ETV Bharat / state

ಸಿದ್ದರಾಮಯ್ಯ ನಾಲಿಗೆಗೆ ಕಂಟ್ರೋಲ್ ಇಲ್ಲ: ಸಂಸದೆ ಶೋಭಾ ಕರಂದ್ಲಾಜೆ - ಸಂಸದೆ ಶೋಭಾ ಕರಂದ್ಲಾಜೆ ಲೇಟೆಸ್ಟ್​ ಸುದ್ದಿ

ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಬೆಳಗಾವಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ. ಮಹಿಳೆಯರಿಗೆ ಅನುಕಂಪ ಬೇಕಾಗಿಲ್ಲ, ಧೈರ್ಯ ಇದ್ದರೆ ಸಾಕು ಎಂದು ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.

MP Shobha Karandlaje
ಬೆಳಗಾವಿ
author img

By

Published : Apr 14, 2021, 4:54 PM IST

ಬೆಳಗಾವಿ: ಜಿಲ್ಲೆಯ ಎಲ್ಲ ಪ್ರದೇಶಗಳಲ್ಲಿ ಭಾರತೀಯ ಜನತಾ ಪಾರ್ಟಿ ಪರವಾದ ವಾತವರಣವಿದ್ದು, ಒನ್ ಸೈಡ್ ಚುನಾವಣೆ ಆಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಬೆಳಗಾವಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಸಂಸದೆ ಶೋಭಾ ಕರಂದ್ಲಾಜೆ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಾವು ಪ್ರಚಾರದ ಕೊನೆಯ ಹಂತಕ್ಕೆ ಬಂದಿದ್ದೇವೆ. ನಾಳೆ ಪ್ರಚಾರ‌ ಕೊನೆಗೊಳ್ಳಲಿದೆ. ನಾನು ಹೋಗಿರುವ ಎಲ್ಲ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಪರವಾದ ವಾತವರಣವಿದ್ದು, ಒನ್ ಸೈಡ್ ಚುನಾವಣೆ ಆಗಲಿದೆ ಎಂದರು.

ನರೇಂದ್ರ ಮೋದಿ‌ ಸರ್ಕಾರಕ್ಕೆ ಇರುವ ಬೆಂಬಲ, ಜನರು ಸುರೇಶ ಅಂಗಡಿಯವರ ಮೇಲಿಟ್ಟ ಪ್ರೀತಿ, ಮಂಗಳಾ ಅಂಗಡಿ ಅವರನ್ನು ಗೆಲ್ಲಿಸಬೇಕೆಂಬ ಹುಮ್ಮಸ್ಸಿನಿಂದ ಮಂಗಳಾ ಅಂಗಡಿ ಅವರು 6 ಲಕ್ಷಕ್ಕೂ ಹೆಚ್ಚಿನ ಅಂತರದ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಸುರೇಶ ಅಂಗಡಿಯವರು ಕಂಡಿರುವ ಕನಸು ಪೂರ್ಣಗೊಳಿಸಲಿಕ್ಕೆ ಮಂಗಳಾ ಅಂಗಡಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಬಲ‌ ನೀಡಲಿದ್ದಾರೆ. ಇದಲ್ಲದೇ ಬೆಳಗಾವಿ ಕ್ಷೇತ್ರದಲ್ಲಿ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರದಲ್ಲಿ ಮಾತನಾಡಿದ ಅವರು, ಪಾಪ ಆ ಹೆಣ್ಣುಮಗಳನ್ನ ವಿಧಾನಸಭೆಗೆ ಕಳಿಸಿ‌ ಏನು ಮಾಡ್ತೀರಿ ಅಂತ ನಾವು ಬಸವ ಕಲ್ಯಾಣದಲ್ಲಿ ಕೇಳಬಹುದು. ಆದ್ರೆ ನಾವು ಹಾಗೆ ಕೇಳೋದಿಲ್ಲ. ಕಾರಣ, ಹೆಣ್ಣುಮಗಳು ಅಂತ ಹಗುರ ಮಾತನಾಡುವವರಿಗೆ ಈ‌ ದೇಶದಲ್ಲಿ ಹಲವು ನಾಯಕಿಯರು ಉತ್ತರ ಕೊಟ್ಟಿದ್ದಾರೆ. ಆದರೆ, ಸಿದ್ದರಾಮಯ್ಯ ನಾಲಿಗೆನೇ ಹಾಗೆ ಅದಕ್ಕೆ ಕಂಟ್ರೋಲ್ ಇಲ್ಲ ಎಂದು ಕುಟುಕಿದರು.

ಮಹಿಳೆಯರಿಗೆ ಅನುಕಂಪ ಬೇಕಾಗಿಲ್ಲ. ಅವರಿಗೆ ಧೈರ್ಯ ಬೇಕು. ಮುನ್ನುಗುವ ಸ್ವಭಾವ ಇರಬೇಕು. ಮಂಗಳಾ ಅಂಗಡಿ ಅವರು ಮುಂಬರುವ ಎರಡ್ಮೂರು ವರ್ಷಗಳಲ್ಲಿ ಎಲ್ಲರನ್ನು ಮೀರಿಸುವ ಲೋಕಸಭಾ ಸದಸ್ಯೆ ಆಗಲಿದ್ದಾರೆ. ಹೀಗಾಗಿ ಕಾಂಗ್ರೆಸ್​ನ ಅನುಕಂಪ ನಮಗೆ ಬೇಕಾಗಿಲ್ಲ. ನಮಗೆ ನರೇಂದ್ರ ಮೋದಿಯವರ ಹೆಸರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳು ನಮ್ಮ ಅಭ್ಯರ್ಥಿ ಗೆಲುವಿಗೆ ಸಹಕಾರಿ ಆಗಲಿವೆ ಎಂದು ತಿರುಗೇಟು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.