ETV Bharat / state

ಕಲಾಪದಲ್ಲಿ ಉತ್ತರ ಕರ್ನಾಟಕ ಚರ್ಚೆ: ನೀರಾವರಿ ಸಮಸ್ಯೆ ಬಗ್ಗೆ ಸರ್ಕಾರ ಗಮನ ಹರಿಸಲಿ- ಯತ್ನಾಳ್ - ಈಟಿವಿ ಭಾರತ ಕನ್ನಡ

ವಿಧಾನಸಭೆ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಆರಂಭವಾಗಿದೆ.

ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಚರ್ಚೆ
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಚರ್ಚೆ
author img

By ETV Bharat Karnataka Team

Published : Dec 13, 2023, 10:06 AM IST

Updated : Dec 13, 2023, 11:09 AM IST

ಕಲಾಪದಲ್ಲಿ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಮಾತನಾಡಿದ ಯತ್ನಾಳ್​

ಬೆಳಗಾವಿ/ ಬೆಂಗಳೂರು: ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರ ಕೊನೆಗೂ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಗೆ ಬಂದಿದೆ. ಅಲ್ಲಿನ ಸಮಸ್ಯೆಗಳು ಮತ್ತು ಜನಪ್ರತಿನಿಧಿಗಳು ತಾತ್ಸಾರ ಮನೋಭಾವದ ಕುರಿತು ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್​ ಸದನದ ಗಮನಕ್ಕೆ ತಂದರು.

ವಿಧಾನಸಭೆಯಲ್ಲಿ ಮಂಗಳವಾರ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಭಾಗಕ್ಕೆ ಎಚ್.ಕೆ ಪಾಟೀಲ್, ಎಂ. ಬಿ. ಪಾಟೀಲ್, ಬಸವರಾಜ ಬೊಮ್ಮಾಯಿ ಅವರು ಬಿಟ್ಟರೆ ಉಳಿದೆಲ್ಲಾ ನೀರಾವರಿ ಮಂತ್ರಿಗಳು ಹಳೆ ಮೈಸೂರು ಭಾಗದವರಾಗಿದ್ದಾರೆ. ಹೀಗಾಗಿ ಈ ಭಾಗದ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಇಲ್ಲವಾಗಿದೆ ಎಂದು ಹೇಳಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನೀರಾವರಿ ಮಂತ್ರಿಯಾಗಿದ್ದಾಗ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಹೊರಟರು. ಆದರೆ, ಅವರ ವಿರುದ್ಧ ಕುತಂತ್ರ ರಾಜಕಾರಣ ಮಾಡಿದರು. ಇಂತಹ ಕೆಟ್ಟ ರಾಜಕಾರಣ ಬೇಕಿರಲಿಲ್ಲ. ಇದು ನಮ್ಮ ಭಾಗದ ಅಭಿವೃದ್ಧಿಗೆ ಹಿನ್ನಡೆ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರತ್ಯೇಕ ರಾಜ್ಯಕ್ಕೆ ಅವಕಾಶ ಕೊಡಬೇಡಿ: ಬೆಳಗಾವಿ ಸಮಸ್ಯೆ, ಮಹಾರಾಷ್ಟ್ರ ಗಡಿ, ಉತ್ತರ ಕರ್ನಾಟಕ ಅಭಿವೃದ್ಧಿ ಚರ್ಚೆ ಆಗಬೇಕೆಂದು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಿಸಿದ್ದಾರೆ. ಆದರೆ, ಲಾಭವೇನು?, ಸಮಸ್ಯೆಗಳೆ ಚರ್ಚೆಯಾಗುತ್ತಿಲ್ಲ. ನಾನು ಸಮಗ್ರ ಕರ್ನಾಟಕದ ಪರವಾಗಿದ್ದೇನೆ. ಕರ್ನಾಟಕ ಪ್ರತ್ಯೇಕತೆಗೆ ಎಂದಿಗೂ ಬೆಂಬಲ ಕೊಟ್ಟಿಲ್ಲ. ಚಾಮರಾಜನಗರದಿಂದ ಬೀದರ್, ಕೋಲಾರದಿಂದ ಕೊಡಗಿನವರೆಗೂ ಒಂದೇ ಎಂಬ ಭಾವನೆ ಗಟ್ಟಿಗೊಳಿಸಬೇಕು. ಅಭಿವೃದ್ಧಿ ಮತ್ತು ಸ್ಥಾನಮಾನಗಳಲ್ಲಿ ಸಮಾನ ಅವಕಾಶ ನೀಡುವ ಮೂಲಕ ಪ್ರತ್ಯೇಕ ರಾಜ್ಯದ ಕೂಗಿಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.

ಅಭಿವೃದ್ಧಿ ಹಾಗೂ ಸ್ಥಾನಮಾನಗಳ ಹಂಚಿಕೆಯಲ್ಲಿ ಪ್ರಾದೇಶಿಕ ತಾರತಮ್ಯವನ್ನು ನಿವಾರಿಸುವ ಮೂಲಕ ಪ್ರತ್ಯೇಕ ರಾಜ್ಯದ ಕೂಗು ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು. ಬೆಳಗಾವಿ ಸುವರ್ಣಸೌಧ ನಿರ್ಮಾಣ ಆದ ಮೇಲೆ ಇದು 11 ನೇ ಅಧಿವೇಶನವಾಗಿದೆ. ಉತ್ತರ ಕರ್ನಾಟಕದ ಬಗ್ಗೆ ಮೊದಲ ದಿನವೇ ಇಲ್ಲಿ ಚರ್ಚೆಯಾಗಬೇಕಿತ್ತು. ಆದರೆ, ಈವರೆಗೂ ಆಗಲಿಲ್ಲ. ಹಾಗಿದ್ದರೆ ಈ ಭಾಗದಲ್ಲಿ ಅಧಿವೇಶನ ಮಾಡುವ ಉದ್ದೇಶವೇನು? ಎಂದು ಪ್ರಶ್ನಿಸಿದರು.

ಬೆಳಗಾವಿಯಲ್ಲೂ ಸಚಿವ ಸಂಪುಟ ಸಭೆ ನಡೆಸಿ: ಬೆಂಗಳೂರಿನಲ್ಲಿ ಒಂದು ಸಚಿವ ಸಂಪುಟ ಸಭೆ ನಡೆದರೆ, ಇನ್ನೊಂದು ಸಭೆ ಬೆಳಗಾವಿ ಸುವರ್ಣಸೌಧದಲ್ಲಿ ನಡೆಸಬೇಕು. ವರ್ಷದಲ್ಲಿ ನೂರು ದಿನ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಮಂಡಲ ಕಲಾಪ ನಡೆಸಬೇಕು ಎಂದು ಒತ್ತಾಯಿಸಿದರು.

ಮೈಸೂರು ಕರ್ನಾಟಕ ಉತ್ತಮ ಅಭಿವೃದ್ಧಿ ಸಾಧಿಸಿದೆ. ಮೈಸೂರು ಮಹಾರಾಜರು ನೀರಾವರಿಗೆ ಆದ್ಯತೆ ನೀಡಿದರು. ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರು ಏಷ್ಯಾ ಖಂಡದಲ್ಲೇ ಮೊದಲ ವಿದ್ಯುತ್ ಘಟಕ ಸ್ಥಾಪಿಸಿದರು. ಆದರೆ, ಉತ್ತರ ಕರ್ನಾಟಕ ಭಾಗದ ದುರ್ದೈವ ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ನವಾಬರ ಆಡಳಿತವಿತ್ತು. ನಿಜಾಂ ಶಾಹಿ, ಆದಿಲ್ ಶಾಹಿ ಸೇರಿದಂತೆ ಹಲವು ರಾಜರು ಗೋರಿಗಳನ್ನೇ ಕಟ್ಟಿದರು ಎಂದರು.

ಹಿನ್ನಡೆಗೆ ಜನಪ್ರತಿನಿಧಿಗಳೇ ಕಾರಣ: ಉತ್ತರ ಕರ್ನಾಟಕ ಭಾಗ ಹಿಂದುಳಿಯಲು ನಮ್ಮ ಭಾಗದ ಜನಪ್ರತಿನಿಧಿಗಳೂ ಕಾರಣರಾಗಿದ್ದಾರೆ. ಕಾಲಕಾಲಕ್ಕೆ ಧ್ವನಿ ಎತ್ತಿದ್ದರೆ 100 ರೂ.ನಲ್ಲಿ 20 ರೂಪಾಯಿಗಳಾದರೂ ನಮ್ಮ ಭಾಗಕ್ಕೆ ಸಿಗುತ್ತಿತ್ತು. ಅದರೆ ಜನಪ್ರತಿನಿಧಿಗಳು ಗಂಭೀರವಾಗಿ ಕೆಲಸ ಮಾಡಲಿಲ್ಲ. ಎಲ್ಲಾ ಅಭಿವೃದ್ಧಿಯೂ ಬೆಂಗಳೂರು ಕೇಂದ್ರೀಕೃತವಾಗಿದೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ 34,115 ಕೋಟಿ ಹೂಡಿಕೆಗೆ ಅನುಮೋದನೆ: 13,308 ಉದ್ಯೋಗ ಸೃಷ್ಟಿ ನಿರೀಕ್ಷೆ

Last Updated : Dec 13, 2023, 11:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.