ಅಥಣಿ: ಜನ್ಮ ದಿನದಂದು ಮೈಸೂರು ಮೃಗಾಲಯದ ಬಿಳಿ ನವಿಲು ದತ್ತು ಪಡೆದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ವಿಭಿನ್ನವಾಗಿ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡರು.

ಒಂದು ವರ್ಷಗಳ ಕಾಲ ಮೈಸೂರು ಮೃಗಾಲಯದ ಬಿಳಿ ಬಣ್ಣದ ನವಿಲು ದತ್ತು ಪಡೆದು, ಅದಕ್ಕೆ ಬೇಕಾಗುವ ಆಹಾರ ಪದಾರ್ಥಗಳ ನಿರ್ವಹಣೆ ವೆಚ್ಚವನ್ನು ಭರಸಲು ಮಂಗಸೂಳಿ ಕುಟುಂಬ ನಿರ್ಧರಿಸಿದೆ.

ಪ್ರಕೃತಿಯನ್ನು ನಾವು ಕಾಪಾಡಿದರೇ, ನಮ್ಮನ್ನು ಅದು ಕಾಪಾಡುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಕಾಡು, ಪ್ರಾಣಿಗಳು ಅಳಿವಿನ ಅಂಚು ತಲುಪಿವೆ. ನಾವೆಲ್ಲರೂ ಅವುಗಳ ರಕ್ಷಣೆಗೆ ನಿಲ್ಲಬೇಕಿದೆ ಎಂದು ಮದುಶ್ರೀ ಮಂಗಸೂಳಿ ಹೇಳಿದರು.
ಇದೇ ದಿನ ಅಥಣಿ ವಿಧಾನಸಭಾ ಕ್ಷೇತ್ರದ ಹಲವಾರು ಕಡೆ ಕೊರೊನಾ ಸೋಂಕು ತಡೆಗಟ್ಟಲು ಸಾವಿರಾರು ಮಾಸ್ಕ್, ಸ್ಯಾನಿಟೈಸರ್ಗಳನ್ನು ಕೂಡಾ ವಿತರಿಸಿದರು.