ETV Bharat / state

ರಂಜಾನ್ ಮಾಸ: ತಿಂಗಳ ಕಾಲ ಉಪವಾಸ ವ್ರತಾಚರಣೆ ಮಾಡಿದ 6 ವರ್ಷದ ಪೋರಿ! - prayer by aisha

ಗೋಕಾಕ್​ನ ಆರು ವರ್ಷದ ಬಾಲಕಿ ಪವಿತ್ರ ರಂಜಾನ್​ ತಿಂಗಳಿನ ಉಪವಾಸ ವ್ರತವನ್ನು ಪೂರ್ಣಗೊಳಿಸಿದ್ದಾಳೆ. ಯುಕೆಜಿ ಓದುತ್ತಿರುವ ಐಷಾ, ಕಳೆದ ವರ್ಷವೂ ರಂಜಾನ್ ವೇಳೆ ಒಂದು ದಿ‌ನ ಉಪವಾಸ ಆಚರಿಸಿದ್ದಳು. ಆದರೆ, ಈ ವರ್ಷ ಮನಸಾರೆಯಾಗಿ ರಂಜಾನ್ ಮಾಸದ ಮೊದಲ ದಿನದಿಂದ ನಿನ್ನೆಯವರೆಗೆ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಾಳೆ.

ತಿಂಗಳ ಕಾಲ ಉಪವಾಸ ವ್ರತಾಚರಣೆ ಮಾಡಿದ ಪೋರಿ!
ತಿಂಗಳ ಕಾಲ ಉಪವಾಸ ವ್ರತಾಚರಣೆ ಮಾಡಿದ ಪೋರಿ!
author img

By

Published : May 25, 2020, 6:33 PM IST

Updated : May 25, 2020, 7:13 PM IST

ಬೆಳಗಾವಿ: ಪವಿತ್ರ ರಂಜಾನ್ ಮಾಸದಲ್ಲಿ 6 ವರ್ಷದ ಬಾಲಕಿ ಒಂದು ತಿಂಗಳ ಕಾಲ ಉಪವಾಸ ವ್ರತವನ್ನು ಕೈಗೊಂಡಿದ್ದು, ಇಂದು ಪೂರ್ಣಗೊಳಿಸಿದ್ದಾಳೆ.

ಗೋಕಾಕ್​ ನಗರದ ಬಾಂಬೆ ಚಾಳ್​ನ ನಿವಾಸಿ ಐಷಾ ಮುಲ್ಲಾ, ರಂಜಾನ್ ಮಾಸದಲ್ಲಿ ಒಂದು ತಿಂಗಳ ವ್ರತ ಪಾಲಿಸಿ ಗಮನ ಸೆಳೆದಿದ್ದಾಳೆ.

ತಿಂಗಳ ಕಾಲ ಉಪವಾಸ ವ್ರತಾಚರಣೆ ಮಾಡಿದ 6 ವರ್ಷದ ಪೋರಿ!

ಯುಕೆಜಿ ಓದುತ್ತಿರುವ ಐಷಾ, ಕಳೆದ ವರ್ಷವೂ ರಂಜಾನ್ ವೇಳೆ ಒಂದು ದಿ‌ನ ಉಪವಾಸ ಆಚರಿಸಿದ್ದಳು. ಆದರೆ, ಈ ವರ್ಷ ಮನಸಾರೆಯಾಗಿ ರಂಜಾನ್ ಮಾಸದ ಮೊದಲ ದಿನದಿಂದ ನಿನ್ನೆಯವರೆಗೆ ಉಪವಾಸ ಆಚರಿಸಿದ್ದಾಳೆ. ಪ್ರತಿದಿನ ನಸುಕಿನ ಜಾವ 4ಗಂಟೆಗೆ ತಂದೆ-ತಾಯಿ ಜೊತೆಗೇ ಏಳುತ್ತಿದ್ದ ಬಾಲಕಿ ಐಷಾ, ಮನೆಯವರೊಂದಿಗೆ ಪ್ರಾರ್ಥನೆ ಸಲ್ಲಿಸಿ ತಿಂಗಳ ಕಾಲ ಉಪವಾಸ ಮಾಡಿದ್ದಾಳೆ.

ಆಟ ಆಡುವ ವಯಸ್ಸಿನಲ್ಲಿ ತಿಂಗಳ ಕಾಲ ಉಪವಾಸ ವ್ರತ ಪೂರ್ಣಗೊಳಿಸಿರುವ ಬಾಲಕಿಯನ್ನು ನೋಡಿ ಚಾಳ್​ನ ಮುಸ್ಲಿಂ ಬಾಂಧವರು ಹೆಮ್ಮೆಪಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬಾಲಕಿ ತಂದೆ ಜಾವೀದ್ ಮುಲ್ಲಾ, ಮಗಳ ಬಗ್ಗೆ ನನಗೆ ಮಾತ್ರ ಅಲ್ಲ, ಇಡೀ ಕುಟುಂಬಕ್ಕೆ ಹೆಮ್ಮೆ ಇದೆ. ಇಡೀ ಬಡಾವಣೆ ಜನರೂ ನನ್ನ ಮಗಳ ಬಗ್ಗೆ ಹೆಮ್ಮೆ ಪಡುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ ಎಂದಿದ್ದಾರೆ.

Last Updated : May 25, 2020, 7:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.