ಬೆಳಗಾವಿ: ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ಎನ್ಸಿಪಿ ಶಾಸಕ ರಾಜೇಶ್ ಪಾಟೀಲ್ ಮತ್ಮೊಮ್ಮೆ ಉದ್ಧಟನದ ಹೇಳಿಕೆ ನೀಡಿ ಕನ್ನಡಿಗರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ.
ಎಂಇಎಸ್ ಯುವ ಘಟಕದಿಂದ ಬೆಳಗಾವಿಯಲ್ಲಿ ನಡೆದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಶಾಸಕ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಇಲ್ಲಿಂದ ಶಾಸಕನಾಗುವ ಮಹದಾಸೆ ನನ್ನದಿದೆ ಎಂದಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತಾದ ತೀರ್ಪು ಮುಂದಿನ ಐದು ವರ್ಷಗಳಲ್ಲಿ ಹೊರಬರಲಿದೆ. ಆಗ ಬೆಳಗಾವಿ ಸೇರಿದಂತೆ ಗಡಿಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರುತ್ತವೆ. ನಾನೇ ಬೆಳಗಾವಿಯಿಂದ ಸ್ಪರ್ಧಿಸಿ ಶಾಸಕನಾಗುವೆ ಎಂಬ ಅತಿರೇಖದ ಹೇಳಿಕೆ ನೀಡಿದ್ದು, ಕನ್ನಡ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.