಾಸದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನಲ್ಲಿ ನೇಮಕಗೊಂಡಿದ್ದ ಪೇದೆ ಬೆಳಗಾವಿಗೆ ವರ್ಗಾವಣೆಗೊಂಡಿದ್ದರು. ಬೆಳಗಾವಿಯ ಪಿಡಬ್ಲ್ಯೂಡಿ ವಸತಿಗೃಹದಲ್ಲಿ ಕುಟುಂಬಸ್ಥರ ಜೊತೆ ವಾಸವಿದ್ದರು. 2 ವರ್ಷಗಳಿಂದ ಮನೋವ್ಯಾಧಿಯಿಂದ ಬಳಲುತ್ತಿದ್ದರಂತೆ. ಮಧ್ಯದಲ್ಲಿ ಔಷಧಿ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರೆಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ ಎಂದರು.

ಪೇದೆ ಸ್ಮಾರ್ಟ್ ಫೋನ್ ಗೀಳು ಹಚ್ಚಿಕೊಂಡಿದ್ದರು‌. ಯಾವಾಗಲೂ ಮೊಬೈಲ್ ನೋಡ್ತಿರ್ತೀಯಾ ಅಂತಾ ಕುಟುಂಬಸ್ಥರು ಸ್ಮಾರ್ಟ್‌ಫೋನ್ ಕಸಿದುಕೊಂಡು. ಎರಡು ದಿನಗಳ‌ ಹಿಂದೆ ಬೇಸಿಕ್ ​ ಮೊಬೈಲ್ ನೀಡಿದ್ದರು ಎನ್ನಲಾಗಿದೆ.

ಹೌಸ್ ರೆಸಿಡೆನ್ಷಿಯಲ್ ಗಾರ್ಡ್ ಕೆಲಸದಲ್ಲಿ ಒತ್ತಡ ಏನೂ ಇರಲ್ಲ. ಆತ್ಮಹತ್ಯೆಗೆ ಒತ್ತಡ ಕಾರಣ ಎಂದು ಹೇಳಲು ಬರುವುದಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸುತ್ತೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.

Last Updated : May 6, 2020, 12:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.