ETV Bharat / state

ರಮೇಶ್ ಜಾರಕಿಹೊಳಿ ಹೇಳಿಕೆಗೆ ಬೆಲೆ ಕೊಡುವ ಅಗತ್ಯವಿಲ್ಲ: ಸಿದ್ದರಾಮಯ್ಯ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟುಡೆ ನ್ಯೂಸ್

ರಮೇಶ್​ ಜಾರಕಿಹೊಳಿ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಪ್ರತಿಕ್ರಿಯೆ ನೀಡಿದ್ದಾರೆ.

siddaramaiah slams ramesh jarkiholi
ರಮೇಶ್​ ಜಾರಕಿಹೊಳಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
author img

By

Published : Dec 15, 2021, 8:07 PM IST

ಬೆಳಗಾವಿ: ರಮೇಶ್ ಜಾರಕಿಹೊಳಿ ನೀಡುವ ವೇಸ್ಟ್ ಬಾಡಿ ಹೇಳಿಕೆಗೆ ಕಿಮ್ಮತ್ತು ಕೊಡುವ ಅಗತ್ಯ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ರಮೇಶ್​ ಜಾರಕಿಹೊಳಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಸುವರ್ಣಸೌಧದಲ್ಲಿ ಮಾತನಾಡಿದ ಅವರು, ನಾನು ರಾಜಕೀಯಕ್ಕೆ ಬಂದು ಐವತ್ತು ವರ್ಷ ಆಗಿದೆ.‌ ಇಂಥ ಜನರನ್ನು ಬಹಳ ನೋಡಿದ್ದೇನೆ. ಅದಕ್ಕೆ ಏನೂ ಕಿಮ್ಮತ್ತಿಲ್ಲ. ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವೂ ಇಲ್ಲ. ಒಂದು ಕಡೆ ಗುರು ಅಂತಾರೆ, ಇನ್ನೊಂದು ಕಡೆ ಈ ರೀತಿ ಅಂತಾರೆ ಅದಕ್ಕೆಲ್ಲ ಏನು ಬೆಲೆ ಇದೆ ಎಂದು ತಿರುಗೇಟು ನೀಡಿದರು.

ಅವರಿಗೆ ರಾಜಕೀಯ ಭಾಷೆ, ಸಂಸ್ಕೃತಿ ಇಲ್ಲ. ಸಿದ್ದರಾಮಯ್ಯ ಏನು ಅಂಥ ರಾಜ್ಯದ ಜನತೆಗೆ ಗೊತ್ತಿದೆ. ಯಾರೋ ಒಬ್ಬ ವ್ಯಕ್ತಿ ಪದೇ ಪದೆ ಮಾತನಾಡುತ್ತಾರೆ ಎಂದು ಅದಕ್ಕೆ ಉತ್ತರ ಕೊಡುವುದಕ್ಕೆ ಆಗುತ್ತಾ. ಹೀಗೆ ಟಾರ್ಗೆಟ್ ಮಾಡುವವರನ್ನು, ಟೀಕೆ ಮಾಡುವವರನ್ನು ಬಹಳಷ್ಟು ಜನ‌ ನೋಡಿದ್ದೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: Karnataka Covid: ರಾಜ್ಯದಲ್ಲಿಂದು 317 ಮಂದಿಗೆ ಪಾಸಿಟಿವ್​, 2 ಸೋಂಕಿತರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.