ಚಿಕ್ಕೋಡಿ: ನಾನು ನನ್ನ ಜೀವನದಲ್ಲಿ ಅಹಿಂಸಾ ತತ್ತ್ವಗಳನ್ನು ಸಮಾಜದ ಎಲ್ಲರಿಗೆ ಸಾರಿ ಹೇಳುತ್ತಾ, ವಿಶ್ವದ ಪ್ರತಿಯೊಂದು ಜೀವಿಗೆ ಸುಖ ಶಾಂತಿ ನೀಡಲೆಂದು ಪ್ರಾರ್ಥಿಸುತ್ತಾ ಬಂದಿದ್ದೇನೆ. ನನ್ನ ಜೀವನದ ಅಂತಿಮ ಯಾತ್ರೆ ಪ್ರಾರಂಭವಾಗಿದೆ. ನನ್ನ ಶರೀರ ಕ್ಷೀಣವಾಗುತ್ತಿದೆ. ಆದರೆ, ನನ್ನಲಿರುವ ಆತ್ಮಶಕ್ತಿ ಕ್ಷೀಣವಾಗಿಲ್ಲ ಎಂದು ರಾಷ್ಟ್ರಸಂತ ಆಚಾರ್ಯ ಚಿನ್ಮಯಸಾಗರ ಮುನಿ ಮಹಾರಾಜರು ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದ ಶಾಂತಿಸಾಗರ ಜೈನ ಆಶ್ರಮದಲ್ಲಿ ಮುನಿ ಮಹಾರಾಜರು ಕಳೆದ ಏಳು ದಿನಗಳಿಂದ ಆಹಾರ ತೇಜಿಸಿ, ಸ್ವಲ್ಪ ಜಲ ಪ್ರಾಶಣ ಅಷ್ಟೇ ಮಾಡುತ್ತಿದ್ದಾರೆ. ಅವರ ಶರೀರ ಕ್ಷೀಣವಾಗುತ್ತಿದೆ. ಆದರೂ ಅವರಲ್ಲಿ ಶ್ರಾವಕರಿಗೆ ಪ್ರವಚನ ಮುಖಾಂತರ ಶಾಂತಿ ಸಂದೇಶ ನೀಡುವುದು ಸ್ಥಗಿತಗೊಂಡಿಲ್ಲ. ಈಗಲೂ ಅವರು ತಮ್ಮ ಆಸನದ ಮೇಲೆ ಉರುಳಿ ಅಲ್ಲಿಂದಲೇ ಸಂದೇಶ ನೀಡುತ್ತಿದ್ದಾರೆ.
ಈ ಸಂದೇಶವನ್ನು ಆಲಿಸಿ ಪುಣ್ಯ ಸಂಪಾದಿಸಲು ಕರ್ನಾಟಕ, ಮಹಾರಾಷ್ಟ್ರ, ಛತ್ತೀಸಗಢ, ರಾಜಸ್ಥಾನ, ಮಧ್ಯಪ್ರದೇಶ, ಮುಂತಾದ ರಾಜ್ಯಗಳಿಂದ ಶ್ರಾವಕರು ಆಗಮಿಸಿ ಮುನಿಜಿಯವರ ಅಂತಿಮ ದರ್ಶನ ತೆಗೆದುಕೊಳ್ಳುತ್ತಿದ್ದಾರೆ.
ಸಂಸಾರದ ನನ್ನ ಅಂತಿಮ ಯಾತ್ರೆ ಪ್ರಾರಂಭಗೊಳಿಸಿದ್ದೇನೆ. ನನಗೆ ಪ್ರತಿಯೊಂದು ಕ್ಷೇತ್ರದಿಂದ ತಮ್ಮಿಂದಾದ ಸಹಾಯ ನೀಡಿದ್ದೀರಿ. ನಿಮ್ಮ ಬಗ್ಗೆ ನನ್ನಲ್ಲಿ ಯಾವುದೇ ದ್ವೇಷ ಇಲ್ಲಾ. ನಾನು ಸಮಾಜಕ್ಕಾಗಿ ಮಾಡಿರುವ ಎಲ್ಲ ಸೇವೆ ನನ್ನ ಖುಷಿಯಿಂದ ಮಾಡಿದ್ದೇನೆ ಎಂದು ಹೇಳಿದರು. ಮಹರಾಜರ ದರ್ಶನ ಪಡೆಯಲು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಶ್ರಾವಕರು ಬರುತ್ತಿದ್ದಾರೆ.