ETV Bharat / state

ಒಂದೇ ವ್ಯಕ್ತಿಗೆ ಬಂತು ಪಾಸಿಟಿವ್​​, ನೆಗೆಟಿವ್​ ಎರಡೆರಡು ವರದಿ.. ಗೊಂದಲವೋ.. ನಿರ್ಲಕ್ಷ್ಯವೋ..!

ಇದು ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೋ ಅಥವಾ ಕುತಂತ್ರವೋ ಏನೂ ತಿಳಿಯದಾಗಿದ್ದು, ನನಗೆ ಹಾಗೂ ನನ್ನ ಕುಟುಂಬಕ್ಕೆ ಇದು ತೀವ್ರ ತಲೆ ನೋವಾಗಿದ್ದು ಇದರಿಂದಾಗಿ ನನ್ನ ಹಾಗೂ ಕುಟುಂಬದವರ ಮಾನಸಿಕ ಸ್ಥಿತಿ ಬದಲಾಗಿ ತೀವ್ರವಾಗಿ ಹಿಂಸೆಯಾಗುತ್ತಿದೆ ಎಂದು ಆರೋಪಿಸಿದರು.

One person got two covid report in Belagavi
ಒಂದೇ ವ್ಯಕ್ತಿಗೆ ಬಂತು ಪಾಸಿಟಿವ್​​, ನೆಗೆಟಿವ್​ ಎರಡೆರಡು ವರದಿ...ಗೊಂದಲವೋ..ನಿರ್ಲಕ್ಷ್ಯವೂ..!
author img

By

Published : Jul 25, 2020, 11:34 PM IST

ಅಥಣಿ (ಬೆಳಗಾವಿ): ಅಥಣಿಯ ಹಿಪ್ಪರಗಿ ಗಲ್ಲಿಯ ನಿವಾಸಿ ಓರ್ವರಿಗೆ ಕೊರೊನಾ ನೆಗೆಟಿವ್ ಹಾಗೂ ಪಾಸಿಟಿವ್ ಬೇರೆ ಬೇರೆ ವರದಿಗಳು ಬಂದು ಗೊಂದಲಕ್ಕೆ ಕಾರಣವಾಗಿದೆ.

ಈ ಕುರಿತು ಮಾತನಾಡಿರುವ ವ್ಯಕ್ತಿ, ಮೊದಲು ನನಗೆ ಜುಲೈ 15 ರಂದು ಸ್ಥಳೀಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿ ನನ್ನನ್ನು ಬೆಳಗಾವಿ ಬಿಮ್ಸ್​ಗೆ ಕಳುಹಿಸಿದರು. ನಾನು ಬೀಮ್ಸ್​ಗೆ ಅದೇ ದಿನ ರಾತ್ರಿ ಹೋಗಿ ಮರುದಿನ ಅಲ್ಲಿಯೂ ಕೂಡ ಗಂಟಲು ದ್ರವ ಪರೀಕ್ಷೆ ಮಾಡಿದಾಗ ನನಗೆ ನೆಗೆಟಿವ್ ಎಂದು ಹೇಳಿ ನನ್ನನ್ನು ಮನೆಯಲ್ಲಿಯೇ ಕ್ವಾರಂಟೈನ್ ಇರಲು ಹೇಳಿದರು.

ಒಂದೇ ವ್ಯಕ್ತಿಗೆ ಬಂತು ಪಾಸಿಟಿವ್​​, ನೆಗೆಟಿವ್​ ಎರಡೆರಡು ವರದಿ...ಗೊಂದಲವೋ..ನಿರ್ಲಕ್ಷ್ಯವೂ..!

ಇದು ಮುಗಿದು ಇವಾಗ ಒಂದುವಾರ ಆಗುವಷ್ಟರಲ್ಲಿ ಇವತ್ತು ಅಂದರೆ ದಿನಾಂಕ 25ರಂದು ಮತ್ತೆ ಅಥಣಿಯಲ್ಲಿ ಬಂದಿರುವ ಲೀಸ್ಟ್​​ನಲ್ಲಿ ನನಗೆ ಪಾಸಿಟಿವ್ ಬಂದಿದೆ ಎಂದು ತಾಲೂಕಾಡಳಿತದವರು ಹೇಳಿ ಆಸ್ಪತ್ರೆಗೆ ಬನ್ನಿ ಎಂದು ಹೇಳುತ್ತಿದ್ದಾರೆ. ಕೇವಲ ಒಂದು ವಾರದ ಅಂತರದಲ್ಲಿ ಪಾಸಿಟಿವ್​ ಮತ್ತು ನೆಗೆಟಿವ್ ವರದಿ ಬರಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಇದು ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೋ ಅಥವಾ ಕುತಂತ್ರವೋ ಏನೂ ತಿಳಿಯದಾಗಿದ್ದು, ನನಗೆ ಹಾಗೂ ನನ್ನ ಕುಟುಂಬಕ್ಕೆ ಇದು ತೀವ್ರ ತಲೆನೋವಾಗಿದ್ದು ಇದರಿಂದಾಗಿ ನನ್ನ ಹಾಗೂ ಕುಟುಂಬದವರ ಮಾನಸಿಕ ಸ್ಥಿತಿ ಬದಲಾಗಿ ತೀವ್ರವಾಗಿ ಹಿಂಸೆಯಾಗುತ್ತಿದೆ ಎಂದು ಆರೋಪಿಸಿದರು.

ಇದೇ ರೀತಿ ನನ್ನಂತೆ ಇನ್ನೂ ಹಲವಾರು ಜನರನ್ನು ಪಾಸಿಟಿವ್ ಎಂದು ಆರೋಗ್ಯ ಇಲಾಖೆ ದಾರಿತಪ್ಪಿಸುತ್ತಿದೆ. ಇವರು ಹೇಗೆ ರಿಪೋರ್ಟ್​ ತೆಗೆಯುತ್ತಿದ್ದಾರೆ ತಿಳಿಯುತ್ತಿಲ್ಲ. ಇದನ್ನು ಕೇಳಲೆಂದು ಇವತ್ತು ಬೆಳಗ್ಗೆಯಿಂದ ಬೆಳಗಾವಿ ಡಿಹೆಚ್​​​ಓ, ಅಥಣಿ ಟಿಹೆಚ್​ಓ ಹಾಗೂ ಇತರ ಎಲ್ಲರನ್ನೂ ಫೋನ್​​ ಮುಖಾಂತರ ಸಂಪರ್ಕಿಸಿದಾಗ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಒಂದು ವೇಳೆ ಮತ್ತೆ ನನಗೆ ಏನಾದರೂ ಈ ವಿಷಯಕ್ಕೆ ಸಂಬಂಧಪಟ್ಟಂತೆ ತೊಂದರೆಯಾದರೆ ನಾನು ಪೋಲಿಸ್​​ ಠಾಣೆಯಲ್ಲಿ ದೂರು ದಾಖಲಿಸುತ್ತೇನೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.