ETV Bharat / state

ರಾಜ್ಯದಲ್ಲಿ ಪೇಮೆಂಟ್ ಸಿಎಂ ಯಾರಾದರೂ ಇದ್ರೆ, ಅದು ಸಿದ್ದರಾಮಣ್ಣ: ನಳೀನ್​ ಕುಮಾರ್ ಕಟೀಲ್​

ರಾಜ್ಯದಲ್ಲಿ ಪೇಮೆಂಟ್ ಸಿಎಂ ಯಾರಾದ್ರೂ ಆಗಿದ್ರೆ, ಅದು ಸಿದ್ದರಾಮಣ್ಣ. ಖರ್ಗೆ, ಪರಮೇಶ್ವರ, ಡಿಕೆಶಿ ಇದ್ದರೂ ಸಹ ನೇರವಾಗಿ ಪೇಮೆಂಟ್ ಮಾಡಿಯೇ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ‌ ಎಂದು ನಳೀನ್​ ಕುಮಾರ್​ ಕಟೀಲ್ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

Naleen Kumar Kateel
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್
author img

By

Published : Sep 28, 2022, 7:43 PM IST

ಬೆಳಗಾವಿ: ಸಿದ್ದರಾಮಯ್ಯ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಸಿದ್ದರಾಮಯ್ಯೋತ್ಸವಕ್ಕೆ 75 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ. ಅಷ್ಟೊಂದು ಹಣ ಸಿದ್ದರಾಮಣ್ಣನವರಿಗೆ ಎಲ್ಲಿಂದ ಬಂತು. ಅವರ ಇತಿಹಾಸ ನೋಡಿದರೆ, ಅವರು ಶ್ರೀಮಂತ ಕುಟುಂಬದಿಂದ ಬಂದಿಲ್ಲ. ಆದ್ರೂ ಇಷ್ಟು ಹಣ ಹೇಗೆ ಖರ್ಚು ಮಾಡಿದ್ರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್​ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡಲಿ: ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದೆ ಅಂತಾ ಸಿದ್ದರಾಮಯ್ಯ ಹೇಳ್ತಾರೆ. ಇದಕ್ಕೆ ಸಿದ್ದರಾಮಯ್ಯ ದಾಖಲೆ ಬಿಡುಗಡೆ ಮಾಡಬೇಕು. ಕೊರೊನಾ ಲಸಿಕೆಯಲ್ಲಿ ದೇಶ ಕ್ರಾಂತಿ ಮಾಡಿದೆ. ಆದರೆ, ಕಾಂಗ್ರೆಸ್ ಕೊರೊನಾ ಲಸಿಕೆಯಲ್ಲಿ ರಾಜಕೀಯ ಮಾಡಿತ್ತು. ಅಂದು ಸಿದ್ದರಾಮಣ್ಣ ಲಸಿಕೆ ಪಡಿಯಬೇಡಿ ಮಕ್ಕಳಾಗಲ್ಲ ಅಂತಾ ಹೇಳಿದ್ರು. ಆದರೆ, ಅವರೇ ಲಸಿಕೆ ಪಡೆದುಕೊಂಡಿದ್ದಾರೆ‌. ರಾತ್ರಿ ಹೊತ್ತಿನಲ್ಲಿ ರಾಹುಲ್ ಗಾಂಧಿ ಲಸಿಕೆ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲ್

ದೇಶದಲ್ಲಿ ಉಗ್ರ ಚಟುವಟಿಕೆ ಹಾಗೂ ಅಶಾಂತಿ ನಿರ್ಮಾಣ ಮಾಡುವ ಸಂಘಟನೆ ಬ್ಯಾನ್ ಆಗಿವೆ. ಇಂತಹ ಸಂಘಟನೆಗಳು ಬ್ಯಾನ್ ಆಗಿರುವುದು ಸಂತೋಷದ ವಿಷಯವಾಗಿದೆ. ಧಾರ್ಮಿಕ ಸಂಘಟನೆಗಳ ಹೆಸರಿನಲ್ಲಿ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದ್ದವು. ಹತ್ಯೆಗಳನ್ನ ಮಾಡುವುದು, ವಿದೇಶದಿಂದ ಹಣ ತಂದು, ಅದನ್ನು ಇಲ್ಲಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿತ್ತು ಎಂದು ಹೇಳಿದರು.

ತನಿಖೆ ಮಾಡಿಯೇ ಈ ನಿರ್ಧಾರ: ಪ್ರಧಾನಿಯವರ ಹತ್ಯೆಗೆ ಯತ್ನ ಮಾಡುವುದು ಸಂಘಟನೆಗಳ ಉದ್ದೇಶ ಆಗಿತ್ತು. ಯಾರೇ ರಾಷ್ಟ್ರ ದ್ರೋಹ ಮಾಡಿದ್ರೂ ಸಹ ಅದಕ್ಕೆ ಜಾತಿ, ಧರ್ಮದ ಕಟ್ಟಳೆಗಳಿಲ್ಲ ಕ್ರಮಕೈಗೊಳ್ಳುತ್ತೇವೆ. ಕಳೆದ 8 ವರ್ಷಗಳ ಅಧ್ಯಯನ ಮಾಡಿ, ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ. ಎಲ್ಲ ರಾಜ್ಯಗಳಲ್ಲೂ ತನಿಖೆ ಮಾಡಿಯೇ ನಿರ್ಧಾರ ಮಾಡಿದೆ ಎಂದರು.

ಪಿಎಫ್ಐ ಬ್ಯಾನ್ ಮಾಡೋಕೆ 8 ವರ್ಷ ಬೇಕಾಯ್ತಾ ಎಂಬ ಪ್ರಿಯಾಂಕಾ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 60 ವರ್ಷ ಆಳ್ವಿಕೆ ಮಾಡಿರುವ ನಿಮಗೇನಾದರೂ ಬ್ಯಾನ್ ಮಾಡೋಕೆ ಸಾಧ್ಯವಾಯ್ತಾ?. ಈ ದೇಶದಲ್ಲಿ ಭಯೋತ್ಪಾದನೆ ಸೃಷ್ಟಿ ಮಾಡಿದ್ದೆ ಕಾಂಗ್ರೆಸ್. ಮತ ಬ್ಯಾಂಕ್​ಗೋಸ್ಕರ ಸಿದ್ದರಾಮಯ್ಯ ಎಲ್ಲರಿಗೂ ಬಿ ರಿಪೋರ್ಟ್ ಹಾಕಿದ್ದರು. ಹಲವರು ವಿಧ್ವಂಸಕ ಕೃತ್ಯ ಎಸಗಿದವರಿಗೆ ಬಿ ರಿಪೋರ್ಟ್ ಹಾಕಲಾಗಿತ್ತು ಎಂದು ಕಿಡಿಕಾರಿದರು.

ಇದನ್ನೂ ಓದಿ: ಪಿಎಫ್ಐ ಸಂಘಟನೆ ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ: ಕಟೀಲ್​

ಎಲ್ಲ ಸಂಘಟನೆಗಳು ಬ್ಯಾನ್ ಅಗಬೇಕು ಎಂಬ ಯು ಟಿ ಖಾದರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಯು ಟಿ ಖಾದರ್ ಅವರೇ ನಮ್ಮ ಬಳಿ ಬಂದು ಕಣ್ಣೀರು ಹಾಕಿದ್ದರು. ಎಸ್​ಡಿಪಿಐ, ಪಿಎಫ್ಐ ಸಂಘಟನೆ ಬ್ಯಾನ್ ಮಾಡಿ ಅಂತಾ. ಅದಕ್ಕೆ ನನ್ನ ಬಳಿ ಸಾಕ್ಷಿ, ಆಧಾರಗಳಿವೆ.ಎಸ್​ಡಿಪಿಐ ಹಾಗೂ ಪಿಎಫ್ಐ ಕಾರ್ಯಕರ್ತರು ಯು ಟಿ ಖಾದರ್ ಅವರನ್ನೇ ಹತ್ಯೆ ಮಾಡಲು ಮುಂದಾಗಿದ್ದರು.‌ ಧಾರ್ಮಿಕ ಸಂಘಟನೆಯ ಹೆಸರಿನಲ್ಲಿ ನಾವು ಯಾರನ್ನೂ ವಿರೋಧಿಸಿಲ್ಲ ಎಂದರು.

ಭಾರತ ಜೋಡೋ ಯಾತ್ರೆಯಲ್ಲಿ ಪೇ ಸಿಎಂ ಪೋಸ್ಟರ್ ಪ್ರದರ್ಶ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ರಾಜ್ಯದಲ್ಲಿ ಪೇಮೆಂಟ್ ಸಿಎಂ ಯಾರಾದ್ರೂ ಆಗಿದ್ರೆ, ಅದು ಸಿದ್ದರಾಮಣ್ಣ. ಖರ್ಗೆ, ಪರಮೇಶ್ವರ, ಡಿಕೆಶಿ ಇದ್ದರೂ ಸಹ ನೇರವಾಗಿ ಪೇಮೆಂಟ್ ಮಾಡಿಯೇ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ‌ ಎಂದು ಸಿದ್ದರಾಮಯ್ಯಗೆ ಕಟೀಲ್​ ತಿರುಗೇಟು ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.