ಚಿಕ್ಕೋಡಿ: ತಾಲೂಕಿನ ಮುಗಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ನಿಮಿತ್ತ ರಾಷ್ಟ್ರ ಮಟ್ಟದ ಬೈಕ್ ರೇಸ್ ಆಯೋಜನೆ ಮಾಡಲಾಗಿದ್ದು, ಓಪನ್ ಕ್ಲಾಸ್, ವೆಟರ್ನ್ ಕ್ಲಾಸಸ್, ಸ್ಕೂಟರ್ ಕ್ಲಾಸ್, 2 ಸ್ಟ್ರೋಕ್ ಕ್ಲಾಸ್, 4 ಸ್ಟ್ರೋಕ್ ಕ್ಲಾಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ರೇಸ್ ಆಯೋಜನೆ ಮಾಡಲಾಗಿತ್ತು.
ಈ ಹಳ್ಳಿಯಲ್ಲಿ ಕಳೆದ 8 ವರ್ಷಗಳಿಂದ ಈ ರೀತಿ ರೇಸ್ಅನ್ನು ಗ್ರಾಮದ ಬಡಿಗೇರ ಸಹೋದರರು ನಡೆಸುತ್ತಿದ್ದಾರೆ.
ಗ್ರಾಮದ ಹೊಲವೊಂದರಲ್ಲಿ ಒಂದು ವಾರದ ಮಟ್ಟಿಗೆ ಟ್ರ್ಯಾಕ್ ನಿರ್ಮಿಸಲಾಗಿತ್ತು. ಈ ಟ್ರ್ಯಾಕ್ ನಲ್ಲಿ ಬೈಕ್ ರೈಡರ್ ಗಳು ಬ್ರೂಮ್. ಬ್ರೂಮ್ ಅಂತಾ ಹೋಗ್ತಾ ಇದ್ರೆ ನೆರೆದ ಪ್ರೇಕ್ಷಕರ ಮೈ ನವಿರೇಳುತ್ತಿತ್ತು.