ಚಿಕ್ಕೋಡಿ: ಕಾಗವಾಡ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್ ಆಗಮಿಸುತ್ತಿದ್ದು, ನೂರಾರು ಕಾರ್ಯಕರ್ತರು ಮೂಲಕ ಉಗಾರ ಕೆ.ಎಚ್ ಹಾಗೂ ಉಗಾರ ಬಿ.ಕೆ ಗ್ರಾಮಗಳ ಮೂಲಕ ಬೈಕ್ ರ್‍ಯಾಲಿ ಮಾಡಿ ಸಮಾವೇಶ ನಡೆಸಲಿದ್ದಾರೆ.
ಈಗಾಗಲೇ ಮಂಗಸೂಳಿ ಗ್ರಾಮದಲ್ಲಿ ನೂರಾರೂ ಕಾರ್ಯಕರ್ತರು ಸೇರಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ್ ಕಟೀಲ್, ಕುಡಚಿ ಶಾಸಕ ಪಿ.ರಾಜೀವ ಅಭಯ ಪಾಟೀಲ, ಬೀದರ ಸಂಸದ ಭಗವಂತ ಕೊಬಾ, ಮಾಜಿ ಶಾಸಕ ಸಂಜಯ ಪಾಟೀಲ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.