ETV Bharat / state

ಬೆಳಗಾವಿಯಲ್ಲಿ ತಗ್ಗದ ಪ್ರವಾಹ: ಪ್ರಾಣದ ಹಂಗು ತೊರೆದು ಯಮಕನಮರಡಿಗೆ ಬಂದ ಜಾರಕಿಹೊಳಿ - ಬೆಳಗಾವಿ ಪ್ರವಾಹ ಪೀಡಿತರು,

ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೆತ್ರದ ಜನರೂ ಕೂಡ ಪ್ರವಾಹದಲ್ಲಿ ಸಿಲುಕಿದ್ದಾರೆ. ಇವರನ್ನು ರಕ್ಷಿಸಲು ಸ್ವತಃ ಶಾಸಕರು ಕಾಕತಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೆಲೆ ಅಪಾಯದ ಮಟ್ಟ ನೀರು ಹರಿಯುತ್ತಿದ್ದರು ಲೆಕ್ಕಿಸದೆ ಬಂದು ಜನರ ರಕ್ಷಣೆಗೆ ಮುಂದಾಗಿದ್ದಾರೆ.

ಪ್ರವಾಹ ಪೀಡಿತರ ನೆರವಿಗೆ ಮುಂದಾಗುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು
author img

By

Published : Aug 10, 2019, 2:22 AM IST

Updated : Aug 10, 2019, 3:22 AM IST

ಬೆಳಗಾವಿ: ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೆತ್ರದ ಜನರೂ ಕೂಡ ಪ್ರವಾಹದಲ್ಲಿ ಸಿಲುಕಿದ್ದಾರೆ. ಇವರನ್ನು ರಕ್ಷಿಸಲು ಸ್ವತಃ ಶಾಸಕರು ಕಾಕತಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೆಲೆ ಅಪಾಯದ ಮಟ್ಟ ನೀರು ಹರಿಯುತ್ತಿದ್ದರು ಲೆಕ್ಕಿಸದೆ ಬಂದು ಜನರ ರಕ್ಷಣೆಗೆ ಮುಂದಾಗಿದ್ದಾರೆ.

flood victims
ಸಂತ್ರಸ್ತರ ನೆರವಿಗೆ ಧಾವಿಸಿದ ಮಾಜಿ ಸಚಿವ ಲಕ್ಷ್ಮಣ ಸವದಿ

ಯಮಕನಮರಡಿ ಕ್ಷೆತ್ರದ ಹೆಬ್ಬಾಳ, ಚಿಕಾಲಗುಡ್ಡ, ಸೇರಿದಂತೆ ಹಲವು ಗ್ರಾಮಗಳ ಜನತೆ ನೀರಿನಲ್ಲಿ ಸಿಲುಕಿದ್ದು, ಸಾವು ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಶಾಸಕರೇ ಅವರ ರಕ್ಷಣೆಗೆ ಧಾವಿಸಿದ್ದು, ಜನರಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ.

ಮಲಪ್ರಭಾ ನದಿಯಿಂದ ಜಿಲ್ಲೆಯ ಖಾನಾಪೂರ ತಾಲೂಕಿನ ಅನೇಕ ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಸ್ಥಳಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಜನರಿಗೆ ಧೈರ್ಯ ತುಂಬುತ್ತಿದ್ದಾರೆ.

ಪ್ರವಾಹ ಪೀಡಿತರ ನೆರವಿಗೆ ಮುಂದಾಗುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು

ಪ್ರವಾಹ ಪೀಡಿತ ಸ್ಥಳಕ್ಕೆ ಶಾಸಕಿ ನಿಂಬಾಳ್ಕರ್ ಭೇಟಿ:

ಖಾನಾಪೂರ ತಾಲೂಕಿನ ಲೋಂಡಾ ಪ್ರವಾಹ ಪೀಡಿತ ಪ್ರದೇಶದ ಗಂಜಿ ಕೇಂದ್ರಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಭೇಟಿ ನೀಡಿದರು. ಈ ವೇಳೆ ಅವರು ನಿರಾಶ್ರಿತರ ಕುಂದುಕೊರತೆಗಳನ್ನು ಆಲಿಸಿದರು. ತುರ್ತಾಗಿ ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪುರೈಕೆ ಮಾಡುವಂತೆ ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದರು.

flood victims
ಪ್ರವಾಹ ಪೀಡಿತ ಸ್ಥಳಕ್ಕೆ ಶಾಸಕಿ ನಿಂಬಾಳ್ಕರ್ ಭೇಟಿ

ಪ್ರವಾಹ ಪೀಡಿತರಿಗೆ ಸಹಾಯ ಮಾಡುವಂತೆ ಹುಕ್ಕೇರಿ ಹೀರೆಮಠದ ಸ್ವಾಮೀಜಿ ಮನವಿ:

ಇನ್ನೂ ಈ ಹಿನ್ನಲೆ ಪ್ರವಾಹ ಪೀಡಿತ ಜನರಿಗೆ ಸಾರ್ವಜನಿಕರು ಸಹಾಯ ಮಾಡುವಂತೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೀರೆಮಠದ ಸ್ವಾಮೀಜಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದ್ದಾರೆ. ಈಗ ಉತ್ತರ ಕರ್ನಾಟಕದ ವಿಚಾರದಲ್ಲಿ ತಾರತಮ್ಯ ಮನೋಭಾವ ಬೇಡಾ ಎಲ್ಲರೂ ಮುಕ್ತವಾಗಿ ಬಂದು ಸಹಾಯಹಸ್ತ ತೋರಿ ಜನರ ಕಣ್ಣೀರನ್ನ ವರೆಸಿ ಎಂದು ಹೇಳಿದರು.

flood victims
ಪ್ರವಾಹ ಪೀಡಿತರಿಗೆ ಸಹಾಯ ಮಾಡುವಂತೆ ಹುಕ್ಕೇರಿ ಹೀರೆಮಠದ ಸ್ವಾಮೀಜಿ ಮನವಿ

ಸಂತ್ರಸ್ತರ ನೆರವಿಗೆ ಧಾವಿಸಿದ ಮಾಜಿ ಸಚಿವ ಲಕ್ಷ್ಮಣ ಸವದಿ:

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಗಂಜಿಕೇಂದ್ರ, ಹುಲಗಬಾಳಿ, ತಂಗಡಿ, ಸಿನಾಳ, ಸವದಿ, ದೇವರಡ್ಡೆರಹಟ್ಟಿ ತೋಟದ ಗಂಜಿ ಕೇಂದ್ರಗಳಿಗೆ ಇಂದು ಭೇಟಿ ನೀಡಿದ ಮಾಜಿ ಸಚಿವ ಲಕ್ಷ್ಮಣ ಸವದಿಯವರು ಹಾಸಿಗೆ, ಹೊದಿಕೆ ಆಹಾರದ ಪೊಟ್ಟಣ ವಿತರಣೆ ಮಾಡಿದರು.

ಅಷ್ಟೇಅಲ್ಲದೆ, ದೇವರೆಡ್ಡಿ ತೋಟದ ಗಂಜಿ ಕೇಂದ್ರದಲ್ಲಿ ಸ್ವತಃ ಲಕ್ಷ್ಮಣ ಸವದಿ ಅವರು ಅನ್ನ ಸಾಂಬಾರು ಊಟಮಾಡಿ ಗುಣಮಟ್ಟ ಪರೀಕ್ಷೆ ಮಾಡಿದರು. ದನಕರುಗಳಿಗೆ ಸಮರ್ಪಕವಾಗಿ ಮೇವು ವಿತರಿಸಬೇಕೆಂದು ಹೇಳಿದರು ಇವರ ಜನಪರ ಪ್ರೀತಿಯನ್ನು ಅಲ್ಲಿಯ ಜನತೆ ಕೊಂಡಾಡಿದರು.

Intro:ಪ್ರವಾಹ ಪೀಡಿತ ಸ್ಥಳಕ್ಕೆ ಶಾಸಕಿ ನಿಂಬಾಳ್ಕರ್ ಭೇಟಿ

ಬೆಳಗಾವಿ : ಮಲಪ್ರಭಾ ನದಿಯಿಂದ ಜಿಲ್ಲೆಯ ಖಾನಾಪೂರ ತಾಲೂಕಿನ ಅನೇಕ ಗ್ರಮಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಅಲ್ಲಿನ ಗಂಜಿ ಕೇಂದ್ರಕ್ಕೆ ಸ್ಥಳೀಯ ಶಾಸಕಿ ಅಂಜಲಿ ನಿಂಬಾಳ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Body:ಖಾನಾಪೂರ ತಾಲೂಕಿನ ಲೋಂಡಾ ಪ್ರವಾಹ ಪೀಡಿತ ಪ್ರದೇಶದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕಿ ನಿಂಬಾಳ್ಕರ್. ನಿರಾಶ್ರಿತರ ಕುಂದುಕೊರತೆಗಳನ್ನು ಆಲಿಸಿದರು. ತುರ್ತಾಗಿ ಜನರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪುರೈಕೆ ಮಾಡುವಂತೆ ಅಲ್ಲಿನ ಅಧಿಕಾರಿಗಳಿಗೆ ತಿಳಿಸಿದರು.

Conclusion:ಜಿಲ್ಲೆಯ ಖಾನಾಪೂರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು ಜನರು ಕಂಗಾಲಾಗಿದ್ದಾರೆ. ಸಾವಿರಕ್ಕೂ ಅಧಿಕ ಜನ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದು ಸರ್ಕಾರ ಪರಿಹಾರ ನೀಡುವ ಭರವಸೆಯಲ್ಲಿದ್ದಾರೆ.

ವಿನಾಯಕ ಮಠಪತಿ
ಬೆಳಗಾವಿ

Last Updated : Aug 10, 2019, 3:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.