ETV Bharat / state

ನೀರಿನ ಪೈಪ್​ನಲ್ಲಿ ನವಜಾತ ಶಿಶು ಪತ್ತೆ: ದುಷ್ಕೃತ್ಯ ಎಸಗಿದವರಿಗೆ ಜನರ ಹಿಡಿಶಾಪ - ಬೆಳಗಾವಿಯ ಚಚಡಿ ಗ್ರಾಮ

14 ದಿನಗಳ ಹಸುಗೂಸನ್ನು ನೀರಿನ ಪೈಪ್​​ನಲ್ಲಿ ಎಸೆದು ಹೋಗಿರುವ ಅಮಾನವೀಯ ಘಟನೆ ಬೆಳಗಾವಿ ಜಿಲ್ಲೆಯ ಚಚಡಿ ಗ್ರಾಮದಲ್ಲಿ ನಡೆದಿದೆ.

Newborn baby
ಅಂಗನವಾಡಿ ಕಾರ್ಯಕರ್ತೆಯರಿಂದ ನವಜಾತ ಶಿಶು ರಕ್ಷಣೆ
author img

By

Published : Oct 6, 2020, 8:06 PM IST

ಬೆಳಗಾವಿ: ನವಜಾತ ಶಿಶುವನ್ನು ರಸ್ತೆ ಪಕ್ಕದಲ್ಲಿರುವ ನೀರಿನ ಪೈಪ್‌ನಲ್ಲಿ ಬಿಸಾಡಿ ಹೋಗಿರುವ ಅಮಾನವೀಯ ಘಟನೆ ಚಚಡಿ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಈ ಮಗು ಪತ್ತೆಯಾಗಿದೆ. ಮಗು ಅಳುವ ಸದ್ದು ಕೇಳಿ ಅಲ್ಲಿಯೇ ಇದ್ದ ಸ್ಥಳೀಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ರಕ್ಷಿಸಿದ್ದಾರೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ದು, ಮಗುವನ್ನು ಗ್ರಾಮಸ್ಥರೇ ಆರೈಕೆ ಮಾಡುತ್ತಿದ್ದಾರೆ. ಇಂಥ ದುಷ್ಕೃತ್ಯ ಎಸಗಿರುವವರಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಂದ ನವಜಾತ ಶಿಶು ರಕ್ಷಣೆ

ಸ್ಥಳಕ್ಕೆ ಮುರಗೋಡ ಠಾಣೆ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.