ETV Bharat / state

ಕುದುರೆಗಾಡಿ ಶರ್ಯತ್ತು ನೋಡಲು ಬಂದವರ ಮೇಲೆ ಹರಿದ ಚಕ್ಕಡಿ: ಮೂವರು ಗಂಭೀರ

author img

By

Published : Mar 22, 2022, 7:17 PM IST

ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ಗೈಬಿಸಾಬ್ ಉರುಸ್ ಅಂಗವಾಗಿ ಸ್ಥಳೀಯ ಕಮಿಟಿ ವತಿಯಿಂದ ಕುದುರೆಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವೇಗವಾಗಿ ಓಡುತ್ತಾ ಬಂದ ಕುದುರೆಗಳು ಚಕ್ಕಡಿ ಸಮೇತ ಪ್ರೇಕ್ಷಕರತ್ತ ನುಗ್ಗಿದವು.

people-injured-by-horses-in-chikkodi
ಚಕ್ಕಡಿ ಹರಿದು ಮೂವರಿಗೆ ಗಂಭೀರ ಗಾಯ

ಬೆಳಗಾವಿ: ಕುದುರೆಗಾಡಿ ಚಕ್ಕಡಿ ಹರಿದು ಇಬ್ಬರು ಯುವಕರು ಸೇರಿದಂತೆ ಒಟ್ಟು ಮೂರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆಯಿತು. ಅದೃಷ್ಟವಶಾತ್,​ ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ. ಶರ್ಯತ್ತು ನೋಡಲು ಬಂದಿದ್ದ ಸ್ಥಳೀಯರು ಘಟನೆಯ ವಿಡಿಯೋ ಸೆರೆಹಿಡಿದಿದ್ದು, ವೈರಲ್ ಆಗಿದೆ.

ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ಗೈಬಿಸಾಬ್ ಉರುಸ್ ಅಂಗವಾಗಿ ಸ್ಥಳೀಯ ಕಮಿಟಿ ವತಿಯಿಂದ ಕುದುರೆಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವೇಗವಾಗಿ ಓಡುತ್ತಾ ಬಂದ ಕುದುರೆಗಳು ಚಕ್ಕಡಿ ಸಮೇತ ಪ್ರೇಕ್ಷಕರತ್ತ ನುಗ್ಗಿದವು. ಆಗ ಗಾಡಿಯ ಪಕ್ಕದಲ್ಲೇ ಓಡಿ ಬರುತ್ತಿದ್ದ ಜನರು ಕುಸಿದು ಬಿದ್ದಿದ್ದು, ಹಿಂದಿನಿಂದ ಬಂದ ಚಕ್ಕಡಿ ಅವರ ಮೈಮೇಲೆ ಹಾದು ಹೋಗಿದೆ.

ಕುದುರೆಗಾಡಿ ಓಟದ ಸ್ಪರ್ಧೆಯ ಸಮಯದಲ್ಲಿ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇರುವುದು ಈ ಅನಾಹುತಕ್ಕೆ ಕಾರಣ ಎಂಬುದು ವಿಡಿಯೋದಲ್ಲಿ ಕಂಡುಬರುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಖಡಕಲಾಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶೌಚಾಲಯ ನಿರ್ಮಾಣದಲ್ಲಿ ಗೋಲ್​ಮಾಲ್ : ಹೆಸರಿಗೆ ಮಾತ್ರ ಬಯಲು ಶೌಚ ಮುಕ್ತ ಗ್ರಾಮ!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.