ETV Bharat / state

ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಶಾಂತಿಯುತ ಮತದಾನ: ಶೇ. 54.62ರಷ್ಟು ವೋಟಿಂಗ್​ - ಬೆಳಗಾವಿ ಲೋಕಸಭೆ ಉಪಚುನಾವಣೆ

ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಶಾಂತಿಯುತ ಮತದಾನವಾಗಿದ್ದು, ಶೇ. 54.62ರಷ್ಟು ಓಟಿಂಗ್​ ನಡೆದಿದೆ. ಗೋಕಾಕ್​ನಲ್ಲಿ ಅತಿ ಹೆಚ್ಚು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

Peaceful turnout for Belgaum Lok Sabha by-election
ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಶಾಂತಿಯುತ ಮತದಾ
author img

By

Published : Apr 17, 2021, 10:33 PM IST

ಬೆಳಗಾವಿ: ಲೋಕಸಭಾ ಉಪ ಚುನಾವಣೆಯಲ್ಲಿ ಮತದಾನ ಕೊನೆಗೊಂಡ ಸಂಜೆ 7 ಗಂಟೆಯವರೆಗಿನ ಪ್ರಾಥಮಿಕ ಮಾಹಿತಿ ಪ್ರಕಾರ ಒಟ್ಟಾರೆ ಶೇ. 54.62ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.

ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇಂದು ಮತದಾನ ನಡೆಯಿತು. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆ 2566 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಸಂಜೆ 7 ಗಂಟೆಯವರೆಗೆ ನಡೆಯಿತು.

ಹಿರಿಯರ ನೇತೃತ್ವ, ಕಿರಿಯರ ಸಂಭ್ರಮ: ಕೆಲವು ಮತಗಟ್ಟೆಗಳಲ್ಲಿ ಮನೆಯ ಹಿರಿಯರ ನೇತೃತ್ವದಲ್ಲಿ ಕುಟುಂಬದ ಸದಸ್ಯರು ಬಂದು ಮತ ಚಲಾಯಿಸಿದ್ದಾರೆ. ಕೆಲವೆಡೆ ಮೊದಲ‌ ಬಾರಿ‌ ಮತ ಚಲಾಯಿಸುವ ಮೂಲಕ ಕಿರಿಯರು ಸಂಭ್ರಮಿಸಿದ್ದಾರೆ. ಮತಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳಾ ಮತದಾರರು ಹೆಚ್ಚಾಗಿರುವ ಆಯ್ದ 16 ಮತಗಟ್ಟೆಗಳನ್ನು ಸಖಿ ಮತಗಟ್ಟೆಗಳಾಗಿ ಗುರುತಿಸಲಾಗಿತ್ತು. ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ‌ ವಿಶೇಷ ಚೇತನ ಮತದಾರರಿಗೆ ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ಸ್ವಯಂ ಸೇವಕರನ್ನು ನೇಮಿಸುವ ಮೂಲಕ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನ ಮತದಾರರಿಗೆ ನೆರವು ನೀಡಲಾಯಿತು. ಕೋವಿಡ್ ತಗುಲಿದ ಹಿನ್ನೆಲೆ ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಮಾರ್ಗಸೂಚಿ ಪ್ರಕಾರ ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಿದರು.

ಒಟ್ಟಾರೆ ಶೇ. 54.62 ಮತದಾನ: ಉಪ‌ಚುನಾವಣೆಯಲ್ಲಿ ಸಂಜೆ 7 ಗಂಟೆಯವರೆಗೆ ಲಭಿಸಿದ ಪ್ರಾಥಮಿಕ ಮಾಹಿತಿ ಪ್ರಕಾರ ಒಟ್ಟಾರೆ ಶೇ. 54.62ರಷ್ಟು ಮತದಾನವಾಗಿದೆ. ಲೋಕಸಭಾ ‌ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 18,13,567 ಮತದಾರರಿದ್ದಾರೆ. ಇದರಲ್ಲಿ 9,11,033 ಪುರುಷರು ಹಾಗೂ 9,02,476 ಮಹಿಳೆಯರು ಮತ್ತು 58 ಇತರೆ ಮತದಾರರಿದ್ದಾರೆ. ಈ ಪೈಕಿ 9,79, 693 ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಗೋಕಾಕ್​ನಲ್ಲಿ ಅತಿ ಹೆಚ್ಚು ಮತದಾನ: ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರಗಳ ಪೈಕಿ ಗೋಕಾಕ್​ ಕ್ಷೇತ್ರದಲ್ಲಿ ಶೇ. 60.47 ಮತದಾನವಾಗಿದೆ. ಬೆಳಗಾವಿ(ಉತ್ತರ) ಕ್ಷೇತ್ರದಲ್ಲಿ ಶೇ. 48.18ರಷ್ಟು ಮತದಾನವಾಗಿದೆ. ಅರಭಾವಿ ಕ್ಷೇತ್ರದಲ್ಲಿ ಶೇ. 55.07, ಬೆಳಗಾವಿ ‌ದಕ್ಷಿಣ ವಿಧಾನಸಭಾ ಕ್ಷೇತ್ರ ಶೇ. 44.84,‌ ಬೆಳಗಾವಿ ‌ಗ್ರಾಮೀಣ ವಿಧಾನಸಭಾ ಕ್ಷೇತ್ರ ಶೇ. 58.36, ಬೈಲಹೊಂಗಲ ಶೇ. 54.33, ಸವದತ್ತಿ ಶೇ. 58.67 ಹಾಗೂ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಶೇ. 58.04ರಷ್ಟು ಮತದಾನವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.