ETV Bharat / state

'ವಿರೋಧ ಪಕ್ಷವೆಂದ್ರೆ ಎಲ್ಲದಕ್ಕೂ ವಿರೋಧಿಸುವುದೇ ಅಂದುಕೊಂಡಿದ್ದಾರೆ' - Laxman Savadi outrage against the Congress party

ಕಾಂಗ್ರೆಸ್‌ನವರು ಬೇಕಾದ್ರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕರೆಸಿ ಸಮಾವೇಶ ಮಾಡಲಿ. ನಾವು ಕೋವಿಡ್ ನಿಯಮಗಳನ್ನು ಪಾಲಿಸಿಯೇ ಸಮಾವೇಶ ಮಾಡುತ್ತೇವೆ ಎಂದು ಡಿಸಿಎಂ ಲಕ್ಷ್ಮಣ್​ ಸವದಿ ಹೇಳಿದ್ದಾರೆ.

DCM Laxman savadi
ಡಿಸಿಎಂ ಲಕ್ಷ್ಮಣ್​ ಸವದಿ
author img

By

Published : Jan 15, 2021, 3:38 PM IST

ಬೆಳಗಾವಿ: ಕಾಂಗ್ರೆಸ್ಸಿನವರಿಗೆ ಬೇರೆ ಕೆಲಸವಿಲ್ಲ. ವಿರೋಧ ಪಕ್ಷವೆಂದ್ರೆ ಎಲ್ಲದಕ್ಕೂ ವಿರೋಧ ಮಾಡುವುದೇ ಅಂದುಕೊಂಡಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ್​ ಸವದಿ ಹೇಳಿದರು.

ಅಮಿತ್ ಶಾ ಅವರ ಜನಸೇವಕ ಸಮಾವೇಶ ರದ್ದುಗೊಳಿಸಿ ಇಲ್ಲವೇ ಕೋವಿಡ್ ಮಾರ್ಗಸೂಚಿ ಹಿಂಪಡೆಯಿರಿ ಎಂಬ ಕಾಂಗ್ರೆಸ್ ಆಗ್ರಹಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರು ಬೇಕಾದ್ರೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕರೆಸಿ ಸಮಾವೇಶ ಮಾಡಲಿ. ನಾವು ಕೋವಿಡ್ ನಿಯಮಗಳನ್ನು ಪಾಲಿಸಿಯೇ ಸಮಾವೇಶ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

ಪಕ್ಷದಲ್ಲಿ ಭಿನ್ನಮತ, ಅಸಮಾಧಾನ ಸಹಜವಾಗಿಯೇ ಇರುತ್ತವೆ. ಯಾರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಅವರಿಗೆ ಬೇಸರ ಆಗಿರುತ್ತದೆ. ಅವರು ಬೇಸರದಿಂದ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದು ಬಿಜೆಪಿ ಕುಟುಂಬದ ಮಧ್ಯದಲ್ಲಿ ಇರುವ ಅಸಮಾಧಾನ. ಅವೆಲ್ಲವೂ ಮುಂದಿನ ದಿನಗಳಲ್ಲಿ ಸರಿ ಹೋಗಲಿದೆ ಎಂದರು.

ಡಿಸಿಎಂ ಲಕ್ಷ್ಮಣ್​ ಸವದಿ ಹೇಳಿಕೆ

ಅಮಿತ್ ಶಾ ಅವರಿಗೆ ಅಸಮಾಧಾನಿತ ಶಾಸಕರು ದೂರು ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದಲ್ಲಿ ನೋವನ್ನು ತೋಡಿಕೊಳ್ಳಲು ಮುಕ್ತ ಅವಕಾಶವಿದೆ. ನಮ್ಮ ನಾಯಕರ ಮುಂದೆ ನೋವು ತೊಡಿಕೊಳ್ಳದೆ ಮತ್ತೆ ಯಾರ ಮುಂದೆ ತೋಡಿಕೊಳ್ಳಬೇಕು. ಅಸಮಾಧಾನಿತ ಶಾಸಕರು ನನ್ನ ಸಂಪರ್ಕಕ್ಕೆ ಬಂದಿಲ್ಲ ಎಂದರು.

ಬಸನಗೌಡ ಪಾಟೀಲ್ ಯತ್ನಾಳ್, ಹೆಚ್. ವಿಶ್ವನಾಥ್ 'ಸಿಡಿ' ಹೇಳಿಕೆಯ ಬಗ್ಗೆ ಮಾತನಾಡಿದ ಅವರು, ಯಾವ ಸಿಡಿನೂ ಇಲ್ಲ, ಗೀಡಿನೂ ಇಲ್ಲ ಎಂದ ಅವರು, ರಾಜ್ಯಕ್ಕೆ ಎರಡು ದಿನ ಕೇಂದ್ರ ಗೃಹಸಚಿವ ಅಮಿತ್ ಶಾ ಬರುತ್ತಿದ್ದಾರೆ. ಜನವರಿ 16 ರಂದು‌ ಬೆಂಗಳೂರಿಗೆ ಬಂದು ಇಲಾಖೆಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಭದ್ರಾವತಿಗೆ ಹೋಗಿ ಮರಳಿ ಬೆಂಗಳೂರಿಗೆ ಬಂದು ವಾಸ್ತವ್ಯ ಮಾಡುತ್ತಾರೆ ಎಂದು ಹೇಳಿದರು.

ಜ.17 ರಂದು ಬೆಳಗ್ಗೆ 10.30ಕ್ಕೆ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ಗೆ ಅಮಿತ್ ಶಾ ಬರ್ತಾರೆ. ಬಳಿಕ ಬಾಗಲಕೋಟೆಗೆ ತೆರಳಿ ಸಕ್ಕರೆ ಕಾರ್ಖಾನೆ ಉದ್ಘಾಟನೆ ಮಾಡಿ, ಮಧ್ಯಾಹ್ನ ಜನಸೇವಕ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ನಂತರ ನಗರದಲ್ಲಿ ನಡೆಯುವ ಕೋರ್​ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ದಿವಂಗತ ಸುರೇಶ್ ಅಂಗಡಿ ನಿವಾಸಕ್ಕೂ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಸಂಜೆ ಅಧಿಕಾರಿಗಳ ಸಭೆ ನಡೆಸಿ ಮರಳಿ ದೆಹಲಿಗೆ ತೆರಳಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿಡಿ ವಿಚಾರ, ಸಂಪುಟ ವಿಸ್ತರಣೆ ಅಸಮಾಧಾನ ಕುರಿತು ಮಾತನಾಡಬೇಡಿ: ಶಾಸಕರು, ಸಚಿವರಿಗೆ ಬಿಜೆಪಿ ಸೂಚನೆ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.