ಚಿಕ್ಕೋಡಿ: ತಿಥಿ, ವಾರ, ಮುಹೂರ್ತಗಳಿಗಾಗಿ ನಾವು ಪಂಚಾಗವನ್ನು ನೋಡುತ್ತೇವೆ. ಇನ್ನು ಮಳೆಯ ಬಗೆಗೂ ಪಂಚಾಂಗಗಳಲ್ಲಿ ಸಾಕಷ್ಟು ವಿವರಣೆ ಇದೆ. ಸದ್ಯ ಉತ್ತರ ಕರ್ನಾಟಕವನ್ನೇ ಗುರಿಯಾಗಿರಿಸಿಕೊಂಡು ಧಾರಾಕಾರವಾಗಿ ಸುರಿಯುತ್ತಿರುವ ಆಶ್ಲೇಷ ಮಳೆಯ ಬಗ್ಗೆ ಪಂಚಾಂಗದಲ್ಲಿ ಉಲ್ಲೇಖವಿದೆ.
![panchanga](https://etvbharatimages.akamaized.net/etvbharat/prod-images/4073910_panchanga.jpg)
ಆಶ್ಲೇಷ ಮಳೆ ಉತ್ತರ ಕರ್ನಾಟಕದಲ್ಲೇ ಹೆಚ್ಚಾಗಿ ಸುರಿಯುತ್ತದೆಂದು ಪಂಚಾಗದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಬಾರಿ ಮಳೆ ಪ್ರತಿಶತ 40 ರಷ್ಟು ಕಡಿಮೆಯಾಗಿದೆ ಎಂದು ಹವಾಮಾನ ತಜ್ಞರು ಹೇಳುತ್ತಲೇ ಬಂದಿದ್ದರು. ಕಳೆದ ಮೇ ತಿಂಗಳಲ್ಲಿ ನಿರೀಕ್ಷಿತ ಮಳೆ ಬಾರದೇ ಇದ್ದಾಗ ಹವಾಮಾನ ತಜ್ಞರ ಲೆಕ್ಕಾಚಾರ ನಿಜವೆಂದೇ ನಂಬಲಾಗಿತ್ತು. ಆದರೆ, ಆಗಸ್ಟ್ ಮೊದಲ ವಾರದ ಮಳೆಯು ಅವರ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಸದ್ಯ ಪಂಚಾಂಗದಲ್ಲಿ ಬರೆದ ಆಶ್ಲೇಷ ಮಳೆ ನಿಜವಾಗಿದ್ದು, ಉತ್ತರ ಕರ್ನಾಟಕದಲ್ಲಿ ಬಿಡದೇ ಮಳೆ ಸುರಿಯುತ್ತಿರುವುದು ಪಂಚಾಂಗವನ್ನು ನಿಜವಾಗಿಸಿದೆ.