ETV Bharat / state

ಮಾಸ್ಕ್​​ ಹಾಕಿದ್ದರೂ ದಂಡ: ಪೇಚಿಗೆ ಸಿಲುಕಿದ ಪುರಸಭೆ ಮುಖ್ಯಾಧಿಕಾರಿ - ಅಥಣಿಯಲ್ಲಿ ಮಾಸ್ಕ್​​ ಹಾಕಿದವರಿಗೆ ದಂಡ

ಅಂಬೇಡ್ಕರ್​ ವೃತ್ತದಲ್ಲಿ ಪುರಸಭೆ ಮುಖ್ಯಾಧಿಕಾರಿ ತಮ್ಮ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ಮಾಸ್ಕ್​​ ಹಾಕದವರಿಗೆ ಮಾತ್ರ ದಂಡ ವಿಧಿಸುವ ಬದಲಾಗಿ ಮಾಸ್ಕ್​​ ಹಾಕಿಕೊಂಡವರಿಗೂ ಸಹ ದಂಡ ವಿಧಿಸಿ ಪೇಚಿಗೆ ಸಿಲುಕಿಕೊಂಡಿದ್ದಾರೆ.

Penalties for those who put; people outrage on officer
ಮಾಸ್ಕ್​​ ಹಾಕಿದವರಿಗೆ ದಂಡ; ಪೇಚಿಗೆ ಸಿಲುಕಿದ ಪುರಸಭೆ ಮುಖ್ಯಾಧಿಕಾರಿ
author img

By

Published : Sep 25, 2020, 8:57 AM IST

ಅಥಣಿ: ಮಾಸ್ಕ್​​ ಹಾಕಿದವರಿಗೆ ದಂಡ ವಿಧಿಸಲು ಹೋದ ಪುರಸಭೆ ಮುಖ್ಯಾಧಿಕಾರಿಗೆ ಸಾರ್ವಜನಿಕರು ಬಹಿರಂಗವಾಗಿಯೇ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಪುರಸಭೆ ಮುಖ್ಯಾಧಿಕಾರಿ ಮತ್ತ ವಾಹನ ಸವಾರನ ನಡುವೆ ವಾಗ್ವಾದ

ಪಟ್ಟಣದ ಅಂಬೇಡ್ಕರ್​ ವೃತ್ತದಲ್ಲಿ ಪುರಸಭೆ ಮುಖ್ಯಾಧಿಕಾರಿ ತಮ್ಮ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿ ಮಾಸ್ಕ್​​ ಹಾಕದವರಿಗೆ ಮಾತ್ರ ದಂಡ ವಿಧಿಸುವ ಬದಲಾಗಿ ಮಾಸ್ಕ್​​ ಹಾಕಿಕೊಂಡವರಿಗೂ ಸಹ ದಂಡ ವಿಧಿಸಲು ಮುಂದಾಗಿದ್ದರಂತೆ. ನಿನ್ನೆ ಒಮ್ಮೆಲೇ ಬಂದು ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ಕೀಲಿಗಳನ್ನು ತಗೆದುಕಂಡು ಪೊಲೀಸರಂತೆ ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಪುರಸಭೆ ಮುಖ್ಯಾಧಿಕಾರಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಾಸ್ಕ್​​ ಹಾಕಿಕೊಂಡು ಹಾಗೂ ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ವಾಹನ ಸವಾರರನ್ನು ನಿಲ್ಲಿಸಿ ದಂಡ ವಸೂಲಿ ಮಾಡಲು ಹೋಗಿದ್ದಾಗ ಓರ್ವ ಸವಾರ ಪುರಸಭೆ ಮುಖ್ಯಾಧಿಕಾರಿಗೆ ಏಕವಚನೆದಲ್ಲೇ ಬಹಿರಂಗವಾಗಿಯೇ ಮನಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.