ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ತೀವ್ರ ಬರಗಾಲ ಆವರಿಸಿದ್ದು ಜನ ಜಾನುವಾರಗಳಿಗೆ ಕುಡಿಯಲೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಗಿ ಜನ ದೇವರ ಮೊರೆ ಹೋಗ್ತಿದ್ದಾರೆ. ಮಳೆಗಾಗಿ ವಿಶೇಷ ಹೋಮ-ಹವನ, ಪೂಜೆ ಮಾಡುತ್ತಿದ್ದಾರೆ.
ತಾಲೂಕಿನ ದುರ್ಗಾದೇವಿ ದೇವಸ್ಥಾನದಲ್ಲಿ ಮಹಾಂತೇಶ ಶಾಸ್ತ್ರೀ ಆರಾದ್ರಿಮಠ ಅವರ ನೇತೃತ್ವದಲ್ಲಿ ಮಳೆಗಾಗಿ ಪರ್ಜನ್ಯ ಹೋಮ ಮಾಡಲಾಯಿತು.
ಹೋಮ ನೆರವೇರಿಸಿ ಮಾತನಾಡಿದ ಮಾಹಾಂತೇಶ ಶಾಸ್ತ್ರೀಯವರು, ನಾಡಿನಲ್ಲಿ ಉತ್ತಮ ಮಳೆಯಾಗಿ ಬೆಳೆಗೆ ತಕ್ಕಂತೆ ಬೆಲೆ ಸಿಗುವಂತಾಗಲಿ. ದೇಶದ ಪ್ರತಿಯೊಬ್ಬ ರೈತರು ಸುಖವಾಗಿರಬೇಕು. ರೈತರಿಗೆ, ಸೈನಿಕರಿಗೆ ಒಳ್ಳೆಯದಾಗಲೆಂದು ಹೋಮ ಮಾಡಲಾಗಿದೆ ಎಂದರು.