ETV Bharat / state

ಅಕ್ರಮ ಬೆಳ್ಳಿ ಗಟ್ಟಿ, ಆಭರಣ ಸಾಗಾಟ: ಇಬ್ಬರು ಖದೀಮರು ಅಂದರ್​

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಾದ ಬಾನಹಟ್ಟಿ ಕ್ರಾಸ್ ಬಳಿ ಬೆಳ್ಳಿ ಗಟ್ಟಿ ಮತ್ತು ಆಭರಣಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಬ್ಬರು ಖದೀಮರು ಅಂದರ್​
Police arrested two accused
author img

By

Published : Feb 2, 2020, 11:27 PM IST

ಚಿಕ್ಕೋಡಿ: ಅಕ್ರಮವಾಗಿ ಬೆಳ್ಳಿ ಗಟ್ಟಿ ಮತ್ತು ಆಭರಣವನ್ನು ಕಾರಿನಲ್ಲಿ ಮಹಾರಾಷ್ಟ್ರದಿಂದ ತಮಿಳನಾಡಿನ ಸೇಲಂಗೆ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಸವಾಪೇಟ್ ಸೇಲಂ ನಿವಾಸಿ ವಿಜಯ್​ ಕುಮಾರ್​ ಆತ್ಮಾರಾಮ ಶಿಂಧೆ (48) ಹಾಗೂ ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕಟಾವ್ ತಾಲೂಕಿನ ಕಲ್ಲೇಡೊನ್ ಗ್ರಾಮದ ನಿವಾಸಿ ರೀಯಾಜ್ ಶಾಕೀರ ಹುಸೇನ್ ಮುಲ್ಲಾನಿ (20) ಬಂಧಿತ ಆರೋಪಿಗಳು.

ಇವರು ಜಿಲ್ಲೆಯ ಹುಕ್ಕೇರಿ ತಾಲೂಕಿನ ದಾದಬಾನಹಟ್ಟಿ ಕ್ರಾಸ್ ಬಳಿ ಬೆಳ್ಳಿ ಗಟ್ಟಿ ಮತ್ತು ಆಭರಣಗಳನ್ನು ಸಾಗಿಸುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದು, 300 ಕೆ.ಜಿ ಬೆಳ್ಳಿಯ ಗಟ್ಟಿ 63 ಲಕ್ಷ ಮೌಲ್ಯದ ಆಭರಣಗಳು, 3 ಲಕ್ಷ ನಗದು, 9 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.