ETV Bharat / state

ಮೂರೇ ದಿನಗಳಲ್ಲಿ ಪಾಸ್‍ಪೋರ್ಟ್ ಪರಿಶೀಲನೆ ಪೂರ್ಣ; ಬೆಳಗಾವಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ - belgavi passport verification process

ಮಹಾನಗರದಲ್ಲಿ ಈಗಾಗಲೇ ಸಾಕಷ್ಟು ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ. ಅರ್ಜಿ ಸಲ್ಲಿಸುವ ವೇಳೆ ಅರ್ಜಿದಾರ ನೀಡುವ ಮಾಹಿತಿ ಸಮರ್ಪಕವಾಗಿದ್ದರೆ ಹಾಗೂ ದೇಶದ್ರೋಹ, ಅಪರಾಧಿಕ ಚಟುವಟಿಕೆಯಲ್ಲಿ ಅರ್ಜಿದಾರ ಭಾಗಿಯಾಗಿಲ್ಲ ಎಂಬುವುದು ಖಾತ್ರಿಯಾದರೆ ಮಾತ್ರ ಮೂರೇ ದಿನಗಳಲ್ಲಿ ಅರ್ಜಿ ವಿಲೇವಾರಿ ಮಾಡಲಾಗುತ್ತದೆ..

passport verification complete within three days at belgavi
ಮೂರೇ ದಿನಗಳಲ್ಲಿ ಪಾಸ್‍ಪೋರ್ಟ್ ಪರಿಶೀಲನೆ ಪೂರ್ಣ; ಬೆಳಗಾವಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
author img

By

Published : Mar 13, 2021, 3:25 PM IST

Updated : Mar 16, 2021, 4:45 PM IST

ಬೆಳಗಾವಿ : ಕುಂದಾನಗರಿ ಬೆಳಗಾವಿಯಲ್ಲಿ ಪಾಸ್‍ಪೋರ್ಟ್ ಅರ್ಜಿದಾರರ ಪೊಲೀಸ್ ಪರಿಶೀಲನೆ ಕಾರ್ಯ ಮೂರೇ ದಿನದೊಳಗೆ ಪೂರ್ಣಗೊಳ್ಳುತ್ತಿದೆ. ತ್ವರಿತಗತಿಯಲ್ಲಿ ಪರಿಶೀಲನೆ ಮಾಡುತ್ತಿರುವ ಪೊಲೀಸರ ಕಾರ್ಯವೀಗ ಬೆಳಗಾವಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ರಾಜ್ಯದ ಯಾವ ಜಿಲ್ಲೆಯಲ್ಲೂ ಪಾಸ್‍ಪೋರ್ಟ್ ಸಂಬಂಧ ಪೊಲೀಸ್ ಪರಿಶೀಲನೆ ಇಷ್ಟು ತ್ವರಿತಗತಿ ಆಗಲ್ಲ. ಪಾಸ್‍ಪೋರ್ಟ್ ಪರಿಶೀಲನೆ ವಿಚಾರದಲ್ಲಿ ಬೆಳಗಾವಿ ಪೊಲೀಸರ ಕಾರ್ಯ ಇತರೆ ಜಿಲ್ಲೆಗೂ ಮಾದರಿಯಾಗಿದೆ.

ರಾಜ್ಯ ಸರ್ಕಾರದ ಸಕಾಲ ಯೋಜನೆಯಲ್ಲಿ ಪಾಸ್‍ಪೋರ್ಟ್ ಪರಿಶೀಲನೆಗೆ 21 ದಿನ ನಿಗದಿ ಮಾಡಿದೆ. ಆದರೆ, ಮಹಾನಗರ ಪೊಲೀಸರು ಮೂರೇ ದಿನಗಳಲ್ಲಿ ಪಾಸ್‍ಪೋರ್ಟ್ ವೆರಿಫಿಕೇಶನ್ ಪೂರ್ಣಗೊಳಿಸುತ್ತಿದ್ದು, ಪಾಸ್‍ಪೋರ್ಟ್ ಅರ್ಜಿದಾರರ ಖುಷಿಗೆ ಕಾರಣವಾಗಿದೆ.

ಅರ್ಜಿದಾರರ ಮನೆಗೆ ಹೋಗಿ ಪರಿಶೀಲನೆ : ಪಾಸ್‍ಪೋರ್ಟ್ ಪಡೆಯಲು ಇಚ್ಛಿಸುವವರು ನಿಗದಿಪಡಿಸಿದ ದಾಖಲೆಯೊಂದಿಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅದಾದ ಎರಡೇ ದಿನಗಳಲ್ಲಿ ಅರ್ಜಿದಾರರ ಅರ್ಜಿ ಮಹಾನಗರ ಪೊಲೀಸರಿಗೆ ರವಾನಿಸಲಾಗುತ್ತದೆ. ಬಳಿಕ ಅರ್ಜಿದಾರ ವಾಸವಿರುವ ವ್ಯಾಪ್ತಿಯ ಪೊಲೀಸ್ ಠಾಣೆಗೆ ಈ ಅರ್ಜಿ ಕಳುಹಿಸಲಾಗುತ್ತದೆ. ಬಳಿಕ ಆ ಠಾಣೆಯ ಪೊಲೀಸ್ ಸಿಬ್ಬಂದಿ ಅರ್ಜಿದಾರನ ನಿವಾಸಕ್ಕೆ ತೆರಳಿ ಪರಿಶೀಲಿಸುತ್ತಾರೆ.

ತ್ವರಿತವಾಗಿ ನಡೆಯುತ್ತೆ ಸಂಪೂರ್ಣ ಪರಿಶೀಲನೆ : ಅಲ್ಲದೇ ಅರ್ಜಿದಾರನ ನೆರೆಹೊರೆಯವರ ಜೊತೆಗೆ ಚರ್ಚಿಸಿ, ಆತನ ಹಿನ್ನೆಲೆ ಪರಿಶೀಲಿಸುತ್ತಾರೆ. ಈ ಮೊದಲು ಅರ್ಜಿದಾರನ ದಾಖಲೆ ಪರಿಶೀಲಿಸಿ ಇಬ್ಬರು ಸ್ಥಳೀಯರ ಸ್ಟೇಟ್‍ಮೆಂಟ್ ಪಡೆಯಲಾಗುತ್ತಿತ್ತು. ಇದರಿಂದ ಪರಿಶೀಲನೆ ಕಾರ್ಯವೂ ವಿಳಂಬವಾಗುತ್ತಿತ್ತು. ಈಗ ಡಿಜಿಟಲ್ ವ್ಯವಸ್ಥೆ ಜಾರಿಯಾಗಿರುವ ಕಾರಣಕ್ಕೆ ಪೊಲೀಸ್ ಸಿಬ್ಬಂದಿ ಟ್ಯಾಬ್ ಜೊತೆಗೆ ಅರ್ಜಿದಾರ ವಾಸವಿರುವ ಸ್ಥಳಕ್ಕೆ ಹೋಗುತ್ತಾರೆ.

ಪಾಸ್‍ಪೋರ್ಟ್ ಪರಿಶೀಲನೆ ಕಾರ್ಯ - ಡಿಸಿಪಿ ಪ್ರತಿಕ್ರಿಯೆ

ಅಲ್ಲಿ ಸ್ಥಳೀಯರ ಜೊತೆಗೆ ವ್ಯಕ್ತಿಯ ನಡುವಳಿಕೆ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಅರ್ಜಿದಾರ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೋ? ಇಲ್ಲವೋ? ಎಂಬುವುದನ್ನು ಪೊಲೀಸರು ಖಾತ್ರಿ ಪಡಿಸಿಕೊಳ್ಳುತ್ತಾರೆ. ಖಾತ್ರಿ ಆದ ಬಳಿಕವೇ ಆಯಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಅರ್ಜಿಯನ್ನು ಮರಳಿ ಪೊಲೀಸ್ ಆಯುಕ್ತರ ಕಚೇರಿಗೆ ಕಳಿಸುತ್ತಾರೆ. ಬಳಿಕ ಈ ಅರ್ಜಿ ಪಾಸ್‍ಪೋರ್ಟ್ ಸೇವಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.

ವಿಶೇಷ ತಂಡದ ನಿಗಾ : ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ಅರ್ಜಿ ಪರಿಶೀಲನೆಗೆ ಮಹಾನಗರ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಈ ವಿಶೇಷ ತಂಡ ಅರ್ಜಿದಾರರ ಹಿನ್ನೆಲೆ ಬಗ್ಗೆ ಪರಿಶೀಲಿಸುತ್ತದೆ. ಅರ್ಜಿದಾರ ಒಂದು ವೇಳೆ ದೇಶದ್ರೋಹ ಇಲ್ಲವೇ ಅಪರಾಧ ಚಟುವಟಿಯಲ್ಲಿ ಪಾಲ್ಗೊಂಡಿದ್ದಾನೆಯೋ ಎಂಬುವುದು ಖಾತ್ರಿ ಪಡಿಸಿಕೊಳ್ಳುತ್ತಾರೆ. ಒಂದು ವೇಳೆ ಅರ್ಜಿದಾರ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಕಂಡುಬಂದರೆ ಪಾಸ್‍ಪೋರ್ಟ್ ಪಡೆಯಲು ಅರ್ಜಿದಾರ ಅನರ್ಹ ಎಂದು ಬರೆದು ಕಳುಹಿಸುತ್ತಾರೆ.

ಓದಿ: ಎಚ್ಚರಿಕೆ..! ಪಾಸ್​​ಪೋರ್ಟ್​​​ ಕೊಡುವ ಮುನ್ನ ಅರ್ಜಿದಾರರ ಸೋಶಿಯಲ್​ ಮೀಡಿಯಾ ಖಾತೆ ಪೊಲೀಸರಿಂದ ಪರಿಶೀಲನೆ!

ಮಹಾನಗರದಲ್ಲಿ ಈಗಾಗಲೇ ಸಾಕಷ್ಟು ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ. ಅರ್ಜಿ ಸಲ್ಲಿಸುವ ವೇಳೆ ಅರ್ಜಿದಾರ ನೀಡುವ ಮಾಹಿತಿ ಸಮರ್ಪಕವಾಗಿದ್ದರೆ ಹಾಗೂ ದೇಶದ್ರೋಹ, ಅಪರಾಧಿಕ ಚಟುವಟಿಕೆಯಲ್ಲಿ ಅರ್ಜಿದಾರ ಭಾಗಿಯಾಗಿಲ್ಲ ಎಂಬುವುದು ಖಾತ್ರಿಯಾದರೆ ಮಾತ್ರ ಮೂರೇ ದಿನಗಳಲ್ಲಿ ಅರ್ಜಿ ವಿಲೇವಾರಿ ಮಾಡಲಾಗುತ್ತದೆ.

ಡಿಸಿಪಿ ಹೇಳುವುದೇನು?: ಈಟಿವಿ ಭಾರತ ಜೊತೆಗೆ ಮಾತನಾಡಿದ ಡಿಸಿಪಿ ವಿಕ್ರಂ ಆಮಟೆ, ಸಕಾಲ ಯೋಜನೆಯಡಿ ಪಾಸ್‍ಪೋರ್ಟ್ ಪರಿಶೀಲನೆಗೆ 21 ದಿನ ಸಮಯಾವಕಾಶ ನೀಡಲಾಗಿದೆ. ಆದರೆ, ಬೆಳಗಾವಿಯಲ್ಲಿ ನಾವು ಮೂರೇ ದಿನಗಳಲ್ಲಿ ಪಾಸ್‍ಪೋರ್ಟ್ ಅರ್ಜಿ ಪರಿಶೀಲಿಸುತ್ತಿದ್ದೇವೆ. ಪಾಸ್‍ಪೋರ್ಟ್ ಪರಿಶೀಲನೆಯನ್ನು ಇದೀಗ ಡಿಜಿಟಲ್ ಮಾಡಿರುವ ಕಾರಣ, ಪರಿಶೀಲನೆ ಕೂಡ ತ್ವರಿತವಾಗುತ್ತಿದೆ.

ನಮ್ಮ ತ್ವರಿತಸೇವೆ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಪರಾಧ ಹಾಗೂ ದೇಶದ್ರೋಹ ಹಿನ್ನೆಲೆ ಹೊಂದಿರುವ ಅರ್ಜಿದಾರರ ಅರ್ಜಿಯನ್ನು ವಜಾ ಮಾಡಲಾಗುತ್ತಿದೆ. ಈಗಾಗಲೇ ಅಂತಹ ಸಾಕಷ್ಟು ಅರ್ಜಿಗಳನ್ನು ವಜಾ ಮಾಡಲಾಗಿದೆ ಎಂದರು.

Last Updated : Mar 16, 2021, 4:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.