ETV Bharat / state

'ಸಾಹೇಬ್ರೆ ನಮ್ದೊಂದು ಕೆಲಸ ಮಾಡಿಕೊಡ್ರಿ' ಎಂದು ಅಂಗಲಾಚಿದ ರೈತ: ಲಂಚ ಪಡೆಯುತ್ತಿರುವ PDO ವಿಡಿಯೋ ವೈರಲ್​

ಸರ್ಕಾರದಿಂದ ಮಂಜೂರಾದ ಬಾವಿ ತೋಡಿಸಿದ ರೈತನಿಗೆ ಬಿಲ್​ ಪಾವತಿಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಲಂಚ ಪಡೆಯುತ್ತಿರುವ ವಿಡಿಯೋ ವೈರಲ್​ ಆಗಿದೆ.

pdo-video-viral-while-getting-bribe-from-farmer
ಲಂಚ ಪಡೆಯುತ್ತಿರುವ PDO ವಿಡಿಯೋ ವೈರಲ್​
author img

By

Published : Oct 25, 2021, 2:26 PM IST

ಚಿಕ್ಕೋಡಿ: ನರೇಗಾ ಯೋಜನೆಯಡಿ ಬಾವಿ ತೋಡಿಸಿದ ಜಮೀನು ಮಾಲೀಕನ ಬಿಲ್​ ಪಾವತಿಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಲಂಚ ಪಡೆಯುತ್ತಿರುವ ವಿಡಿಯೋವೊಂದು ವೈರಲ್​ ಆಗಿದೆ. ಈ ಬಗ್ಗೆ ತನಿಖೆ ನಡೆಸಿ ಪಿಡಿಒರನ್ನು ವಜಾ ಮಾಡುವಂತೆ ಜನರಿಂದ ಆಗ್ರಹ ವ್ಯಕ್ತವಾಗಿದೆ.

ಚಿಕ್ಕೋಡಿ ಉಪವಿಭಾಗದ ಮೂಡಲಗಿ ತಾಲೂಕಿನ ತಿಗಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾನಂದ ಪತ್ತಾರ ಎಂಬುವರೇ ಹಣ ಪಡೆಯುತ್ತಿರುವ ಅಧಿಕಾರಿ. ನರೇಗಾ ಕೆಲಸವನ್ನ ಜೆಸಿಬಿ ಮೂಲಕ ಮಾಡಿಸಿ ಕೊಡುತ್ತೇನೆ, ನಂತರ ನಿರ್ಮಾಣವಾದ ಬಾವಿ ತೋರಿಸಿ ಬಿಲ್ ಕೊಡುವುದಾಗಿ ಹೇಳಿ ಪಿಡಿಒ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತನ್ನ ಕೆಲಸ ಮಾಡಿಕೊಡಿ ಎಂದು ಇದೇ ವೇಳೆ ಅಧಿಕಾರಿಯ ಕಾಲುಹಿಡಿದುಕೊಳ್ಳುತ್ತಾನೆ. ಆದರೂ ಕೂಡ ಒಪ್ಪದ ಪಿಡಿಒ ರೈತನಿಂದ ಹಣ ಪಡೆಯುತ್ತಿರುವ ಈ ವಿಡಿಯೋ ವೈರಲ್​ ಆಗಿದೆ.

ವೈರಲ್ ವಿಡಿಯೋ

ಅಲ್ಲದೆ, ಪ್ರವಾಹಕ್ಕೆ ನಲುಗಿ ಹಲವೆಡೆ ಮನೆ ಕಳೆದುಕೊಂಡ ನೆರೆ ಸಂತ್ರಸ್ತರಿಂದಲೂ ಪಿಡಿಒ ಶಿವಾನಂದ ಅವರು ರಾಜಾರೋಷವಾಗಿ ಹಣ ಪೀಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಾಲಚಂದ್ರ ಜಾರಕಿಹೊಳಿ ಮನವಿ:

ಅತಿವೃಷ್ಟಿಗೆ ಸಿಲುಕಿದ ಜನರಿಗೆ ಸರ್ಕಾರದಿಂದ ಉಚಿತವಾಗಿ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಹೀಗಿರುವಾಗ ಕೆಲ ಅಧಿಕಾರಿಗಳು, ಜನರು ಸರ್ಕಾರದಿಂದ ಮಂಜೂರಾದ ಯೋಜನೆಗಳ ಕೆಲಸ ಮಾಡಿಸಿಕೊಡುವುದಾಗಿ ನಂಬಿಸಿ ಜನರಿಂದ ಲಂಚ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ.‌ ಆದರೆ ಯಾರೂ ಕೂಡ ಹೀಗೆ ಹೇಳುವವರನ್ನು ನಂಬಿ ಹಣ ನೀಡಬೇಡಿ. ಯೋಜನೆ ಮಂಜೂರಾಗಿರುವುದನ್ನು ತಿಳಿದುಕೊಂಡು ಇಂತಹ ಕೆಲಸ ನಡೆಯುತ್ತಿವೆ. ಯಾರಾದರೂ ಹಣ ವಸೂಲಿಗೆ ಮುಂದಾದರೆ ಸಂಬಂಧಪಟ್ಟ ತಮಗೆ, ಅಧಿಕಾರಿಗಳು ಅಥವಾ ಪೊಲೀಸರಿಗೆ ದೂರು ನೀಡುವಂತೆ ಇತ್ತೀಚೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದ್ದರು.

ಬಾಲಚಂದ್ರ ಜಾರಕಿಹೊಳಿ ಮನವಿ

ಆದರೆ, ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿ ಕೆಲ ದಿನಗಳಲ್ಲೇ ಪಿಡಿಒ ಹಣ ವಸೂಲಿ ಮಾಡುತ್ತಿರುವ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೇ ಸಿದ್ದರಾಮಯ್ಯ: ಬಿಜೆಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.