ಅಥಣಿ: ವಿಧಾನಸಭಾ ಉಪಚುನಾವಣೆ ಹಿನ್ನೆಲೆ, ಸರ್ಕಾರಿ ಜಾಹೀರಾತು, ಸಾಧನೆ ಫಲಕಗಳನ್ನು ಅಥಣಿಯಲ್ಲಿ ತೆರವುಗೊಳಿಸಲಾಯಿತು.
ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಸರ್ಕಾರಿ ಜಾಹೀರಾತು, ಸಾಧನೆ ಫಲಕ, ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ಬಿಂಬಿಸುವ ರಾಜಕಾರಿಣಿಗಳ ಹೆಸರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಫಲಕ ಬಿತ್ತರಿಸುವ ಎಲ್ಲಾ ಚಿತ್ರಗಳನ್ನು ತೆರವು ಮಾಡಲಾಯಿತು.
ತಾಲೂಕಿನ 69ಹಳ್ಳಿಗಳಲ್ಲಿ ಹಾಗೂ ಅಥಣಿ ಪಟ್ಟಣದಲ್ಲಿ ಬಸ್ ಮೇಲೆ ಸರ್ಕಾರದ ಸಾಧನೆ ಜಾಹೀರಾತುಗಳು ರಾರಾಜಿಸುತ್ತಿದ್ದು, ಅವುಗಳನ್ನು ಸಹ ಸಾಧ್ಯವಾದಷ್ಟು ತೆರವು ಮಾಡಲು ತಾಲೂಕು ಆಡಳಿತ ಮುಂದಾಗಿದೆ.