ETV Bharat / state

ರೈತರು, ಪ್ರವಾಹ ಸಂತ್ರಸ್ತರಿಗೆ ಮೈಕ್ರೋ ಫೈನಾನ್ಸ್​ ಸಂಸ್ಥೆಗಳ ನೋಟಿಸ್​: ಚಿಕ್ಕೋಡಿಯಲ್ಲಿ ಪ್ರತಿಭಟನೆ - ಮೈಕ್ರೋ ಫೈನಾನ್ಸ್

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ತಹಶೀಲ್ದಾರ್​ ಕಚೇರಿ ಮುಂದೆ ಬ್ಯಾಂಕ್​ ಹಾಗೂ ಫೈನಾನ್ಸ್​ ಕಿರುಕುಳ ಖಂಡಿಸಿ ಪ್ರತಿಭಟನೆ ನಡೆಸಿದ ನೆರೆ ಸಂತ್ರಸ್ತರು. ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್​ಗೆ ಮನವಿ ಸಲ್ಲಿಸಿದರು.

ಸರ್ಕಾರದ ವಿರುದ್ಧ ನೆರೆ ಸಂತ್ರಸ್ತರ ಪ್ರತಿಭಟನೆ
author img

By

Published : Oct 1, 2019, 8:07 AM IST

ಚಿಕ್ಕೋಡಿ: ಮೈಕ್ರೋ ಫೈನಾನ್ಸ್​ ಹಾಗೂ ಬ್ಯಾಂಕ್​ನವರು ಸಾಲ ಮರುಪಾವತಿಸುವಂತೆ ರೈತರಿಗೆ ಹಾಗೂ ಪ್ರವಾಹ ಸಂತ್ರಸ್ತರಿಗೆ ನೋಟಿಸ್ ನೀಡಿರುವ ಕ್ರಮ​ ಖಂಡಿಸಿ ಚಿಕ್ಕೋಡಿ ತಹಸೀಲ್ದಾರ ಕಚೇರಿ ಎದುರು ಸಂತ್ರಸ್ತರು ಹಾಗೂ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಸರ್ಕಾರದ ವಿರುದ್ಧ ನೆರೆ ಸಂತ್ರಸ್ತರ ಪ್ರತಿಭಟನೆ

ಮೈಕ್ರೋ ಫೈನಾನ್ಸ್​ನವರು ನಿತ್ಯ ಮನೆಗೆ ಬಂದು ಹಣ ನೀಡುವಂತೆ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಡಿಸೆಂಬರ್​ವರಗೆ ಯಾವುದೇ ಬ್ಯಾಂಕ್​ ಸಾಲ ಮರುಪಾವತಿಸುವಂತೆ ಒತ್ತಾಯ ಮಾಡಬಾರದು ಎಂದು ಸರ್ಕಾರ ಹೇಳಿದೆ. ಆದರೂ ಬ್ಯಾಂಕ್​ನಿಂದ ನೋಟಿಸ್​ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೂಡಲೇ ನೋಟಿಸ್​ ನೀಡುತ್ತಿರುವ ಬ್ಯಾಂಕ್​ ಹಾಗೂ ಕಿರುಕುಳ ನೀಡುತ್ತಿರುವ ಫೈನಾನ್ಸ್​ಗಳ ವಿರುದ್ಧ ಸೂಕ್ತಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್​ ಸಂತೋಷ ಬಿರಾದರ ಅವರಿಗೆ ಮನವಿ ಸಲ್ಲಿಸಿದರು.

Intro:ಸರ್ಕಾರ ಹಾಗೂ ಖಾಸಗಿ ಬ್ಯಾಂಕಗಳ ವಿರುದ್ದ ಬೊಬ್ಬೆ ಹೊಡೆದು ರೈತ ಮಹಿಳೆಯರು
Body:
ಚಿಕ್ಕೋಡಿ :

ಪ್ರವಾಹ ಸಂತ್ರಸ್ತ ರೈತರು ಹಾಗೂ ಮಹಿಳೆಯರು ಚಿಕ್ಕೋಡಿ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಮೈಕ್ರೋ ಪೈನಾನ್ಸ ನವರು ದಿನನಿತ್ಯ ಮನೆಗೆ ಬಂದು ಹಣ ನೀಡುವಂತೆ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಿದ ಮಹಿಳೆಯರು ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೋಟಿಸ್ ನೀಡಿದ ಬ್ಯಾಂಕ್ ವಿರುದ್ದ ತಹಶೀಲ್ದಾರ ಕಚೇರಿ ಮುಂದೆ ರೈತರ ಪ್ರತಿಭಟನೆ ಮಾಡಿದರು.

ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಡಿಸೆಂಬರ್ ವರಗೆ ಯಾವುದೇ ಬ್ಯಾಂಕ ಹಣ ತುಂಬುವಂತೆ ಒತ್ತಾಯ ಮಾಡಬಾರೆಂದು ಹೇಳಿದರು ಬ್ಯಾಂಕಗಳಿಂದ ಒತ್ತಾಯ ಮಾಡಿ ಹಣ ಮರಳಿಸುವಂತೆ ಒತ್ತಾಯಿಸುತ್ತಿವೆ ಎಂದು ಅರೋಪಿಸಿ ನೂರಾರು ರೈತರು ಸರ್ಕಾರದ ವಿರುದ್ದ ಹಾಗೂ ಬ್ಯಾಂಕಗಳ ವಿರುದ್ದ ಪ್ರತಿಭಟನೆ ಮಾಡಿದರು.

ಪ್ರವಾಹದಲ್ಲಿ ಮನೆ ಮಠ ಕಳದುಕೊಂಡ ಸಂತ್ರಸ್ತರಿಗೆ ಹಣ ನೀಡುವಂತೆ ಖಾಸಗಿ ಬ್ಯಾಂಕುಗಳು ಒತ್ತಾಯ ಮಾಡುತ್ತಿವೆ ಅಂತಹ ಬ್ಯಾಂಕಗಳ ವಿರುದ್ದ ಕ್ರಮ ಜರಗಿಸುವಂತೆ ತಹಶೀಲ್ದಾರ ಸಂತೋಷ ಬಿರಾದರ ಅವರಿಗೆ ಮನವಿ ಸಲ್ಲಿಸಿದರು.

ನಮ್ಮ ಸಾಲ ಸಂಪೂರ್ಣವಾಗಿ ಮನ್ನಾ ಆಗಬೇಕು‌ ಇದ್ದದ ಮನೆ ಬಿದ್ದು ಹೋಗಿದೆ. ಇರಲಿಕೆ ಜಾಗಾ ಇಲ್ಲಾ ಹೊಲ ಮೊದಲೇ ಇಲ್ಲಾ ನಾವು ಈಗ ಸಾಲ ಮರುಪಾವತಿ ಮಾಡಬೇಕೆಂದರೆ ಹೇಗೆ ಎಂದು ನಿರಾಶ್ರಿತ‌ ಮಹಿಳೆ ತನ್ನ ಆಕ್ರೋಶ ಹೊರಹಾಕಿದ್ದಾಳೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.